ಹೋರಿಹಬ್ಬದಲ್ಲಿ ಹೋರಿ ತಿವಿದು ಯುವಕ ಸಾವು! ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್ ಲಿಮಿಟ್ಸ್ ನಲ್ಲಿ ಘಟನೆ
Youth dies after being hit by a bull in Horihabba The incident took place at Shikaripura Rural Police Station Limits.
SHIVAMOGGA | Jan 22, 2024 | ಶ್ರೀರಾಮಮಂದಿರ ಸಂಭ್ರಮದ ನಡುವೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ತರಲಘಟ್ಟದಿಂದ ದುಃಖದ ಸುದ್ದಿಯೊಂದು ಹೊರಬಿದ್ದಿದೆ. ಹೋರಿ ಹಬ್ಬದಲ್ಲಿ ಪಾಲ್ಗೊಂಡಿದ್ದ ಯುವಕನೊಬ್ಬ ಸಾವನ್ನಪ್ಪಿದ್ದಾನೆ.
ಶಿಕಾರಿಪುರ ಹೋರಿಹಬ್ಬ
ತರಲಘಟ್ಟದಲ್ಲಿ ನಡೆದ ಹೋರಿಹಬ್ಬ ದಲ್ಲಿ ಹೋರಿಯೊಂದು ತಿವಿದ ಪರಿಣಾಮ ಯುವಕ ಸಾವನ್ನಪ್ಪಿದ್ದಾನೆ. ಮೃತನ ಹೆಸರು ರಾಮು, ವಯಸ್ಸು 26 , ಶಿಕಾರಿಪುರ ತಾಲ್ಲೂಕಿನ ಈಸೂರು ಗ್ರಾಮದವನು.
ಈತ ಹೋರಿಹಬ್ಬವನ್ನ ನೋಡಲು ತರಲಘಟ್ಟಕ್ಕೆ ಆಗಮಿಸಿದ್ದ . ಈ ವೇಳೆ ಹೋರಿಯೊಂದು ಆತನಿಗೆ ತಿವಿದಿದೆ. ಘಟನೆಯಲ್ಲಿ ಆತ ತೀವ್ರವಾಗಿ ಗಾಯಗೊಂಡಿದ್ದ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯ್ತು. ಆದರೆ ಶಿಕಾರಿಪುರ ಸರ್ಕಾರಿ ಆಸ್ಪತ್ರೆ ಗೆ ಹೋಗುವಷ್ಟರಲ್ಲಿ ಯುವಕ ಸಾವನ್ನಪ್ಪಿದ್ದ. ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಸ್ಟೇಷನ್ ಪೊಲೀಸರು ಪರಿಶೀಲನೆ ನಡೆಸ್ತಿದ್ದಾರೆ.