Shivamogga | Jan 28, 2024 | Chinnikatte Joga! ಶಿವಮೊಗ್ಗದಲ್ಲಿ ನಿನ್ನೆ ರಾತ್ರಿ ಎರಡು ದುರ್ಘಟನೆಗಳು ಸಂಭವಿಸಿದೆ. ಒಂದು ಕಡೆ ಸಿಮೆಂಟ್ ಜಿಂಕೆ ಮುರಿದುಬಿದ್ದು ಮಗುವೊಂದು ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಈ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೊಂದೆಡೆ ಸೀಮಂತಕ್ಕೆ ತೆರಳುತ್ತಿದ್ದ ಟೆಂಪೋ ವಾಹನ ಪಲ್ಟಿಯಾದ ಘಟನೆ ಸಂಭವಿಸಿದ್ದು, ಟೆಂಪೋ ಪಲ್ಟಿಯಾಗಿ 19 ಜನರಿಗೆ ಗಂಭೀರ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಓರ್ವ ಮಹಿಳೆಯು ಸಾವನ್ನಪ್ಪಿದ್ದಾರೆ. ಶಿಕಾರಿಪುರ ಸಮೀಪ ಚಿನ್ನಿಕಟ್ಟೆ ಜೋಗದ ಬಳಿಯಲ್ಲಿ ಈ ಘಟನೆ ಸಂಭವಿಸಿದೆ.
ಇವರೆಲ್ಲರೂ ಶಿವಮೊಗ್ಗದಿಂದ ಕೊಡಮಗ್ಗಿಗೆ ಸೀಮಂತ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಈ ವೇಳೆ ಚಿನ್ನಿಕಟ್ಟೆ ಜೋಗದ ಬಳಿಯಲ್ಲಿ ಟೆಂಪೋ ಪಲ್ಟಿಯಾಗಿದೆ. ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು , ಗಾಯಾಳುಗಳು ಆರ್ಎಂಎಲ್ ನಗರದವರು ಎನ್ನಲಾಗಿದೆ.