MALENADUTODAY.COM | SHIVAMOGGA | #KANNADANEWSWEB
ಶಿವಮೊಗ್ಗದಲ್ಲಿ ಚುನಾವಣೆ ಸಿದ್ದತೆಯ ನಡುವೆ ಅಬಕಾರಿ ಇಲಾಖೆ ಅಕ್ರಮ ಸಾರಾಯಿ ಅಡ್ಡೆಗಳ ಬಗ್ಗೆ ಅಲರ್ಟ್ ಆದಂತಿದೆ. ಇದಕ್ಕೆ ಪೂರಕ ಎಂಬಂತೆ, ಶಿವಮೊಗ್ಗ ಅಬಕಾರಿ ಉಪ ಆಯುಕ್ತರು ಕ್ಯಾಪ್ಟನ್ ಅಜಿತ್ ಕುಮಾರ್ ನಿರ್ದೇಶನದಂತೆ ದಾಳಿ ನಡೆಸಿ ಕಳ್ಳಭಟ್ಟಿ ವಶಕ್ಕೆ ಪಡೆಯಲಾಗಿದೆ
READ | ಕೋವಿಡ್ ಟೈಂನಲ್ಲಿ ರಜೆ ಕೇಳಿ ಹೋಗಿದ್ದ ಕಾನ್ಸ್ಟೇಬಲ್ ಕಾಣೆ! ಮಾಳೂರು ಪೊಲೀಸ್ ಸ್ಟೇಷನ್ನಲ್ಲಿ ದಾಖಲಾಯ್ತು ಕೇಸ್
ಶಿಕಾರಿಪುರ ವಲಯದ ಅಬಕಾರಿ ನಿರೀಕ್ಷಕರಾದ ರಮೇಶ ಕೆ. ಹೆಚ್ ಈ ದಾಳಿ ನಡೆಸಿದ್ದು, ಮಳವಳ್ಳಿ ತಾಂಡಾದಲ್ಲಿ ಟೋಪಿಯನಾಯ್ಕ ಬಿನ್ ಪೀತನಾಯ್ಕ ಎಂಬುವವರ ವಾಸದ ಮನೆಯಲ್ಲಿ 01 ಲೀಟರ್ ಕಳ್ಳಭಟ್ಟಿ ಸಾರಾಯಿ ಹಾಗೂ 30 ಲೀಟರ್ ಬೆಲ್ಲದ ಕೊಳೆಯನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಅಬಕಾರಿ ಕಾಯ್ದೆ ಅಡಿಯಲ್ಲಿ ಆರೋಪಿತನ ವಿರುದ್ಧ ಮೊಕದ್ದಮೆಯನ್ನು ದಾಖಲಿಸಲಾಗಿದೆ. ಇನ್ನೂ ದಾಳಿಯಲ್ಲಿ ಅಬಕಾರಿ ಉಪ ನಿರೀಕ್ಷಕರಾದ ಚಂದ್ರಪ್ಪ ಎಸ್. ಡಿ, ಸಿಬ್ಬಂದಿಗಳಾದ ಸಂತೋಷ್, ಮಂಜುನಾಥ್, ಹನುಮಂತಪ್ಪಹಾಗೂ ಕನಕಪ್ಪರಿದ್ದರು
