ಗಾಜನೂರು ಪಂಪ್‌ ಹೌಸ್‌ ಶೆಡ್‌ನಲ್ಲಿ ಯುವತಿ | ನಾಲ್ವರು ಅರೆಸ್ಟ್‌ | ಎಸ್‌ಪಿ ಮಿಥುನ್‌ ಕುಮಾರ್‌ ಹೇಳಿದ್ದೇನು? | ಸಂಶಯವೇನು?

Gajanoor Dam pump house shed case, Shivamogga Tunganagar police have arrested four people

ಗಾಜನೂರು ಪಂಪ್‌ ಹೌಸ್‌ ಶೆಡ್‌ನಲ್ಲಿ ಯುವತಿ | ನಾಲ್ವರು ಅರೆಸ್ಟ್‌ | ಎಸ್‌ಪಿ ಮಿಥುನ್‌ ಕುಮಾರ್‌ ಹೇಳಿದ್ದೇನು? | ಸಂಶಯವೇನು?
Gajanoor Dam pump house shed case, Shivamogga Tunganagar police

SHIVAMOGGA | MALENADUTODAY NEWS | Jul 4, 2024  ಮಲೆನಾಡು ಟುಡೆ    

ಮೊನ್ನೆ ದಿನ ಗಾಜನೂರು ತೋಟವೊಂದರ ಪಂಪ್‌ಹೌಸ್‌ ಶೆಡ್‌ನಲ್ಲಿ ಯುವತಿಯನ್ನ ಇರಿಸಿದ್ದ ಪ್ರಕರಣದಲ್ಲಿ ಶಿವಮೊಗ್ಗ ತುಂಗಾನಗರ ಪೊಲೀಸರು ನಾಲ್ವರನ್ನ ಬಂಧಿಸಿದ್ದಾರೆ. ಯುವತಿಯನ್ನ ಗಾಜನೂರು ಡ್ಯಾಂ  ಬಳಿಗೆ ಕರೆದೊಯ್ದ ಚಿಕ್ಕಮಗಳೂರು ಯುವಕರು ಸೇರಿದಂತೆ ಗಾಜನೂರು ನಿವಾಸಿಗಳಿಬ್ಬರನ್ನ ಬಂಧಿಸಲಾಗಿದೆ. 

ಎಸ್‌ಪಿ ಮಿಥುನ್‌ ಕುಮಾರ್‌ 

ಈ ಸಂಬಂಧ ಶಿವಮೊಗ್ಗದ ಎಸ್‌ಪಿ ಮಿಥುನ್‌ ಕುಮಾರ್‌ ಮಾತನಾಡಿದ್ದು ಯುವತಿ ಹೇಳಿಕೆಯಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಯುವತಿ ಹೇಳಿರುವ ಪ್ರಕಾರ, ಆಕೆಯ ಪರಿಚಯಸ್ಥ ಈಕೆಯನ್ನ ಗಾಜನೂರು ಡ್ಯಾಂಗೆ ಕರೆದುಕೊಂಡು ಬಂದಿದ್ದ. ಆ ವೇಳೆ ಪರಿಚಯಸ್ಥ ಪ್ರತಾಪ್‌ ಜೊತೆಗೆ ಬಂದಿದ್ದ ಇನ್ನೊಬ್ಬ ಯುವತಿ ಜೊತೆಗೆ ಅಸಭ್ಯವಾಗಿ ವರ್ತಿಸಿದ. ಈ ವೇಳೆ ಅಲ್ಲಿಗೆ ಬಂದ ಸ್ಥಳೀಯರ ಗುಂಪು ಯುವತಿಯನ್ನ ಪಂಪ್‌ಹೌಸ್‌ಗೆ ಕರೆದೊಯ್ದು ರಾತ್ರಿಯಿಡಿ ಇರಿಸಿಕೊಂಡಿದೆ ಎನ್ನಲಾಗಿದೆ. 

ನಡೆದಿದ್ದೇನು?

ಆದಾಗ್ಯು ‍ಪೊಲೀಸ್‌ ಮೂಲಗಳು ಪ್ರಕರಣವನ್ನು ಕೇವಳ ಯುವತಿ ಹೇಳಿಕೆ ಸೀಮಿತವಾಗಿಸಿಲ್ಲ. ಯುವತಿಯನ್ನ ರಕ್ಷಣೆ ಮಾಡುವುದೇ ಗಾಜನೂರು ಯುವಕರ ಉದ್ದೇಶವಾಗಿದ್ದರೇ ರಾತ್ರಿಯಿಡಿ ಪಂಪ್‌ಹೌಸ್‌ ಶೆಡ್‌ನಲ್ಲಿ ಇರಿಸಿಕೊ‍ಳ್ಳುವ ಅವಶ್ಯಕತೆ ಇರುತ್ತಿರಲಿಲ್ಲ. ಅಲ್ಲದೆ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಸುವ ಅನಿವಾರ್ಯತೆ ಇರುತ್ತಿರಲಿಲ್ಲ. ಹೀಗಾಗಿ ಘಟನೆಯಲ್ಲಿ ಏನೋ ನಡೆದಿದೆ ಎಂಬುದು ಪೊಲೀಸರ ಸಂಶಯ

ತುಂಗಾನಗರ ಪೊಲೀಸ್‌ ಸ್ಟೇಷನ್‌

ಇದೆಲ್ಲದರ ನಡುವೆ ಸಂತ್ರಸ್ತೆಯ ಹೇಳಿಕೆ ಆಧರಿಸಿ ದೂರು ದಾಖಲಿಸಿಕೊಂಡಿರುವ ಪೊಲೀಸರು, ಗಾಜನೂರು ಜಲಾಶಯ ಸಮೀಪದ ನಿವಾಸಿಗಳಾದ ಅಭಿಷೇಕ್, ಮಂಜುನಾಥ, ವಿನಯ್, ಕೌಶಿಕ್ ವಿರುದ್ಧ ತುಂಗಾ ನಗರ ಠಾಣೆಯಲ್ಲಿ ಅಪಹರಣ ಹಾಗೂ ಲೈಂಗಿಕ ಕಿರುಕುಳ ಆರೋಪದ ಮೇಲೆ ಎಫ್‌ಐಆರ್‌ ದಾಖಲಿಸಿದ್ದಾರೆ. ಈ ಪೈಕಿ ಆರೋಪಿಗಳಲ್ಲಿ ಅಭಿಷೇಕ್‌, ಮಂಜುನಾಥ ಅವರನ್ನು 

ಬಂಧಿಸಲಾಗಿದೆ. ವಿನಯ್‌ ಹಾಗೂ ಕೌಶಿಕ್‌ ತಲೆಮರೆಸಿಕೊಂಡಿದ್ದಾರೆ. ಇಷ್ಟೆ ಅಲ್ಲದೆ ಜಲಾಶಯಕ್ಕೆ ಯುವತಿಯನ್ನು ಕರೆದೊಯ್ದಿದ್ದ ಇಬ್ಬರು ಯುವಕರ ಮೇಲೂ ಪ್ರಕರಣ ದಾಖಲಿಸಿ ಅವರನ್ನೂ ಬಂಧಿಸಲಾಗಿದೆ ಎನ್ನಲಾಗುತ್ತಿದೆ. 

young woman was allegedly confined overnight in a pump house shed near Gajanoor Dam. Shivamogga Tunganagar police have arrested four people in connection with the incident, including two residents of Gajanoor and two youths from Chikkamagaluru