ಹಣಗೆರೆ ಕಟ್ಟೆಯಿಂದ ಆಯನೂರು ಕಡೆಗೆ ಹೋಗುತ್ತಿದ್ದ ಕಾರಿಗೆ ಅಡ್ಡ ಬಂದ ಜಿಂಕೆ ಸ್ಥಳದಲ್ಲಿಯೇ ಸಾವು

A deer was killed in a vehicle collision near Arehalli, Shivamogga. The incident occurred yesterday evening when a Breeza car collided with the deer as it was crossing the road

ಹಣಗೆರೆ ಕಟ್ಟೆಯಿಂದ ಆಯನೂರು ಕಡೆಗೆ ಹೋಗುತ್ತಿದ್ದ ಕಾರಿಗೆ ಅಡ್ಡ ಬಂದ ಜಿಂಕೆ ಸ್ಥಳದಲ್ಲಿಯೇ ಸಾವು
Arehalli, Shivamogga, deer was killed

SHIVAMOGGA | MALENADUTODAY NEWS | Jun 8, 2024 ಮಲೆನಾಡು ಟುಡೆ 

ಶಿವಮೊಗ್ಗದ ಹಣಗರ ಕಟ್ಟೆ ಸಮೀಪ ಸಿಗುವ ಅರೇಹಳ್ಳಿಯ ಬಳಿಯಲ್ಲಿ ಜಿಂಕೆಯೊಂದು ವಾಹನ ಡಿಕ್ಕಿಯಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದೆ.ನಿನ್ನೆ ಸಂಜೆ ಈ ಘಟನೆ ಸಂಭವಿಸಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಜಿಂಕೆ ಕಳೆಬರಹವನ್ನು ವಿಲೇವಾರಿ ಮಾಡಿದೆ. 

ನಿನ್ನೆ ಸಂಜೆ ಹಣಗರೆಕಟ್ಟೆಯ ಕಡೆಯಿಂದ ಆಯನೂರು ಕಡೆಗೆ ಹೋಗುತ್ತಿದ್ದ ಬ್ರೀಜಾ ಕಾರಿಗೆ ಜಿಂಕೆಯೊಂದು ಅಡ್ಡಬಂದಿದೆ. ರೋಡ್‌ ಕ್ರಾಸ್‌ ಮಾಡುತ್ತಿದ್ದ ಜಿಂಕೆ ಸಡನ್‌ ಆಗಿ ಬಂದಿದ್ದರಿಂದ ಕಾರು ಜಿಂಕೆಗೆ ಡಿಕ್ಕಿಯಾಗಿದೆ. ಪರಿಣಾಮ ಜಿಂಕೆ ರಸ್ತೆಯ ಬದಿಗೆ ಹಾರಿ ಬಿದ್ದಿದ್ದು ಅಲ್ಲಿಯೇ ಜೀವಬಿಟ್ಟಿದೆ. 

ಇನ್ನೂ ಈ ಭಾಗದಲ್ಲಿ ವನ್ಯಜೀವಿಗಳ ರೋಡ್‌ ಕ್ರಾಸಿಂಗ್‌ ಸಹಜವಾಗಿದ್ದು, ಈ ಸಂಬಂಧ ಅರಣ್ಯ ಇಲಾಖೆ ಅಲ್ಲಲ್ಲಿ ವಾಹನ ಸವಾರರಿಗೆ ಗೊತ್ತಾಗುವ ಹಾಗೆ ಸೂಚನಾ ಫಲಕಗಳನ್ನ ಹೆಚ್ಚೆಚ್ಚು ಅಳವಡಿಸಬೇಕು ವನ್ಯಜೀವಿಗಳು ಹೀಗೆ ವಾಹನಗಳಿಗೆ ಡಿಕ್ಕಿಯಾಗಿ ಬಲಿಯಾಗುವುದನ್ನ ತಡೆಯಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ. 

A deer was killed in a vehicle collision near Arehalli, Shivamogga. The incident occurred yesterday evening when a Breeza car collided with the deer as it was crossing the road