Shivamogga | Jan 29, 2024 | ನೆರೆಯ ದಾವಣಗೆರೆ ಜೈಲ್ ನಲ್ಲಿ ಹೊಡೆದಾಟ ನಡೆದಿದೆ. ಹಂದಿಅಣ್ಣಿ ಹುಡುಗರು ಹಾಗೂ ರಾಜಸ್ತಾನದ ಮೂಲದ ಕೈದಿಗಳ ನಡುವೆ ಹೊಡೆದಾಟ ನಡೆದಿದೆ.
ಶಿವಮೊಗ್ಗದ ವಿನೋಬನಗರ ಪೊಲೀಸ್ ಚೌಕಿ ಬಳಿ ನಡೆದಿದ್ದ ಹಂದಿ ಅಣ್ಣಿ ಮರ್ಡರ್ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಟೀಂ ಒಂದು ಪ್ರತೀಕಾರ ತೀರಿಸಿಕೊಂಡಿತ್ತು. ಹಂದಿ ಅಣ್ಣಿ ಕೊಲೆ ಆರೋಪಿಗಳಿಬ್ಬರ ಮೇಲೆ ಚನ್ನಗಿರಿ ತಾಲ್ಲೂಕು ನಲ್ಲಿ ಮಾರಣಾಂತಿಕ ಹಲ್ಲೆ ನಡೆದಿತ್ತು. ಈ ವೇಳೆ ಓರ್ವ ಸಾವನ್ನಪ್ಪಿದ್ದ
ಸದ್ಯ ಈ ಹಲ್ಲೆ ಹಾಗೂ ಕೊಲೆ ಪ್ರಕರಣದಲ್ಲಿದ್ದ ಆರೋಪಿಗಳನ್ನು ದಾವಣಗೆರೆ ಕಾರಾಗೃಹದಲ್ಲಿ ಇರಿಸಲಾಗಿದೆ. ಕಾರಾಗೃಹದಲ್ಲಿ ದಾವಣಗೆರೆಯಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದ ರಾಜಸ್ತಾನ ಮೂಲದ ಆರೋಪಿಗಳಿದ್ದರು.
ಮಲೆನಾಡು ಟುಡೆ ಮೂಲಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಈ ಎರಡು ತಂಡಗಳ ನಡುವೆ ಹೊಡೆದಾಟ ನಡೆದಿದೆ. ಯಾರ್ಯಾರಿಗೆ ಹೊಡೆದಾಟ ನಡೆಯಿತು, ಕಾರಣವೇನು ಎಂಬುದು ಇನ್ನಷ್ಟೆ ಸ್ಪಷ್ಟವಾಗಬೇಕಿದೆ. ಆದಾಗ್ಯು ಕಾರಾಗೃಹದಲ್ಲಿ ಹೊಡೆದಾಟ ನಡೆದಿದ್ದು ಮೂಲಗಳ ಪ್ರಕಾರ ಏಳು ಮಂದಿಗೆ ಟ್ರೀಟ್ಮೆಂಟ್ ನೀಡಲಾಗಿದೆ.
ಇನ್ನೂ ದಾವಣಗೆರೆ ಎಸ್ಪಿ ವಿಷಯ ತಿಳಿಯುತ್ತಲೇ ಜೈಲಿಗೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಘಟನೆ ಸಂಬಂಧ ಎಫ್ಐಆರ್ ಸಹ ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
