ಬಿಎಸ್​ವೈ ಮನೆಗೆ ಕಲ್ಲು ತೂರಾಟದ ಘಟನೆ/ ಐವರು ಪೊಲೀಸ್ ಅಧಿಕಾರಿಗಳಿಗೆ ಗಾಯ/ ಎಸ್​ಪಿ & ಡಿಸಿ ಘಟನೆ ಬಗ್ಗೆ ಹೇಳಿದ್ದೇನು? / ಪ್ರತಿಭಟನೆ ನಡೆದಿದ್ದೇಕೆ? ಗಲಾಟೆ ಆಗಿದ್ದೇಗೆ?

What did the SP & DC have to say about the incident of stone pelting at BSY's house/ Five police officers injured? / Why did the protest take place?

ಬಿಎಸ್​ವೈ ಮನೆಗೆ ಕಲ್ಲು ತೂರಾಟದ ಘಟನೆ/ ಐವರು ಪೊಲೀಸ್ ಅಧಿಕಾರಿಗಳಿಗೆ ಗಾಯ/ ಎಸ್​ಪಿ & ಡಿಸಿ ಘಟನೆ ಬಗ್ಗೆ ಹೇಳಿದ್ದೇನು? / ಪ್ರತಿಭಟನೆ ನಡೆದಿದ್ದೇಕೆ? ಗಲಾಟೆ ಆಗಿದ್ದೇಗೆ?
ಬಿಎಸ್​ವೈ ಮನೆಗೆ ಕಲ್ಲು ತೂರಾಟದ ಘಟನೆ/ ಐವರು ಪೊಲೀಸ್ ಅಧಿಕಾರಿಗಳಿಗೆ ಗಾಯ/ ಎಸ್​ಪಿ & ಡಿಸಿ ಘಟನೆ ಬಗ್ಗೆ ಹೇಳಿದ್ದೇನು? / ಪ್ರತಿಭಟನೆ ನಡೆದಿದ್ದೇಕೆ? ಗಲಾಟೆ ಆಗಿದ್ದೇಗೆ?

ಶಿಕಾರಿಪುರದಲ್ಲಿ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪನವರ ನಿವಾಸದ ಮೇಲೆ ಕಲ್ಲು, ಚಪ್ಪಲಿ ತೂರಿದ ಘಟನೆಯ ಬಗ್ಗೆ ಇನ್ನೊಂದಿಷ್ಟು ಮಾಹಿತಿ ಲಭ್ಯವಾಗಿದೆ. ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯು ಮಾಜಿ ಸಿಎಂರ ಮನೆಯತ್ತ ತಿರುಗಿದ್ದು ಏಕೆ ಎಂಬುದು ಇದೀಗ ದಟ್ಟವಾಗುತ್ತಿರುವ  ಸಂಶಯವಾಗಿದೆ. ಒಳ ಮೀಸಲಾತಿಯ ವಿಚಾರವಾಗಿ ರಾಜ್ಯದಲ್ಲಿಯೇ ಇಷ್ಟು ದೊಡ್ಡಮಟ್ಟಿಗೆ ಶಿಕಾರಿಪುರ ದಲ್ಲಿ ಪ್ರತಿಭಟನೆ ನಡೆಯುತ್ತದೆ ಎಂದಾದರೆ, ಅದರ ಪೂರ್ವ ಮಾಹಿತಿ ಗುಪ್ತಚರ ಇಲಾಖೆ ಇಲ್ಲದೇ ಹೋಗಿತ್ತಾ? ಹಾಕಿದ್ದ ಪೊಲೀಸ್ ಬಂದೋಬಸ್ತ್ ಸಾಲದಾಯ್ತಾ? ಎಂಬಿತ್ಯಾದಿ ಪ್ರಶ್ನೆಗಳು ಸದ್ಯ ಉದ್ವವವಾಗುತ್ತಿದೆ. ಇದರ ನಡುವೆ ಶಿಕಾರಿಪುರದ ಬಿಎಸ್​ವೈ ಯವರ ಮನೆಯ ಸುತ್ತಮುತ್ತ ಸದ್ಯ ಪರಿಸ್ಥಿತಿಯು ತಿಳಿಯಾಗಿದೆ. ಒಂದು ಎರಡು ಗಂಟೆಗಳ ಕಾಲ ನಡೆದ ಉದ್ವಿಗ್ನ ಪ್ರತಿಭಟನೆಯಲ್ಲಿ ಬಿಜೆಪಿ ಭಾವುಟವನ್ನು ಕಿತ್ತುಹಾಕಿದ್ದು, ಸೀರೆಗಳನ್ನು ಸುಟ್ಟಿದ್ದು ಹಾಗೂ ನಾಯಕರ ಪೋಸ್ಟರ್​ಗಳಿಗೆ ಚಪ್ಪಲಿ ಏಟು ನೀಡಿದ್ದು ಹಾಗೂ ಕಲ್ಲು ಮತ್ತು ಚಪ್ಪಲಿ ತೂರಿದ ಘಟನೆಗಳು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. 

shikaripura / ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿರುವ ಬಿಎಸ್​ವೈ ಮನೆಗೆ ಕಲ್ಲು ತೂರಾಟ, ಉಗ್ರ ಸ್ವರೂಪ ಪಡೆದುಕೊಂಡ ಪ್ರತಿಭಟನೆ

ಪ್ರತಿಭಟನೆ ನಡೆದಿದ್ದು ಏಕೆ?

ಎಸ್​ಸಿ ಮೀಸಲಾತಿಯಲ್ಲಿ ಎಡಗೈ, ಬಲಗೈ ಮತ್ತು ಬಂಜಾರರು ಕೊರಮ ಕೊರಚ ಸೇರಿದಂತೆ ಸಣ್ಣಪುಟ್ಟ ಜಾತಿಗಳು ಬರುತ್ತವೆ. ಇಲ್ಲಿವೆರೆಗೂ ಎಸ್​​ಸಿ ಎಂದರೆ, ಈ ಎಲ್ಲಾ ಜಾತಿಗಳಿಗೂ ಸಮಾನವಾಗಿ ಮೀಸಲಾತಿ ಲಭ್ಯವಾಗುತ್ತಿತ್ತು. ಆದರೆ ಇದರಿಂದ ಎಡಗೈ ಸಮುದಾಯದಕ್ಕೆ ಅನ್ಯಾಯವಾಗುತ್ತಿದೆ ಎಂಬ ಕೂಗು ಮೊದಲಿನಿಂದಲೂ ಕೇಳಿಬಂದಿತ್ತು. ಮೀಸಲಾತಿಯ ಪ್ರಮುಖ ಉಪಯೋಗವನ್ನು ಬಲಗೈ ಹಾಗೂ ಬಂಜಾರ ಸಮುದಾಯ ತೆಗೆದುಕೊಳ್ಳುತ್ತಿದೆ ಎಂಬುದು ಎಡಗೈ ಸಮುದಾಯದ ಆರೋಪವಾಗಿತ್ತು. ಜಾತಿ ಗಣತಿ ಹಾಗೂ ನ್ಯಾ.ಸದಾಶಿವ ಆಯೋಗದ ವರದಿ ವಿಚಾರಗಳು ಸರ್ಕಾರ ಮುಂದಿದ್ದವು. ಇತ್ತೀಚಿನ ಸಚಿವ ಸಂಪುಟದಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ, ಮಾದಿಗ ಸಂಬಂಧಿತ ಜಾತಿಗಳಿಗೆ ಶೇ. 6, ಹೊಲೆಯ ಸಂಬಂಧಿತ ಜಾತಿಗಳಿಗೆ ಶೇ.5.5, ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಶೇ. 4.5, ಇತರೆ ಅಲೆಮಾರಿ ಸಮುದಾಯಗಳಿಗೆ ಶೇ. 1 ಮೀಸಲಾತಿಯನ್ನು ಹಂಚಿಕೆ ಮಾಡುವ ನಿರ್ಣಯವನ್ನು ಸರ್ಕಾರ ಕೈಗೊಂಡಿತ್ತು. 

ಬಿಎಸ್​ವೈ ಮನೆಯತ್ತ ನುಗ್ಗಿದ್ದೇಕೆ ಪ್ರತಿಭಟನೆ? 

ಆದರೆ ಈ ಒಳಮೀಸಲಾತಿಯಲ್ಲಿ ಬಂಜಾರ ಹಾಗೂ ಇತರೇ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಇವತ್ತು ಶಿಕಾರಿಪುರದ ಅಂಬೇಡ್ಕರ್​ ಸರ್ಕಲ್​​ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಅಲ್ಲಿಂದ ತಹಶೀಲ್ದಾರ್​ ಬಳಿ ತೆರಳಿ ಮನವಿ ಸಲ್ಲಿಸಲು ತೀರ್ಮಾನವಾಗಿತ್ತು. ಆದರೆ ಆನಂತರ ನಡೆದಿದ್ದು ,ಪ್ರತಿಭಟನಾಕಾರರ ನಡೆ ಬಿಎಸ್​ವೈರ ಮನೆಯತ್ತ ಸಾಗಿತು. ಅಲ್ಲಿ ಪೊಲೀಸರು ತಡೆಯುತ್ತಲೇ , ಪ್ರತಿಭಟನಾಕಾರರು ಪೊಲೀಸರು ನಡುವೆ ವಾಗ್ವಾದ , ತಳ್ಳಾಟ ನಡೆಯಿತು. ಪರಿಣಾಮ ಕೆಲವರು ಗಾಯಗೊಂಡರು, ಪರಿಸ್ಥಿತಿ ಉದ್ವಿಗ್ನಗೊಂಡು, ಪ್ರತಿಭಟನೆಯಲ್ಲಿದ್ದವರು ಕಲ್ಲು ಬೀಸಿದರು, ಪೊಲೀಸರು ಲಾಠಿಯನ್ನು ಕೈಗೆ ತೆಗೆದುಕೊಂಡು ಚಾರ್ಜ್​ ಮಾಡಿದರು. ಇದಿಷ್ಟು ನಡೆದ ಘಟನೆ

Shikaripura/ ಶಿಕಾರಿಪುರದಲ್ಲಿ ನಡೆದ ಘಟನೆಯ ಹಿಂದಿದ್ಯಾ ರಾಜಕಾರಣ!

ಐವರು ಪೊಲೀಸ್ ಅಧಿಕಾರಿಗಳಿಗೆ ಗಾಯ

ಈ ಘಟನೆಯ ಹಿಂದೆ ರಾಜಕಾರಣವಿದ್ಯಾ ಅಥವಾ ಕಾಣದ ಕೈ ಇದೆಯಾ ಇದೆಲ್ಲಾ ಇನ್ನಷ್ಟೆ ಗೊತ್ತಾಗಬೇಕಿದೆ. ಸದ್ಯ ಸ್ಥಳದಲ್ಲಿ ಪರಿಸ್ಥಿತಿ ಕಂಟ್ರೋಲ್​ನಲ್ಲಿದೆ. ಹೆಚ್ಚುವರಿ ಪೊಲೀಸರು ಸ್ಥಳದಲ್ಲಿದ್ದು, ಯಾವುದೇ ಅಹಿತಕರತ ಘಟನೆಗಳಿಗೆ ಅವಕಾಶ ನೀಡದಂತೆ ಬಂದೋಬಸ್ತ್ ಮಾಡಿದ್ಧಾರೆ. ಇನ್ನೂ ಘಟನೆಯಲ್ಲಿ ಐವರು ಪೊಲೀಸರು ಗಾಯಗೊಂಡಿದ್ದಾರೆ. ಲಕ್ಷ್ಮಣ್, ಕಾಂತರಾಜ್​, ಇನ್​ಸ್ಪೆಕ್ಟರ್​ ರುದ್ರೇಶ್, ಶಂಕರ್​ಗೌಡ ಸೇರಿದಂತೆ ಐವರು ಅಧಿಕಾರಿಗಳು ಗಾಯಗೊಂಡಿದ್ದಾರೆ. ಇಬ್ಬರ ತೆಲೆಗೆ ಪೆಟ್ಟಾಗಿದ್ದು ಶಿವಮೊಗ್ಗದಿಂದ ಮೆಗ್ಗಾನ್​ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನುಳಿದವರನ್ನ ಶಿಕಾರಿಪುರ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತದೆ. 

ಎಸ್​ಪಿ ಮತ್ತು ಡಿಸಿ ಹೇಳಿದ್ದೇನು? 

ಘಟನೆ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಡಾ.ಆರ್​.ಸೆಲ್ವಮಣಿ, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದಿದ್ಧಾರೆ. ಇನ್ನೂ ಎಸ್​ಪಿ ಮಿಥುನ್ ಕುಮಾರ್​ರವರು ಮಾತನಾಡಿ, 1500 ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅದಕ್ಕೆ ತಕ್ಕ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಸದ್ಯ ಪರಿಸ್ಥಿತಿ ಕಂಟ್ರೋಲ್​ನಲ್ಲಿದ್ದು ಹೆಚ್ಚುವರಿ ಕೆಎಸ್​ಆರ್​ಪಿ ತುಕಡಿಯನ್ನು ನಿಯೋಜಿಸಲಾಗಿದೆ ಎಂದಿದ್ದಾರೆ. ಇನ್ನೂ ಮೂಲಗಳ ಪ್ರಕಾರ, ಘಟನೆಯ ಸಂಬಂದ ಹಲವರನ್ನ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಮುಖ್ಯವಾಗಿ ಕಲ್ಲು ತೂರಿದವರನ್ನು, ಗಲಬೆಗೆ ಕಾರಣರಾದವರಿಗಾಗಿ ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ. 

Read/shikaripura / ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿರುವ ಬಿಎಸ್​ವೈ ಮನೆಗೆ ಕಲ್ಲು ತೂರಾಟ, ಉಗ್ರ ಸ್ವರೂಪ ಪಡೆದುಕೊಂಡ ಪ್ರತಿಭಟನೆ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnewsShikaripura ruckus, internal reservation stir, Banjara community protests, stones at BSY's house, protests in Shikaripura, police lathi charge, Sadashiva Commission, reservation agitation. Shimoga crime report, policemen injuredಶಿಕಾರಿಪುರ ಗಲಾಟೆ, ಒಳಮೀಸಲಾತಿ ಗಲಾಟೆ, ಬಂಜಾರ ಸಮುದಾಯದ ಪ್ರತಿಭಟನೆ, ಬಿಎಸ್​ವೈ ಮನೆಗೆ ಕಲ್ಲು, ಆಕ್ರೋಶ, ಶಿಕಾರಿಪುರದಲ್ಲಿ ಪ್ರತಿಭಟನೆ , ಪೊಲೀಸರ ಲಾಠಿ ಜಾರ್ಜ್​, ಸದಾಶಿವ ಆಯೋಗ, ಮೀಸಲಾತಿ ಹೋರಾಟ. ಶಿವಮೊಗ್ಗ ಕ್ರೈಂ ವರದಿ, ಪೊಲೀಸರಿಗೆ ಗಾಯ