ಇವತ್ತು ನಾಳೆ ಶಿವಮೊಗ್ಗದ ಈ ಭಾಗದಲ್ಲಿ ಪವರ್​ ಕಟ್! ಶಿಕಾರಿಪುರದ ಜನರಿಗೆ ಮಹತ್ವ ಸೂಚನೆ ನೀಡಿದ ಮೆಸ್ಕಾಂ

Power cut in this part of Shimoga today and tomorrow! Mescom issues importance warning to people of Shikaripura

ಇವತ್ತು ನಾಳೆ ಶಿವಮೊಗ್ಗದ ಈ ಭಾಗದಲ್ಲಿ ಪವರ್​ ಕಟ್! ಶಿಕಾರಿಪುರದ ಜನರಿಗೆ ಮಹತ್ವ ಸೂಚನೆ ನೀಡಿದ ಮೆಸ್ಕಾಂ
ಇವತ್ತು ನಾಳೆ ಶಿವಮೊಗ್ಗದ ಈ ಭಾಗದಲ್ಲಿ ಪವರ್​ ಕಟ್! ಶಿಕಾರಿಪುರದ ಜನರಿಗೆ ಮಹತ್ವ ಸೂಚನೆ ನೀಡಿದ ಮೆಸ್ಕಾಂ

ಫೆ.16 ಮತ್ತು 17 ರಂದು ವಿದ್ಯುತ್ ವ್ಯತ್ಯಯ (powercut)

ಶಿವಮೊಗ್ಗ  ನಗರ ಉಪವಿಭಾಗದ -1 ರ  ಫೀಡರ್ - 3, 11 ಕೆ.ವಿ ಮಾರ್ಗ ಮುಕ್ತತೆ ನೀಡುವುದರಿಂದ ಫೆಬ್ರವರಿ 16 ಮತ್ತು 17 ರ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಪರಿವರ್ತಕ ಅಳವಡಿಸುವ ಕಾಮಗಾರಿ ಇರುವ ಕಾರಣ ವಿದ್ಯಾನಗರ 6ನೇ ಮುಖ್ಯ ರಸ್ತೆ, ಸುಭಾಶ್ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಅಪರಿಚಿತ ವ್ಯಕ್ತಿ ಸಾವು

ಸಾಗರ ತಾಲ್ಲೂಕಿನ ಕರ್ಕಿಕೊಪ್ಪ ಗ್ರಾಮದ ಅನಾನಸ್ ಪ್ಲಾಟಿನ ಶೆಡ್‍ನಲ್ಲಿ ಫೆ.10 ರಂದು ಸುಮಾರು 50 ರಿಂದ 55 ವರ್ಷಧ ಅನಾಮಧೇಯ ವ್ಯಕ್ತಿಯು ಮೃತಪಟ್ಟಿರುತ್ತಾನೆ. ಮೃತ ವ್ಯಕ್ತಿಯು 5.2 ಅಡಿ ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿರುತ್ತಾನೆ. ಈತನ ವಾರಸುದಾರರು ಯಾರಧರೂ ಇದ್ದಲ್ಲಿ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ದೂ.ಸಂ: 08183-226194, 9480803361 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ಸಾರ್ವಜನಿಕರಿಗೆ ಸೂಚನೆ (shikaripura)

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಶಿಕಾರಿಪುರ ತಾಲೂಕಿನ ಬಳ್ಳಿಗಾವೆ ಜೋಡಿ ಪ್ರಸರಣ ಮಾರ್ಗದ ಗೋಪುರದ ಖಾಲಿ ಇರುವ ಕ್ರಾಸ್ ಆರಂನ್ನು ಬಳಸಿಕೊಂಡು 2ನೇ ಮಾರ್ಗವನ್ನು ಆನವಟ್ಟಿಯ ಉಪ ವಿದ್ಯುತ್ ಕೇಂದ್ರದವರೆಗೆ ವಿಸ್ತರಿಸಿ, 110/11ಕೆ.ವಿ. ನಿರ್ಮಿಸುವ ಕಾಮಗಾರಿಯು ಪೂರ್ಣಗೊಂಡಿದೆ. ಈ ಮಾರ್ಗವು ಹುರುಳಿ, ಚಿಕ್ಕಚೌಟಿ, ಕುಣಿತಪ್ಪ, ಬಲವಂತನಕೊಪ್ಪ, ಶಿವಪುರ, ತಾಳಗುಂದ ಹಾಗೂ ಬಳ್ಳಿಗಾವಿಯಿಂದ ಬಾರಂಗಿ, ಮತ್ತು ಬಾರಂಗಿಯಿಂದ ಆನವಟ್ಟಿಯವರೆಗೆ ಬರುವ ಎಲ್ಲಾ ಗ್ರಾಮಗಳ ರೈತರ ಜಮೀನಿನಲ್ಲಿ ಹಾದುಹೋಗಿದ್ದು

, ಫೆಬ್ರವರಿ 16ರಂದು ಅಥವಾ ನಂತರದ ದಿನಗಳಲ್ಲಿ ಯಾವುದೇ ಕ್ಷಣದಲ್ಲಾದರೂ ಮಾರ್ಗಕ್ಕೆ ಚಾಲನೆ ನೀಡಲಾಗುವುದು. ಆದ್ದರಿಂದ ಸಾರ್ವಜನಿಕರು ಈ ಮಾರ್ಗದಲ್ಲಿ ಬರುವ  ಮರಗಳನ್ನು ಹತ್ತುವುದಾಗಲೀ, ದನಕರುಗಳನ್ನು ಕಟ್ಟುವುದಾಗಲೀ, ವಾಹಕಗಳಿಗೆ ತಗುಲುವಂತೆ ವಸ್ತುಗಳನ್ನು ಎಸೆಯುವುದಾಗಲೀ ನಿಷೇಧಿಸಿದೆ. ಈ ಕೃತ್ಯದಿಂದ ಉಂಟಾಗುವ ಪರಿಣಾಮಗಳಿಗೆ ಸದರಿಯವರೇ ನೇರ ಹೊಣೆಗಾರರಾಗಿರುತ್ತಾರೆ ಹಾಗೂ ಅವಘಡಕ್ಕೆ ಯಾವುದೇ ಪರಿಹಾರವನ್ನು ನೀಡಲಾಗುವುದಿಲ್ಲ ಎಂದು ಕಾರ್ಯನಿರ್ವಾಹಕ ಇಂಜಿನಿಯರ್ ಶಿವಮೊಗ್ಗ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com