ಸಾಬೀತಾದ ನಕಲಿ ವೈದ್ಯನ ವಿರುದ್ಧದ ಆರೋಪ! ಕೋರ್ಟ್ ಕೊಟ್ಟ ಶಿಕ್ಷೆ ಏನು ಗೊತ್ತಾ?

Malenadu Today

KARNATAKA NEWS/ ONLINE / Malenadu today/ Sep 29, 2023 SHIVAMOGGA NEWS’ 

 

ವೈದ್ಯಕೀಯ ಕ್ಷೇತ್ರಕ್ಕೆ ಅರ್ಹವಾದ ವಿದ್ಯಾರ್ಹತೆ ಇಲ್ಲದೇ ನಕಲಿ ದಾಖಲೆ ನೀಡಿ ವೈದ್ಯನೆಂದು ಜನರಿಗೆ ಚಿಕಿತ್ಸೆ ನೀಡುತ್ತಿದ್ದ ಆರೋಪದ ಅಡಿಯಲ್ಲಿ ವ್ಯಕ್ತಿಯೊಬ್ಬರಿಗೆ ಕೋರ್ಟ್ ಶಿಕ್ಷೆ ನೀಡಿದೆ.  

 

ಶಿಕಾರಿಪುರದ  ಚನ್ನಕೇಶವ ನಗರದಲ್ಲಿ ಗುಡ್ಡಪ್ಪ ಎಂಬವರು ಆಸ್ಪತ್ರೆ ತೆರೆದಿದ್ದರು. 2013ರ ಮಾರ್ಚ್‌ 9ರಂದು ಅಂದಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ.ಶಿವಣ್ಣ ರೆಡ್ಡಿ ಮತ್ತು ಸಿಬ್ಬಂದಿ ದಾಳಿ ನಡೆಸಿ, ಪರಿಶೀಲಿಸಿದ್ದರು. ಆಗ ಅವರು ನಕಲಿ ವೈದ್ಯ ಎಂಬುದು ಗೊತ್ತಾಗಿ, ಅವರ ವಿರುದ್ಧ ಕೇಸ್ ದಾಖಲಾಗಿತ್ತು. 

 

ಈ ಸಂಬಂಧ  ಸಾರ್ವಜನಿಕರಿಗೆ ನಂಬಿಕೆ ದ್ರೋಹ ಆರೋಪದಡಿಯಲ್ಲಿ ಶಿಕಾರಿಪುರ ಟೌನ್ ಪೊಲೀಸ್ ಸ್ಟೇಷನ್​ನಲ್ಲಿ   ಐಪಿಸಿ 419,420,465  ಕೆಪಿಎಂಐ ಕಾಯ್ದೆ ಕಲಂ 19 ರಡಿಯಲ್ಲಿ ಎಫ್ಐಆರ್ ದಾಖಲಾಗಿ, ಚಾರ್ಜ್​ಶೀಟ್ ಸಲ್ಲಿಕೆಯಾಗಿತ್ತು. 

 

ಇದೀಗ ಈ ಬಗ್ಗೆ ಶಿಕಾರಿಪುರ ಕೋರ್ಟ್ ತೀರ್ಪು ನೀಡಿದ್ದು,  ಆರೋಪ ಸಾಬೀತಾದ ಹಿನ್ನೆಲೆ ಕೆಪಿಎಂಐ ಕಾಯ್ದೆ ಅಪರಾಧಿಕ ಕಲಂ 19ರ ಅನ್ವಯ ಅಪರಾ ಧಕ್ಕೆ 6 ತಿಂಗಳ ಕಾಲ ಸಾದಾ ಸ್ಪರೂಪದ ಶಿಕ್ಷೆ ಹಾಗೂ 10 ಸಾವಿರ ರು. ದಂಡ ಪಾವತಿಸುವಂತೆ ಕೋರ್ಟ್ ಆದೇಶಿಸಿದೆ. ದಂಡ ಪಾವತಿಸಲು ತಪ್ಪಿದಲ್ಲಿ 60 ದಿನ ಸಾದಾ ಸ್ವರೂಪದ ಶಿಕ್ಷೆಯನ್ನು ವಿಧಿಸಿದೆ  .

 


 

ಇನ್ನಷ್ಟು ಸುದ್ದಿಗಳು 

 

  1. BREAKING NEWS / ಜೋಗದ ಸಮೀಪ ನೀರಿಗಿಳಿದಿದ್ದ ಓರ್ವ ಅಧಿಕಾರಿ ಮತ್ತು ಬ್ಯಾಂಕ್ ಉದ್ಯೋಗಿ ಸಾವು! ಕಾರ್ಗಲ್​ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದ್ದೇನು?

  2. ಲೋಡ್ ಗಾಡಿಯಿಂದ ಬಿದ್ದ ಮರದ ತುಂಡು ಬಡಿದು ಬೈಕ್​ ಸವಾರನ ಸ್ಥಿತಿ ಗಂಭೀರ! ಹೀಗೂ ಆಗುತ್ತೆ ಹುಷಾರು ತಪ್ಪದಿರಿ ವಾಹನ ಸವಾರರೇ?

  3. ದೌರ್ಜನ್ಯ ಪ್ರಕರಣ ! ಶಿವಮೊಗ್ಗ ಡಿಸಿಯಿಂದ 15 ಸೂಚನೆ! ಯುವಕನ ಸಾವು, ಮರಳು, ಅಧಿಕಾರಿಗಳಿಂದ ಕಿರುಕುಳ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು?


 

 

Share This Article