ಕೊಡಚಾದ್ರಿ ಬೆಟ್ಟದಲ್ಲಿ ತಲೆ ತಿರುಗಿ ಪ್ರಪಾತಕ್ಕೆ ಬಿದ್ದ ಪ್ರವಾಸಿಗ !ರಕ್ಷಣಾ ಕಾರ್ಯಾಚರಣೆ ಹೇಗಿತ್ತು! ಸಿನಿಮಾ ಸೀನ್​ ನೆನಪಿಸಿದ ದೃಶ್ಯ

ಹಂಚಿಕೊಳ್ಳಿ
WhatsApp Facebook X Telegram
Tourist Falls from Kodachadri Hill Rescued by Jeep Drivers
Tourist Falls from Kodachadri Hill Rescued by Jeep Drivers

Kodachadri Hill / ಮಲೆನಾಡು ಟುಡೆ ಸುದ್ದಿ / ಹೊಸನಗರ /ಕೊಡಚಾದ್ರಿ ಬೆಟ್ಟದಲ್ಲಿ ಪ್ರವಾಸಿಗರೊಬ್ಬರು ಆಯತಪ್ಪಿ ಕೆಳಗೆ ಬಿದ್ದ ಘಟನೆ ನಿನ್ನೆ ದಿನ ವರದಿಯಾಗಿದೆ. ಹೊಸನಗರ ತಾಲ್ಲೂಕಿನ ನಿಟ್ಟೂರು ಮತ್ತು ಸಂಪೆಕಟ್ಟೆ ಸಮೀಪ ಕೊಡಚಾದ್ರಿ ಬೆಟ್ಟವಿದೆ. ಇದು ಪ್ರಸಿದ್ಧ ಪ್ರವಾಸಿ ತಾಣ. ನಿನ್ನೆ ಇಲ್ಲೊಬ್ಬರು ಆಯತಪ್ಪಿ ಕೆಳಕ್ಕೆ ಬಿದ್ದಿದ್ದರು. ಅವರನ್ನ ಜೀಪ್ ಚಾಲಕರು ಮೇಲಕ್ಕೆತ್ತಿದ್ದಾರೆ.

ಕುಮಟಾ ಮೂಲದ ಪ್ರದೀಪ್ ಎಂಬವರು ಕೊಡಚಾದ್ರಿ ಬೆಟ್ಟದ ಮೇಲಿರುವ ಶಂಕರಾಚಾರ್ಯ ಪೀಠಕ್ಕೆ ತೆರಳಿದ್ರು. ಅಲ್ಲಿಗೆ ಹೋಗುತ್ತಿದ್ದಾಗಲೇ, ಅವರಿಗೆ ತಲೆ ಸುತ್ತು ಬಂದಿದೆ. ಹಾಗಾಗಿ ಆಯತಪ್ಪಿ, ಸೀದಾ ಕೆಳಕ್ಕೆ ಬಿದ್ದಿದ್ದಾರೆ. ಲೋಕಲ್ಸ್​ ಹೇಳುವ ಪ್ರಕಾರ, ಅಂದಾಜು 60 ಅಡಿ ಕೆಳಗೆ ಬಿದ್ದಿರಬಹುದು ಪ್ರದೀಪ್.. ಇನ್ನೂ ಪ್ರದೀಪ್ ಬೀಳುವುದುನ್ನ ಗಮನಿಸಿದ ಜೊತೆಗಿದ್ದವರು ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.

ಸ್ಥಳೀಯರು ಹಾಗೂ ಪ್ರವಾಸಿ ಜೀಪ್ ಚಾಲಕರು ಪ್ರದೀಪ್ಗಾಗಿ ಹುಡುಕಾಟ ಆರಂಭಿಸಿದ್ದರು, ಕೊಲ್ಲೂರು, ನಿಟ್ಟೂರು ಹಾಗೂ ಸಂಪೆಕಟ್ಟೆ ಭಾಗದ ಜೀಪ್ ಚಾಲಕರು ಒಟ್ಟಾಗಿ ಶ್ರಮಿಸಿ, ಕೆಳಗೆ ಬಿದ್ದಿದ್ದ ಪ್ರವಾಸಿಗನ್ನ ಮೇಲಕ್ಕೆ ಹಗ್ಗಕಟ್ಟಿ ಎಳೆದಿದ್ದಾರೆ. ಘಟನೆಯಲ್ಲಿ ಪ್ರದೀಪ್ ಅವರ ತಲೆ, ಕಾಲು ಮತ್ತು ಕೈ ಭಾಗಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನ ಜೀಪ್​ ಚಾಲಕರು ನಗರ ಸರ್ಕಾರಿ ಆಸ್ಪತ್ರೆಗೆ ಅಡ್ಮಿಟ್ ಮಾಡಿ ಚಿಕಿತ್ಸೆಕೊಡಿಸಿದ್ದಾರೆ.

ನಿನ್ನೆ ನಡೆದ ಘಟನೆಯ ದೃಶ್ಯಗಳು ಮಲೆಯಾಳಂ ಸಿನಿಮಾದಲ್ಲಿ ಪ್ರಪಾತಕ್ಕೆ ಬಿದ್ದ ತಮ್ಮ ಸ್ನೇಹಿತನೊಬ್ಬನನ್ನು ರಕ್ಷಣೆ ಮಾಡುವ ಸೀನ್ ನೆನಪಿಸಿತು

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor