ಕಾರು-ಒಮಿನಿ ಡಿಕ್ಕಿ! ತಲೆಕೆಳಗಾಗಿ ಬಿದ್ದ ವಾಹನ! ಘಟನೆ ತಡವಾಗಿ ಬೆಳಕಿಗೆ

A car-omni collision! A vehicle that fell upside down

ಹಂಚಿಕೊಳ್ಳಿ
WhatsApp Facebook X Telegram
ಸುದ್ದಿ ಸಾರಾಂಶ

A car-omni collision! A vehicle that fell upside down

KARNATAKA NEWS/ ONLINE / Malenadu today/ May 19, 2023 SHIVAMOGGA NEWS

ಶಿವಮೊಗ್ಗ/ ತಾಲ್ಲೂಕಿನ ಕುಂಸಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ kಕುಂಸಿಯ ಬಳಿಯಲ್ಲಿ ಒಮಿನಿ ಹಾಗೂ ಕಾರೊಂದರ ನಡುವೆ ಪರಸ್ಪರ ಡಿಕ್ಕಿಯಾದ ಘಟನೆಯ ಬಗ್ಗೆ ತಡವಾಗಿ ವರದಿಯಾಗಿದೆ. 

ದಿನಾಂಕ:17.05.2023 ರಂದು ಕುಂಸಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಕಾರ್ ಮತ್ತು ಓಮಿನಿ ವಾಹನಗಳ ನಡುವೆ ಅಪಘಾತವಾಗಿದೆ. ಘಟನೆಯಲ್ಲಿ ವಾಹನದಲ್ಲಿದ್ದ ಪ್ರಯಾಣಿಕರು ಹಾಗೂ ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರಿಗೆ ಚಿಕಿತ್ಸೆ ಒದಗಿಸಲಾಗಿದೆ.  ಘಟನೆ ಸಂಬಂಧ ಕುಂಸಿ ಪೊಲೀಸ್ ಸ್ಟೇಷನ್​ನಲ್ಲಿ ಪ್ರಕರಣ ದಾಖಲಾಗಿದೆ. 

ಮೇಯಲು ಹೋಗಿದ್ದ ಹಸುವಿನ ಕಾಲು ಕಡಿದ ದುಷ್ಕರ್ಮಿಗಳು!

ಹೊಸನಗರ/ ಇಲ್ಲಿನ ನಿಟ್ಟೂರಿನಲ್ಲಿ ಗೌರಿಕೆರೆ  ಬಳಿಯಲ್ಲಿ ಹಸುವೊಂದರ ಕಾಲನ್ನು ಕಡಿದು ಹಾಕಿರುವ ಬಗ್ಗೆ ವರದಿಯಾಗಿದೆ. 

ದುಷ್ಕರ್ಮಿಗಳ ಕೃತ್ಯ ಇದಾಗಿದ್ದು, ಸಿಡ್ಲಕುಣಿ ಸುಭಾಷ್ ಎಂಬವರಿಗೆ ಹಸುವು ಕಾಲಿಗೆ ಕತ್ತಿಯಿಂದ ಏಟು ತಿಂದು ನಡೆಯಲಾಗದೇ ನರಳಾಡುತ್ತಿದೆ. ಘಟನೆಯಲ್ಲಿ ಕಾಲಿನ ನರ ಕಟ್ ಆಗಿದ್ದರಿಂದ ದನ ನೆಲದಿಂದ ಏಳುತ್ತಿಲ್ಲ. 

ಮಲೆನಾಡಲ್ಲಿ ರಾಸುಗಳನ್ನ ಬೆಳಗ್ಗೆ ಹೊರಗೆ ಅಟ್ಟಲಾಗುತ್ತದೆ. ಅವುಗಳು ಮೇವು ಮುಗಿಸಿ ಸಂಜೆ ಮನೆಗಳಿಗೆ ವಾಪಸ್ ಆಗುತ್ತವೆ. ಆದರೆ ಹಟ್ಟಿ ಹಸು ಬರದ ಹಿನ್ನೆಲೆಯಲ್ಲಿ ಸುಭಾಷ್​ರವರು ಅದನ್ನು ಹುಡುಕಿಕೊಂಡು ಹೋಗಿದ್ದಾರೆ. ಈ ವೇಳೆ ಹಸು ನಡೆಯಲಾಗದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಸಂಬಂಧ ನಗರ ಪೊಲೀಸ್ ಸ್ಟೇಷನ್​ ನಲ್ಲಿ ದೂರು ನೀಡಿದ್ದು ಕೇಸ್ ದಾಖಲಾಗಿದೆ ಎನ್ನಲಾಗಿದೆ. 

ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟ್ರೋಲ್​ ತಪ್ಪಿದ ಒಮಿನಿ! ಚರಂಡಿಗೆ ಉರುಳಿ ಅಪಘಾತ!

ಸಾಗರ/ ತಾಲ್ಲೂಕಿನ ಐಗಿನ್ ಬೈಲ್ ಸಮೀಪ ಹಾದು ಹೋಗುವ ರಾಷ್ಟ್ರೀ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಓಮ್ನಿ ಕಾರೊಂದು ರಸ್ತೆ ಪಕ್ಕದ ಚರಂಡಿಗೆ ಉರುಳಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡಿದ್ದಾಋಎ. 

ಗಾಯಾಳುಗಳನ್ನು ಸಾರಿಗೆ ಇಲಾಖೆಯ ನಿವೃತ್ತ ನೌಕರ ನಿಂಗಪ್ಪ ಹಾಗೂ ಅವರ ಪತ್ನಿ ಗೌರಮ್ಮ ಎಂದು ಗುರುತಿಸಲಾಗಿದೆ. ಸಾಗರದಲ್ಲಿ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶಿವಮೊಗ್ಗಕ್ಕೆ ವಾಪಸ್ ಹೋಗುತ್ತಿದ್ದರು. ಈ ವೇಳೆ  ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ.

ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್  ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor