ಹೋರಿ ಮೆರವಣಿಗೆ ವೇಳೆ ಕಲ್ಲು, ಕತ್ತಿಯಿಂದ ಹೊಡೆದಾಟ! ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್

Fight with stones and swords during bull procession! Case registered at Shikaripura Rural Police Station

ಹೋರಿ ಮೆರವಣಿಗೆ ವೇಳೆ ಕಲ್ಲು, ಕತ್ತಿಯಿಂದ ಹೊಡೆದಾಟ! ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್
Fight with stones and swords during bull procession! Case registered at Shikaripura Rural Police Station

SHIVAMOGGA  |  Jan 25, 2024  | Shikaripura Rural Police Station ಶಿವಮೊಗ್ಗ ಜಿಲ್ಲೆ  ಶಿಕಾರಿಪುರ ತಾಲೂಕಿನ ಚುಂಚಿನಕೊಪ್ಪ ತಾಂಡಾದಲ್ಲಿ ಹೋರಿ ಹಬ್ಬದ ಮೆರವಣಿಗೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಮಾತಿನ ಚಕಮಕಿ ನಡೆದು ಪರಸ್ಪರ ಹೊಡೆದಾಟವಾಗಿದೆ.. ಘಟನೆಯಲ್ಲಿ  ಕಲ್ಲು, ಕಂದಲಿಯಿಂದ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ಗ್ರಾಮದ ಗೂಡ್ಯಾನಾಯ್ಕ ಅವರ ಮನೆ ಮುಂದೆ ಹೋರಿ ಮೆರವಣಿಗೆಯ ಗುಂಪು ಪಟಾಕಿ ಸಿಡಿಸಿದ್ದು ಘಟನೆಗೆ ಕಾರಣವಾಗಿತ್ತಯ. 

 ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್ /Shikaripura Rural Police Station

ಮನೆಯ ಮಾಲೀಕರು, ಪಟಾಕಿ ಜೋರು ಸದ್ದು ಮಾಡ್ತಿದೆ,  ಮನೆಯಲ್ಲಿ ಸಣ್ಣ ಮಕ್ಕಳು ಇದ್ದಾರೆ ಪಟಾಕಿ ಹೊಡೆದು ಗಲಾಟೆ ಮಾಡಬೇಡಿ ಎಂದಿದ್ದಾರೆ. ಈ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಪರಸ್ಪರ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ. ಇನ್ನೂ ಪ್ರಕರಣ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್ ಪೊಲೀಸರು ಕೇಸ್ ದಾಖಲಿಸಿದ್ದಾರೆ