ದಾವಣಗೆರೆಯಿಂದ ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಮಗಳೊಂದಿಗೆ ಬಂದಿಳಿದ ತಂದೆಗೆ ಶಾಕ್‌ ! ನಡೀತು ಸಂಶಯಾಸ್ಪದ ಘಟನೆ

The girl, who arrived at Shivamogga KSRTC bus stand from Davanagere with her father, is missing

ದಾವಣಗೆರೆಯಿಂದ ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಮಗಳೊಂದಿಗೆ ಬಂದಿಳಿದ ತಂದೆಗೆ ಶಾಕ್‌ ! ನಡೀತು ಸಂಶಯಾಸ್ಪದ ಘಟನೆ
KSRTC bus stand

Shivamogga  Apr 3, 2024  ದಾವಣಗೆರೆ ಜಿಲ್ಲೆಯಿಂದ ಶಿವಮೊಗ್ಗಕ್ಕೆ ಮಗಳೊಂದಿಗೆ ಬಂದಿದ್ದ ತಂದೆಯೊಬ್ಬರು ತಮ್ಮ ಮಗಳು ಕಾಣೆಯಾಗಿರುವ ಬಗ್ಗೆ ದೊಡ್ಡಪೇಟೆ ಪೊಲೀಸ್‌ ಸ್ಟೇಷನ್‌ನಲ್ಲಿ ದೂರು ದಾಖಲಿಸಿದ್ದಾರೆ. ಮದುವೆ ಬ್ರೋಕರ್‌ನ್ನ ಭೇಟಿಯಾಗಲು ಬಂದಿದ್ದ ಇವರಿಬ್ಬರ ಪೈಕಿ ತಂದೆಯನ್ನ ಮಗಳು ಮನೆಗೆ ವಾಪಸ್‌ ಕಳುಹಿಸಿದ್ದಾರೆ. ಆ ಬಳಿಕ ಯುವತಿ ನಾಪತ್ತೆಯಾಗಿದ್ದಾರೆ. 

ಏನಿದು ಪ್ರಕರಣ 

ಕಳೆದ 27 ರಂದು ತಮ್ಮ ತಂದೆಯನ್ನ ಯುವತಿಯೊಬ್ಬರು ಮದುವೆ ಬ್ರೋಕರ್‌ನ್ನ ಭೇಟಿ ಮಾಡಿಸುವುದಾಗಿ ಕರೆದುಕೊಂಡು ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಬಂದಿದ್ದಾರೆ. ಅಲ್ಲಿ ಮದುವೆ ಬ್ರೋಕರ್‌ ಎಂದು ಹೇಳುವ ವ್ಯಕ್ತಿಯನ್ನ ಪರಿಚಯ ಮಾಡಿಸಿದ್ದಾಳೆ. ತದನಂತರ ಯುವತಿ ತಂದೆಯನ್ನು ವಾಪಸ್‌ ತೆರಳುವಂತೆ ಸೂಚಿಸಿದ್ದು, ಮದುವೆ ವರರನ್ನು ನೋಡಿಕೊಂಡು ಬರುವುದಾಗಿ ತಿಳಿಸಿದ್ದಾರೆ. ಅಲ್ಲದೆ ರಾತ್ರಿ ಫೋನ್‌ ಮಾಡಿ ನಾಲ್ವರಲ್ಲಿ ಒಬ್ಬರನ್ನ ತೋರಿಸಿದ್ದಾರೆ ಇನ್ನುಳಿದ ವರಗಳನ್ನ ನೋಡಬೇಕಿದೆ ಎಂದು ತಂದೆಯವರಿಗೆ ಫೋನ್‌ ಮಾಡಿದ್ದಾಳೆ. ಆನಂತರ ಆಕೆಯ ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ. ಅದಾದ ಬಳಿಕ ಯುವತಿ ನಾಪತ್ತೆಯಾಗಿದ್ದಾಳೆ. ಇನ್ನೂ ಘಟನೆ ನಡೆದು ಎರಡು ದಿನಗಳ ಬಳಿಕ ಅನೌನ್‌ ನಂಬರ್‌ನಿಂದ ತಂದೆಗೆ ಕರೆಬಂದಿದ್ದು ಯುವತಿ ತಮ್ಮೊಂದಿಗೆ ಇರುವುದಾಗಿ ಹೇಳಿದ್ದಾರೆ. ಹೀಗಾಗಿ ಆತಂಕಗೊಂಡ ದಾವಣಗೆರೆ ಜಿಲ್ಲೆಯ ತಾಲ್ಲೂಕು ಒಂದರ ನಿವಾಸಿ ದೊಡ್ಡಪೇಟೆ ಪೊಲೀಸ್‌ ಸ್ಟೇಷನ್‌ಗೆ ದೂರು ನೀಡಿದ್ದಾರೆ.