ಮುರಿದು ಬಿದ್ದ ನಿಶ್ಚಿತಾರ್ಥ! ಬೇಸರಗೊಂಡು ವಿಷ ಸೇವಿಸಿದ್ದ ಯುವಕ ಸಾವು!

Young man dies after consuming poison after his engagement was cancelled

ಮುರಿದು ಬಿದ್ದ ನಿಶ್ಚಿತಾರ್ಥ! ಬೇಸರಗೊಂಡು ವಿಷ ಸೇವಿಸಿದ್ದ ಯುವಕ ಸಾವು!
ಮುರಿದು ಬಿದ್ದ ನಿಶ್ಚಿತಾರ್ಥ! ಬೇಸರಗೊಂಡು ವಿಷ ಸೇವಿಸಿದ್ದ ಯುವಕ ಸಾವು!

KARNATAKA NEWS/ ONLINE / Malenadu today/ May 23, 2023 SHIVAMOGGA NEWS

ಶಿಕಾರಿಪುರ/ ಆಗಿದ್ದ ನಿಶ್ಚಿತಾರ್ಥ ಕ್ಯಾನ್ಸಲ್ ಆದ ಕಾರಣಕ್ಕೆ ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಇವತ್ತು ಸಾವನ್ನಪ್ಪಿದ್ಧಾನೆ. ಕಳೆದ ಮೇ 10 ರಂದು ಈತ ವಿಷ ಸೇವಿಸಿದ್ದ.  ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಮಾಸೂರಿನ ನಿವಾಸಿ ಅಣ್ಣಪ್ಪ ಎಂಬಾತನಿಗೆ ವರ್ಷದ ಹಿಂದೆ ನಿಶ್ಚಿತಾರ್ಥವಾಗಿತ್ತು. ಆದರೆ ಮದುವೆಗೆ ಹುಡುಗಿಯ ತಂದೆ ಒಪ್ಪದ ನಿಶ್ಚಿತಾರ್ಥ ಮುರಿದುಬಿದ್ದಿತ್ತು. ಈ ಕಾರಣಕ್ಕೆ ಬೇಸರಗೊಂಡಿದ್ದ ಯುವಕ ಕಳೆದ ಮೇ 10 ರಂದು ವಿಷ ಸೇವಿಸಿದ್ದ. ತಕ್ಷಣವೇ ಆತನನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಶಿವಮೊಗ್ಗದ ಮೆಗ್ಗಾನ್​  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವತ್ತು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.  ಪ್ರ

ಪ್ರಕರಣ ಎರಡು

ಇನ್ನೊಂದಡೆ ತೀರ್ಥಹಳ್ಳಿಯ ಕೋಣಂದೂರಿನಲ್ಲಿ‌ ಕೋಳಿ ಫಾರಂನಲ್ಲಿ‌ ಕೆಲಸ‌ಮಾಡುತ್ತಿದ್ದ ಯುವಕ ನೊಬ್ಬ ಆತ್ಮಹತ್ಯೆ ,ಯತ್ನಿಸಿದ್ದ ...ಮೂರು ದಿನಗಳ ಹಿಂದೆ‌ ನಡೆದ ಘಟನೆಯಲ್ಲಿ ಅಸ್ವಸ್ಥನಾಗಿದ್ದ ಆದರ್ಶ ಎಂಬಾತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ...

ಮೃತ ಆದರ್ಶ

ಮಳೆಗೆ ಗಾಳಿಗೆ ಧರೆಗುರುಳಿದ ಮರ! ಒಮಿನಿ ಜಖಂ!

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಮಳೆ ಗಾಳಿಯ ಅಬ್ಬರದಲ್ಲಿ ಮರವೊಂದು ಒಮಿನಿ ವಾಹನದ ಮೇಲೆ ಬಿದ್ದಿದೆ. ಮನೆ ಮುಂದಿನ ಅಂಗಳದಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ದೊಡ್ಡಮರವೊಂದು ಬಿದ್ದಿದೆ. ಕುಂಚೇಬೈಲ್​ ಗ್ರಾಮದಲ್ಲಿ ನಡೆದ ಘಟನೆ ಇದಾಗಿದ್ದು, ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಉಂಟಾಗಿಲ್ಲ.  ಇಲ್ಲಿನ ನಿವಾಸಿ ಪ್ರದೀಪ್ ಎಂಬವರಿಗೆ ಸೇರಿದ ಕಾರು ಇದಾಗಿದ್ದು ಊಟಕ್ಕೆ ಮನೆಗೆ ಬಂದ ವೇಳೆ ಘಟನೆ ನಡೆದಿದೆ.  

ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾದ ಬಿ.ವೈ ವಿಜಯೇಂದ್ರ! ಬಿಎಸ್​​ವೈ ಫೋನ್ ಮಾಡಿದ್ರು ಎಂದ ಮುಖ್ಯಮಂತ್ರಿ!

ಬೆಂಗಳೂರು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪನವರ ಪುತ್ರ ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ ವಿಜಯೇಂದ್ರ ರವರು ಇವತ್ತು ಸಿಎಂ ಸಿದ್ದರಾಮಯ್ಯ ರವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. 

ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆ ಯಲ್ಲಿ ಸ್ಪರ್ಧಿಸಿ ಗೆದ್ದು ಶಾಸಕರಾಗಿರಿವ ವಿಜಯೇಂದ್ರ  ಇಂದು ಪ್ರಮಾಣ ವಚನ ಸ್ವೀಕರಿಸಿದರು. ಇದಕ್ಕೂ ಮೊದಲು ಶಕ್ತಿಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿದರು.  ಬಳಿಕ  ಹುಚ್ಚರಾಯ ಸ್ವಾಮಿ ದೇವರ ಹೆಸರಿನಲ್ಲಿ ಪ್ರಮಾ ಣ ವಚನ ಸ್ವೀಕರಿಸಿದ ಅವರು,  ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರನ್ನು ಭೇಟಿ ಮಾಡಿದರು. 

ಇದೇ ವೇಳೆ ಸಿದ್ದರಾಮಯ್ಯ ಸಹ ವಿಜಯೇಂದ್ರ ಅವರಿಗೆ ಶುಭಾಶಯ ಕೋರಿದರು.ಅಲ್ಲದೆ  ನಿಮ್ಮ ತಂದೆ (ಬಿಎಸ್ ಯಡಿಯೂರಪ್ಪ) ಫೋನ್ ಮಾಡಿದ್ದರು ಎಂದು ವಿಜಯೇಂದ್ರರಿಗೆ ತಿಳಿಸಿದ್ದಾರೆ. ಇಬ್ಬರು ಕೆಲ ಹೊತ್ತು ಮಾತುಕತೆ ನಡೆಸಿದರು.