Bs yadiyurappa/ ನೋವಾಗಿದೆ/ ಯಾರನ್ನು ಬಂಧಿಸಬೇಡಿ/ ಶಿಕಾರಿಪುರದಲ್ಲಿರುವ ಮನೆ ಮೇಲೆ ನಡೆದ ದಾಳಿಗೆ ಬಿಎಸ್​​ ಯಡಿಯೂರಪ್ಪನವರ ಮೊದಲ ಪ್ರತಿಕ್ರಿಯೆ

BS Yediyurappa's first reaction to the attack on his house in Shikaripura

Bs yadiyurappa/  ನೋವಾಗಿದೆ/ ಯಾರನ್ನು ಬಂಧಿಸಬೇಡಿ/ ಶಿಕಾರಿಪುರದಲ್ಲಿರುವ  ಮನೆ ಮೇಲೆ ನಡೆದ ದಾಳಿಗೆ ಬಿಎಸ್​​ ಯಡಿಯೂರಪ್ಪನವರ ಮೊದಲ ಪ್ರತಿಕ್ರಿಯೆ
Bs yadiyurappa/ ನೋವಾಗಿದೆ/ ಯಾರನ್ನು ಬಂಧಿಸಬೇಡಿ/ ಶಿಕಾರಿಪುರದಲ್ಲಿರುವ ಮನೆ ಮೇಲೆ ನಡೆದ ದಾಳಿಗೆ ಬಿಎಸ್​​ ಯಡಿಯೂರಪ್ಪನವರ ಮೊದಲ ಪ್ರತಿಕ್ರಿಯೆ

bs yadiyurappa/  ಶಿಕಾರಿಪುರ ದಲ್ಲಿರುವ ತಮ್ಮ ಮನೆ ಮೇಲೆ ನಡೆದ ಕಲ್ಲೂ ತೂರಾಟದ ಘಟನೆಯ ಬಗ್ಗೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರ ಮಾತುಗಳ ಪ್ರಮುಖ ಅಂಶ ಇಲ್ಲಿದೆ ಓದಿ

ಯಾರನ್ನು ಬಂಧಿಸಬೇಡಿ!

ಬಂಜಾರ ಸಮುದಾಯದ ಕಾರ್ಯಕರ್ತರು ನಮ್ಮ ಮನೆಗೆ ಹಲ್ಲೆ ಮಾಡಿ, ಕಲ್ಲು ತೂರಾಟ ಮಾಡಿದಂತಹ ಘಟನೆಗಳು ನಡೆದಿವೆ. ಈ ಸಂಬಂಧ ಎಸ್​ಪಿ ಮತ್ತು ಡಿಸಿಯವರ ಬಳಿಯಲ್ಲಿ ಮಾತನಾಡಿ, ಬಂಜಾರ ಸಮುದಾಯದವರು ನಮ್ಮ ಜೊತೆ ಇದ್ದಾರೆ. ತಾಂಡಗಳ ಅಭಿವೃದ್ಧಿ ಮಾಡಿದ್ದೇನೆ, ತಪ್ಪು ಗೃಹಿಕೆಯಿಂದ ಈ ಘಟನೆ ಯಾಗಿದೆ. ಯಾರ ವಿರುದ್ಧವೂ ಕ್ರಮ ಕೈಗೊಳ್ಳದೇ ಶಾಂತಿಯುತವಾಗಿ ಅವರನ್ನು ಕಳುಹಿಸಿಕೊಡಬೇಕು, ಅವರನ್ನ ಬಂಧನ ಮಾಡದೇನೆ ಅವರನ್ನ ಕಳುಹಿಸಿಕೊಡಬೇಕು ಎಂದು ತಿಳಿಸಿದ್ದೇನೆ ಎಂದು ಬಿಎಸ್​ ಯಡಿಯೂರಪ್ಪ ಹೇಳಿದ್ಧಾರೆ. 

ಬಿಎಸ್​ವೈ ಮನೆಗೆ ಕಲ್ಲು ತೂರಾಟದ ಘಟನೆ/ ಐವರು ಪೊಲೀಸ್ ಅಧಿಕಾರಿಗಳಿಗೆ ಗಾಯ/ ಎಸ್​ಪಿ & ಡಿಸಿ ಘಟನೆ ಬಗ್ಗೆ ಹೇಳಿದ್ದೇನು? / ಪ್ರತಿಭಟನೆ ನಡೆದಿದ್ದೇಕೆ? ಗಲಾಟೆ ಆಗಿದ್ದೇಗೆ?

ತಪ್ಪುಗೃಹಿಕೆಯಿಂದ ಘಟನೆ ನಡೆದಿದೆ

ಈ ಪ್ರತಿಭಟನೆ ಹಾಗೂ ಅದರ ಬೆನ್ನಲ್ಲೆ ನಡೆದ ಘಟನೆಯಲ್ಲಿ ಯಾರ ಕೈವಾಡ ಇದೆ ಎಂಬುದು ನನಗೆ ಗೊತ್ತಿಲ್ಲ, ನನಗೆ  ಆ ರೀತಿ ಕಾಣುತ್ತಿಲ್ಲ. ತಪ್ಪು ಗೃಹಿಕೆಯಿಂದ ಈ ರೀತಿಯ ಘಟನೆ ಆಗಿಬರಹುದು. ಬಂಜಾರ ಸಮುದಾಯದ ಮುಖಂಡರ ಜೊತೆಗೆ ಈ ಬಗ್ಗೆ ಸಮಾಲೋಚನೆ ಮಾಡುತ್ತೇನೆ. ಅವರ ಸಮಸ್ಯೆಗಳು ಏನೇ ಇದ್ದರೂ ನಮ್ಮೊಂದಿಗೆ ಅವರು ಬಂದು ಚರ್ಚಿಸಲಿ ಇದಕ್ಕೆ ನಾನು ವಿಜಯೇಂದ್ರರವರು ಸಿದ್ದರಿದ್ದೇವೆ ಎಂದಿದ್ಧಾರೆ.

ಕಾನೂನು ಕೈಗೆತ್ತಿಕೊಳ್ಳುವುದು ಶಿಕಾರಿಪುರದ ಗುಣವಲ್ಲ

ನ್ಯಾಯುಯುತವಾಗಿ ಹೋರಾಟ ಮಾಡುವುದು ಶಿಕಾರಿಪುರದ ಜನತೆಯ ಗುಣವಾಗಿದೆ. ಈ ರೀತಿಯಲ್ಲಿ ಕಾನೂನು ಕೈಗೆತ್ತಿಕೊಳ್ಳುವುದು ಅಲ್ಲಿಯ ಗುಣವಲ್ಲ ಮತ್ತು ತರವಲ್ಲ. ನಾಲ್ಕು ಸಲ ಸಿಎಂ ಆಗಲು ಕಾರಣವಾಗಿದ್ದು ಜೊತೆಗಿದ್ದು ಸಹಕರಿಸಿದ್ದು ಬಂಜಾರ ಸಮುದಾಯದವರು, ನಾನು ಸಹ ಅವರ ಅಭಿವೃದ್ಧಿಗೆ ದುಡಿದಿದ್ದೇನೆ. ನಾಳೆ ನಾಡಿದ್ದರಿಂದ ಶಿಕಾರಿಪುರಕ್ಕೆ ಹೋಗಿ, ಅಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡವರ ಜೊತೆಗೆ ಮಾತುಕತೆ ನಡೆಸುತ್ತೇನೆ ಎಂದಿದ್ಧಾರೆ. 

ಯಾವಾಗ ಬೇಕಾದರೂ ಬೇಟಿ ಮಾಡಿ , ಸಿಎಂ ಭೇಟಿಗಾಗಿ ನಾನು ಬರುತ್ತೇನೆ. 

ಯಾವುದೇ ಸಂದರ್ಭದಲ್ಲಿ ಬಂಜಾರ ಸಮುದಾಯದ ಮುಖಂಡರು ಸಿಎಂ ಬಸವರಾಜ ಬೊಮ್ಮಾಯಿಯವರನ್ನ ಭೇಟಿ ಮಾಡಬಹುದು. ಅವರಿಗೆ ಅವಶ್ಯಕತೆ ಇದ್ದರೆ ನಾನು ಸಹ ಸಿಎಂ ಭೇಟಿಗಾಗಿ ಜೊತೆಯಲ್ಲಿ ಬರುತ್ತೇನೆ. ಘಟನೆ ಸಂಬಂಧ ಯಾರನ್ನು ದೂರುವುದಿಲ್ಲ, ಘಟನೆ ಸಂಬಂಧ ಯಾರ ಕೈವಾಡ ಇದೆ ಇಲ್ಲ ಎನ್ನುವುದರ ಬಗ್ಗೆ ತಪ್ಪು ಗೃಹಿಕೆಯಿಂದ ಹೇಳಿಕೆ ನೀಡುವುದು ಬೇಡ, ಇಂತಹ ಘಟನೆಗಳು ಆದಾಗ, ಯಾರು ಮಾಡಿದ್ದು ಎಂದು ಅನುಮಾನ ಪಡುವುದು ಸಹಜ. ಆದರೆ ಈ ಬಗ್ಗೆ ನಾನು ಯಾರನ್ನು ದೂರುವುದಿಲ್ಲ. ಎನೋ ತಪ್ಪು ಗೃಹಿಕೆಯಿಂದ  ಘಟನೆ ನಡೆದಿರಬಹುದು ಎಂದಿದ್ದಾರೆ. 

ಸಹಜವಾಗಿಯೇ ನೋವಾಗುತ್ತದೆ. 

ಬಂಜಾರದ ಸಮುದಾಯದ ಅಭಿವೃದ್ಧಿ ಸಾಕಷ್ಟು ಕೆಲಸ ಮಾಡಿದ್ದೇನೆ, ಶಿಕಾರಿಪುರದ ಅಭಿವೃದ್ಧಿಗಾಗಿ ದುಡಿದಿದ್ದೇನೆ, ಸಹಜವಾಗಿಯೇ ನನ್ನ ಮನೆ ಮೇಲೆ ದಾಳಿ ನಡೆದಾಗ ನೋವಾಗುತ್ತದೆ. ಆದರೆ ನಡೆದ ಘಟನೆ ಬಗ್ಗೆ ಅಲ್ಲಿನ ಮುಖಂಡರ ಜೊತೆ ಮಾತನಾಡುತ್ತೇನೆ. ನಾಳೆ ನಾಡಿದ್ದು ಶಿಕಾರಿಪುರಕ್ಕೆ ಹೋಗಿ ಅಲ್ಲಿ ಪ್ರತಿಭಟನೆಯಲ್ಲಿದ್ದ ನಾಯಕರ ಜೊತೆಗೆ ಮಾತನಾಡುತ್ತೇನೆ ಎಂದ ಬಿಎಸ್​ವೈ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ತಮ್ಮ ಪಕ್ಷ ಬಿಜೆಪಿ ನಾಯಕರ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ. ಊರಿಗೆ ಹೋಗಿ ಮಾತನಾಡಿ ಚರ್ಚೆ ಮಾಡಿ ಸಮಸ್ಯೆಗಳನ್ನು ಇತ್ಯರ್ಥ ಮಾಡುತ್ತೇವೆ ಎಂದರು. 

Read/shikaripura / ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿರುವ ಬಿಎಸ್​ವೈ ಮನೆಗೆ ಕಲ್ಲು ತೂರಾಟ, ಉಗ್ರ ಸ್ವರೂಪ ಪಡೆದುಕೊಂಡ ಪ್ರತಿಭಟನೆ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnewsShikaripura ruckus, internal reservation stir, Banjara community protests, stones at BSY's house, protests in Shikaripura, police lathi charge, Sadashiva Commission, reservation agitation. Shimoga crime report, policemen injuredಶಿಕಾರಿಪುರ ಗಲಾಟೆ, ಒಳಮೀಸಲಾತಿ ಗಲಾಟೆ, ಬಂಜಾರ ಸಮುದಾಯದ ಪ್ರತಿಭಟನೆ, ಬಿಎಸ್​ವೈ ಮನೆಗೆ ಕಲ್ಲು, ಆಕ್ರೋಶ, ಶಿಕಾರಿಪುರದಲ್ಲಿ ಪ್ರತಿಭಟನೆ , ಪೊಲೀಸರ ಲಾಠಿ ಜಾರ್ಜ್​, ಸದಾಶಿವ ಆಯೋಗ, ಮೀಸಲಾತಿ ಹೋರಾಟ. ಶಿವಮೊಗ್ಗ ಕ್ರೈಂ ವರದಿ, ಪೊಲೀಸರಿಗೆ ಗಾಯ