BREKING NEWS | ವಿನೋಬನಗರದ ಮನೆಯಲ್ಲಿ ವೇಶ್ಯಾವಾಟಿಕೆ | ಪೊಲೀಸರ ರೇಡ್‌ನಲ್ಲಿ ಗೊತ್ತಾಗಿದ್ದೇನು?

Shivamogga police raided a house and arrested a man for operating a prostitution ring. A woman was rescued during the raid. SP Mithun Kumar , Immoral Traffic Prevention Act.

BREKING NEWS | ವಿನೋಬನಗರದ ಮನೆಯಲ್ಲಿ ವೇಶ್ಯಾವಾಟಿಕೆ | ಪೊಲೀಸರ ರೇಡ್‌ನಲ್ಲಿ ಗೊತ್ತಾಗಿದ್ದೇನು?
SP Mithun Kumar , Immoral Traffic Prevention Act, Shivamogga police raid, prostitution ring

SHIVAMOGGA | MALENADUTODAY NEWS | Jun 9, 2024  ಮಲೆನಾಡು ಟುಡೆʼ

ಶಿವಮೊಗ್ಗದಲ್ಲಿ ಮತ್ತೆ ವೇಶ್ಯಾವಾಟಿಕೆಯ ಬಿಲವೊಂದು ಕಾಣಸಿಕ್ಕಿದೆ. ಶಿವಮೊಗ್ಗ ಪೊಲೀಸರು ತಮಗೆ ನೀಡಿದ ಮಾಹಿತಿಯನ್ನ ಆಧರಿಸಿ ಮನೆಯೊಂದರ ಮೇಲೆ ರೇಡ್‌ ನಡೆಸಿದ್ದಾರೆ. ಈ ವೇಳೆ ಓರ್ವನನ್ನ ಬಂಧಿಸಿ ಓರ್ವಾಕೆಯನ್ನ ರಕ್ಷಣೆ ಮಾಡಲಾಗಿದೆ. ಘಟನೆ ಸಂಬಂಧ IMMORAL TRAFFIC PREVENTION ACT  ಅಡಿಯಲ್ಲಿ ಕೇಸ್‌ ದಾಖಲಿಸಲಾಗಿದೆ. 

ಪ್ರಕರಣದ ವಿವರ ಹೀಗಿದೆ.  ದಿನಾಂಕಃ 08-06-2024  ರಂದು ಸಂಜೆ  ಶಿವಮೊಗ್ಗ ಟೌನ್ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ  ವಿನೋಬನಗರದ ವಾಸದ ಮನೆಯೊಂದರಲ್ಲಿ, ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ  ಖಚಿತ ಮಾಹಿತಿ ಪೊಲೀಸರಿಗೆ ತಲುಪಿದೆ. 

ಈ ವಿಷಯ ತಿಳಿದು ಎಸ್‌ಪಿ ಮಿಥುನ್ ಕುಮಾರ್ ತಮ್ಮ ಸಿಬ್ಬಂದಿಗೆ ತಕ್ಷಣವೇ ಅಟೆಂಡ್‌ ಮಾಡಲು ತಿಳಿಸಿದ್ದಾರೆ. ಮೇಲಾಧಿಕಾರಿಗಳ ಸೂಚನೆಯಂತೆ  ಸುರೇಶ್ ಡಿವೈಎಸ್ ಪಿ ಶಿವಮೊಗ್ಗ ಬಿ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ,   ಚಂದ್ರಕಲಾ, ಪಿಐ ವಿನೋಬನಗರ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂಧಿ ಮನೆಯೊಂದರ ಮೇಲೆ ರೇಡ್‌ ಮಾಡಿದ್ದಾರೆ. 

ಈ ರೇಡ್‌ನಲ್ಲಿ  ಸಂತ್ರಸ್ಥ ಮಹಿಳೆಯೊಬ್ಬರನ್ನು ರಕ್ಷಣೆ ಮಾಡಿ, ವೇಶ್ಯಾವಾಟಿಕೆ ನಡೆಸುತ್ತಿದ್ದ ಶೇಖರ್ ಮೂರ್ತಿ, 45 ವರ್ಷ, ಹೊಸಮನೆ, ಶಿವಮೊಗ್ಗ ಟೌನ್  ಈತನನ್ನು ದಸ್ತಗಿರಿ  ಮಾಡಿ ಆರೋಪಿಯ ವಿರುದ್ಧ IMMORAL TRAFFIC PREVENTION ACT  ರೀತ್ಯಾ ಪ್ರಕರಣ   ದಾಖಲಿಸಿ ತನಿಖೆ ಕೈಗೊಂಡಿದೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

Shivamogga police raided a house and arrested a man for operating a prostitution ring. A woman was rescued during the raid. The police acted on a tip-off and the operation was led by SP Mithun Kumar and his team. The accused, Shekhar Murthy, has been booked under the Immoral Traffic Prevention Act.