ಕೆಎಸ್​ಆರ್​ಟಿಸಿ ಬಸ್​ ಡಿಪೋ ಬಳಿ ದರೋಡೆಗೆ ಸ್ಕೆಚ್​! 50 Gram ಖಾರಪುಡಿ ಜೊತೆ ಇಡ್ಲಿ ಪಠಾಣ್​ ಸೇರಿ ನಾಲ್ವರು ಅರೆಸ್ಟ್!

Sketch of robbery near KSRTC bus depot! Idli Pathan, 4 others arrested with 50 gram chilli powder

ಕೆಎಸ್​ಆರ್​ಟಿಸಿ ಬಸ್​ ಡಿಪೋ ಬಳಿ ದರೋಡೆಗೆ ಸ್ಕೆಚ್​! 50 Gram ಖಾರಪುಡಿ ಜೊತೆ ಇಡ್ಲಿ ಪಠಾಣ್​ ಸೇರಿ ನಾಲ್ವರು ಅರೆಸ್ಟ್!
Sketch of robbery near KSRTC bus depot! Idli Pathan, 4 others arrested with 50 gram chilli powder

Shivamogga | Feb 11, 2024 |  ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ಒಂದು ದರೋಡೆ ಯತ್ನದ ಪ್ರಕರಣದಲ್ಲಿ ನಾಲ್ವರು ಫಿಟ್ ಆಗಿದ್ದಾರೆ. ಉರ್ದು ಬಜಾರ್, ಮಿಳಘಟ್ಟ, ಭರ್ಮಪ್ಪ ನಗರ ಹಾಗೂ ಅಣ್ಣಾನಗರದ ನಾಲ್ವರು ದರೋಡೆಗೆ ಹೊಂಚು ಹಾಕುತ್ತಿದ್ದ ಆರೋಪದ ಅಡಿಯಲ್ಲಿ ಅರೆಸ್ಟ್ ಆಗಿದ್ದು, ಇವರ ವಿರುದ್ದ ಪೊಲೀಸರೇ ಸುಮುಟೋ ಕೇಸ್ ದಾಖಲಿಸಿದ್ದಾರೆ. 

ಕೆಎಸ್​ಆರ್​ಟಿಸಿ ಬಸ್​ ಡಿಪೋ 

ಶಿವಮೊಗ್ಗದ ಕೆಎಸ್​ಆರ್​ಟಿಸಿ ಬಸ್​ ಡಿಪೋ ಸಮೀಪ ಇರುವ ಎಕ್ಸಿಬೀಷನ್​ ನಡೆಯುವ ಖಾಲಿ ಜಾಗದಲ್ಲಿ ಆರೋಪಿಗಳು ಹೊಂಚು ಹಾಕುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ. ಎಕ್ಸಿಬೀಷನ್ ನಡೆಯುವ ಖಾಲಿ ಜಾಗದಿಂದ ಮಂಜುನಾಥ ಬಡಾವಣೆಗೆ ಹೋಗುವವರನ್ನ ಅಡ್ಡಹಾಕಿ ಅವರನ್ನ ದೋಚುವ  ಸಲುವಾಗಿ ಖಾರದ ಪುಡಿ, ರಾಡು, ಚಾಕು ಹಾಗೂ ಲಾಂಗ್ ಹಿಡಿದು ಸ್ಕೆಚ್​ ಹಾಕಿ ನಿಂತಿದ್ದಾರೆ ಎಂಬ ಮಾಹಿತಿ ದೊಡ್ಡಪೇಟೆ ಪೊಲೀಸರಿಗೆ ಬಂದಿದೆ. 

ಬುದ್ದಾನಗರ ಸರ್ಕಲ್​

ಇದೇ ವೇಳೆ ಬುದ್ದಾನಗರ ಸರ್ಕಲ್​ನಲ್ಲಿ ಪೆಟ್ರೋಲಿಂಗ್​ ನಲ್ಲಿದ್ದ ದೊಡ್ಡಪೇಟೆ ಪಿಎಸ್​ಐ-3 ಶ್ರೀನಿವಾಸ್​ ಮಾಹಿತಿ ಸಿಗುತ್ತಲೇ ಸ್ಥಳದಲ್ಲಿ ರೇಡ್ ಮಾಡಿದ್ದಾರೆ. ಸಿಬ್ಬಂದಿಯ ಜೊತೆಗೆ ರೇಡ್ ಮಾಡಿದ ಪಿಎಸ್​ಐ ನಾಲ್ವರನ್ನ ಅರೆಸ್ಟ್ ಮಾಡಿದ್ದಾರೆ. ಓರ್ವ ಪರಾರಿಯಾಗಿದ್ದಾನೆ. ಪೊಲೀಸರ ಕೈಗೆ ಇಡ್ಲಿ, ಪಠಾಣ್​ ಅಲಿಯಾಸ್ ಅಕ್ರಿಖಾನ್ , ಮುಸ್ತಾಕ್,  ಆದೀಲ್ ಹಾಗೂ ಮಾಜ್​ ಬೇಗ್  ಸಿಕ್ಕಿಬಿದ್ದಿದ್ದಾರೆ. ಮಾರಕಾಸ್ತ್ರಗಳ ಜೊತೆಗೆ ಐವತ್ತು ಗ್ರಾಂ ಖಾರದ ಪುಡಿಯ ಜೊತೆಗೆ ಎಲ್ಲರನ್ನು ಅರೆಸ್ಟ್ ಮಾಡಿದ ಪೊಲೀಸರು 

 IPC 1860 (U/s-399,402) ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. 

ಐಪಿಸಿ ಸೆಕ್ಷನ್​ 

ಐಪಿಸಿ ಸೆಕ್ಷನ್​ 399 : ಭಾರತೀಯ ದಂಡ ಸಂಹಿತೆಯ ಸೆಕ್ಷನ್ 399, ಡಕಾಯಿತಿ ಮಾಡಲು ಸಿದ್ಧತೆ ನಡೆಸಿದ ಆರೋಪವನ್ನ ಹೊಂದಿದೆ. ದರೋಡೆಗೆ ಯಾವುದೇ ಸಿದ್ಧತೆಯನ್ನು ಮಾಡುವವರು ಹತ್ತು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಗೆ ಕಠಿಣ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ ಮತ್ತು ದಂಡಕ್ಕೆ ಗುರಿಯಾಗುತ್ತಾರೆ. 

ಐಪಿಸಿ ಸೆಕ್ಷನ್ 402 : ಭಾರತೀಯ ದಂಡ ಸಂಹಿತೆ, 1860 ರ ಸೆಕ್ಷನ್ 402 ಡಕಾಯಿತಿ ಮಾಡುವ ಉದ್ದೇಶಕ್ಕಾಗಿ ಒಟ್ಟುಗೂಡುವ  ಅಪರಾಧದ ಬಗ್ಗೆ ಈ ಸೆಕ್ಷನ್ ಹೆಳುತ್ತದೆ. ಡಕಾಯಿತಿ ಮಾಡುವ ಉದ್ದೇಶಕ್ಕಾಗಿ ಐದು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರೆ, ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಕಠಿಣ ಸೆರೆವಾಸದಿಂದ ಶಿಕ್ಷೆಗೆ ಗುರಿಯಾಗುತ್ತಾರೆ ಮತ್ತು ದಂಡ ವಿಧಿಸಲಾಗುತ್ತದೆ.