Police firing ಶಿವಮೊಗ್ಗದಲ್ಲಿ ಮತ್ತೆ ಪೊಲೀಸ್‌ ಫೈರ್!‌ ಎಸ್‌ಪಿ ಮಿಥುನ್‌ ಕುಮಾರ್‌ ಹೇಳಿದ್ದೇನು?

One of the accused was shot in the leg by the police at tunganagar police station limits Police firing

Police firing ಶಿವಮೊಗ್ಗದಲ್ಲಿ ಮತ್ತೆ ಪೊಲೀಸ್‌ ಫೈರ್!‌ ಎಸ್‌ಪಿ ಮಿಥುನ್‌ ಕುಮಾರ್‌ ಹೇಳಿದ್ದೇನು?
Police firing

shivamogga Mar 25, 2024 Police firing ಶಿವಮೊಗ್ಗ ಪೊಲೀಸರು ಮತ್ತೊಮ್ಮೆ ಫೈರ್‌ ಮಾಡಿದ್ದಾರೆ. ಆರೋಪಿಯೊಬ್ಬ ಚಾಕುವಿನಿಂದ ಪೊಲೀಸರ ಮೇಲೆ ಅಸಲ್ಟ್‌ ಮಾಡುವ ಸಂದರ್ಭದಲ್ಲಿ ಪೊಲೀಸರು ಆತನ ಕಾಲಿಗೆ ಶೂಟ್‌ ಮಾಡಿದ್ದಾರೆ. ಎರಡು ಸಲ ಫೈರ್‌ ಆಗಿದ್ದು, ಆರೋಪಿ ಕಾಲಿಗೆ ಗುಂಡು ತಗುಲಿದೆ. 

ತುಂಗಾನಗರ ಪೊಲೀಸ್‌ ಸ್ಟೇಷನ್‌  

ತುಂಗಾನಗರ ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ನ ರೌಡಿಶೀಟರ್ಸ್‌ ರೌಡಿಶೀಟರ್ ಪರ್ವೇಜ್ @ ಫರ್ರು ಕಾಲಿಗೆ  ಪೊಲೀಸರು ಫೈರ್‌ ಮಾಡಿದ್ದಾರೆ. ಶಿವಮೊಗ್ಗ ನಗರ ಹೊರವಲಯದ ಮಲ್ಲಿಗೇನಹಳ್ಳಿ ಬಳಿ ಈ ಘಟನೆ ನಡೆದಿದೆ. 

ಮಲ್ಲಿಗೇನಹಳ್ಳಿಯ ಹಿಂದೂ ರುದ್ರಭೂಮಿ ಬಳಿ ಶಿವಮೊಗ್ಗ ಗ್ರಾಮಾಂತರ ಪೊಲೀಸರು  ಪರ್ವೇಜ್ ಬಂಧನಕ್ಕೆ  ತೆರಳಿದ್ದರು. ಇನ್‌ಸ್ಪೆಕ್ಟರ್‌ ಸತ್ಯನಾರಾಯಣ್‌ ಌಂಡ್ ಟೀಂ ಕಾರ್ಯಾಚರಣೆಯಲ್ಲಿತ್ತು. ಪೊಲೀಸರ ರೇಡ್ ವೇಳೆ  ಡ್ರಾಗರ್ ನಿಂದ ಪೊಲೀಸ್ ಸಿಬ್ಬಂದಿ ಮೇಲೆಯೇ ಹಲ್ಲೆಗೆ ಪರ್ವೇಜ್ ಮುಂದಾಗಿ, ಪೇದೆ ನಾಗಪ್ಪ ಎಂಬವರ ಮೇಲೆ ಹಲ್ಲೆ ಮಾಡಿದ್ದಾನೆ. 

ಈ ವೇಳೆ ಮುನ್ನೆಚ್ಚರಿಕೆ ಕ್ರಮವಾಗಿ ಸತ್ಯನಾರಾಯಣ್​ ಫೈರ್ ಮಾಡಿದ್ದಾರೆ. ಗಾಯಾಳು ನಾಗಪ್ಪ ಹಾಗೂ ಆರೋಪಿಯನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು ಪ್ರಕರಣ ಸಂಬಂಧ ತುಂಗಾನಗರ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ದಾಖಲಾಗಿದೆ. 

ಇವತ್ತು ಮಲ್ಲಿಗೇನಹಳ್ಳಿ ಹೊರವಲಯದಲ್ಲಿ ಈತ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಅಲ್ಲಿಗೆ ಟೀಂ ತೆರಳಿದೆ. ಅಲ್ಲಿ ಮಲಗಿದ್ದ ಪರ್ವೇಜ್‌ನನ್ನ ಹಿಡಿಯುವಾಗ ಆತ ಎಸ್ಕೇಪ್‌ ಆಗಲು ಮುಂದಾಗಿದ್ದ. ಅಲ್ಲದೆ ನಾಗಪ್ಪರವರ ಮೇಲೆ ಡ್ರಾಗರ್‌ ನಿಂದ ಅಟ್ಯಾಕ್‌ ಮಾಡಲು ಮುಂದಾಗಿದ್ದಾನೆ. ಈ ವೇಳೆ ಪೊಲೀಸ್‌ ಅಧಿಕಾರಿ ಫೈರ್‌ ಮಾಡಿದ್ದಾರೆ. 

ಇನ್ನೂ ಈ ಬಗ್ಗೆ ಮಾತನಾಡಿರುವ ಎಸ್​ಪಿ ಮಿಥುನ್ ಕುಮಾರ್​, ಆರೋಪಿ ಪರ್ವೆಜ್ ವಿರುದ್ಧ 307,302,393 ಸೇರಿದಂತೆ ಆರು ಪ್ರಕರಣಗಳಿದ್ದವು. ಆತನ ವಿರುದ್ಧ ಗಾಂಜಾ ಕೇಸ್​ ಕೂಡ ದಾಖಲಾಗಿತ್ತು. ಆರು ದಿನಗಳ ಹಿಂದೆ ತುಂಗಾನಗರ ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣ ಸಂಬಂಧ ಅಧಿಕಾರಿಗಳ ತಂಡ ಮಲ್ಲಿಗೇನಹಳ್ಳಿ ಬಳಿ ಪರ್ವೇಜ್​ಗಾಗಿ ಹುಡುಕಾಟ ನಡೆಸಿತ್ತು. ಅಲ್ಲಿಯ ಜಾಗವೊಂದರಲ್ಲಿ ಆತ ಮಲಗಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಅಲ್ಲಿಗೆ ಪೊಲೀಸರ ತಂಡ ತೆರಳಿತ್ತು. ಆತನನ್ನು ಹಿಡಿಯಲು ಮುಂದಾಗಿದ್ದ ವೇಳೆ ಆತ ಡ್ರಾಗರ್ ನಿಂದ ಪೊಲೀಸ್​ ಪೇದೆ ನಾಗೇಶ್​ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಇನ್​ಸ್ಪೆಕ್ಟರ್​ ಎಚ್ಚರಿಕೆ ನೀಡಿದ್ದಾರೆ. ಎರಡು ರೌಂಡ್​ ಫೈರ್ ಮಾಡಿದ್ದಾರೆ. ಆತನ ಕಾಲಿಗೆ ಗುಂಡು ತಗುಲಿದೆ ಎಂದು ತಿಳಿಸಿದ್ದಾರೆ.