ಬಡಾವಣೆ ಹತ್ತಿರ ಗಿರಾಕಿಗಾಗಿ ಕಾಯುತ್ತಿದ್ದ ಆಸಾಮಿ | ಪೊಲೀಸರು ಹಿಡಿದ ಮೇಲೆ ಗೊತ್ತಾಗಿದ್ದು ನಿಜ ಸತ್ಯ

Shivamogga police arrested a man who was selling ganja near Rajiv Gandhi Layout in the city. The police have registered a case under Section 20(b)(ii)(A) of the NDPS Act

ಬಡಾವಣೆ ಹತ್ತಿರ ಗಿರಾಕಿಗಾಗಿ ಕಾಯುತ್ತಿದ್ದ  ಆಸಾಮಿ | ಪೊಲೀಸರು ಹಿಡಿದ ಮೇಲೆ ಗೊತ್ತಾಗಿದ್ದು ನಿಜ ಸತ್ಯ
Rajiv Gandhi Layout , selling ganja , Shivamogga police ,NDPS Act

SHIVAMOGGA | MALENADUTODAY NEWS | Jun 8, 2024 ಮಲೆನಾಡು ಟುಡೆ 

ಶಿವಮೊಗ್ಗ ಸಿಟಿಯ ರಾಜೀವ್‌ ಗಾಂಧಿ ಬಡಾವಣೆಯ ಸಮೀಪ ಗಾಂಜಾ ಮಾರುತ್ತಿದ್ದ ಆಸಾಮಿಯನ್ನ ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಕಲಂ 20(b)(ii)(A) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಈ ಸಂಬಂಧ ಪೊಲೀಸ್‌ ಇಲಾಖೆ ಪ್ರಕಟಣೆ ನೀಡಿದ್ದು ಅದರ ವಿವರ ಹೀಗಿದೆ.

ದಿನಾಂಕ:-08-06-2024 ರಂದು ಮದ್ಯಾಹ್ನ  ಶಿವಮೊಗ್ಗ ಟೌನ್ ರಾಜೀವ್ ಗಾಂಧಿ ಬಡಾವಣೆಯ ಹತ್ತಿರ ಅಸಾಮಿಯೊಬ್ಬನು  ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ  ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ರೀ ಅನಿಲ್ ಕುಮಾರ್ ಭೂಮಾರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1  ಶಿವಮೊಗ್ಗ ಜಿಲ್ಲೆ ಮತ್ತು ಕಾರಿಯಪ್ಪ ಎ.ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆರವರ ಮಾರ್ಗದರ್ಶನದಲ್ಲಿ  ತಿಪ್ಪೇ ಸ್ವಾಮಿ, ಪಿಐ ಸಿಇಎನ್ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂಧಿಗಳ ತಂಡವು ಸ್ಥಳಕ್ಕೆ  ಹೋಗಿ ದಾಳಿ ನೆಡೆಸಿದೆ

ಈ ವೇಳೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಅಬ್ದುಲ್ ಅಜೀಂ ಅರ್ಬಾಜ್, 19  ವರ್ಷ, ರಾಜೀವ್ ಗಾಂಧಿ ಬಡಾವಣೆ ಶಿವಮೊಗ್ಗ ಟೌನ್ ಈತನನ್ನು ವಶಕ್ಕೆ ಪಡೆದು, ಆರೋಪಿತನಿಂದ ಅಂದಾಜು ಮೌಲ್ಯ 18,000/-  ರೂಗಳ 375 ಗ್ರಾಂ ತೂಕದ ಒಣ ಗಾಂಜಾವನ್ನು ಅಮಾನತ್ತು ಪಡಿಸಿಕೊಂಡು, ಆರೋಪಿತನ ವಿರುದ್ಧ ಸಿಇಎನ್ ಕ್ರೈಂ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0062/2024  ಕಲಂ 20(b)(ii)(A) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

Shivamogga police arrested a man who was selling ganja near Rajiv Gandhi BDA Layout in the city. The police have registered a case under Section 20(b)(ii)(A) of the NDPS Act and are continuing the investigation. The police department issued a release with the details of the case.