ಕೋಮು ಪ್ರಚೋದನೆ ಪೋಸ್ಟ್!‌ ದೊಡ್ಡಪೇಟೆ ಪೊಲೀಸ್‌ ಸ್ಟೇಷನ್‌ನಲ್ಲಿ ಸುಮುಟೋ ಕೇಸ್‌ ಲಾಕ್‌!

Communal incitement post! Sumuto case locked in Doddapet police station!

ಕೋಮು ಪ್ರಚೋದನೆ ಪೋಸ್ಟ್!‌ ದೊಡ್ಡಪೇಟೆ ಪೊಲೀಸ್‌ ಸ್ಟೇಷನ್‌ನಲ್ಲಿ ಸುಮುಟೋ ಕೇಸ್‌ ಲಾಕ್‌!
Doddapet police station

Shivamogga  Apr 2, 2024  Doddapet police station ಹಬ್ಬ ಹರಿದಿನ ಸೇರಿದಂತೆ ಮುಖ್ಯವಾದ ದಿನಗಳ ಸಂದರ್ಭದಲ್ಲಿ ಬೇಕಂತಲೇ ಪ್ರಚೋಧನೆ ನೀಡುವಂತಹ ಪೋಸ್ಟ್‌ಗಳು ಸೋಶಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತವೆ. ಅದರ ಹಿಂದಿನ ಶಕ್ತಿಗಳು ಅಂತಹ ಕೃತ್ಯಕ್ಕೆ  ಪ್ರೋತ್ಸಾಹ ನೀಡುತ್ತವೆ. ಸದ್ಯ ಇಂತಹ ಕೃತ್ಯಗಳ ಮೇಲೆ ಶಿವಮೊಗ್ಗ ಪೊಲೀಸ್‌ ಇಲಾಖೆ ಗೌಪ್ಯ ಕಣ್ಣು ನೆಟ್ಟಿದೆ. ಇದಕ್ಕೆ ಸಾಕ್ಷಿ ಎಂಬಂತೆ ದೊಡ್ಡಪೇಟೆ ಪೊಲೀಸ್‌ ಸ್ಟೇಷನ್‌ನಲ್ಲಿ ಸುಮುಟೋ ಕೇಸ್‌ ದಾಖಲಾಗಿದೆ. 

ಇನ್‌ಸ್ಟಾಗ್ರಾಂ ನಲ್ಲಿ ಹಾಕಿದ್ದ ಪೋಸ್ಟ್‌ ವೊಂದು ದೊಡ್ಡಪೇಟೆ ಪೊಲೀಸರ ಗಮನಕ್ಕೆ ಬಂದಿದೆ. ಅದನ್ನ ಪರಿಶೀಲಿಸಿದಾಗ, ಅದರಲ್ಲಿ ಕೋಮು ಪ್ರಚೋಧನೆ ನೀಡುವ ವಿವರಗಳು ಕಾಣಿಸಿವೆ. ತಕ್ಷಣವೇ ಅಲರ್ಟ್‌ ಆದ ಪೊಲೀಸರು ಆ ಫೋಸ್ಟ್‌ನ್ನ ಅಪ್‌ಲೋಡ್‌ ಮಾಡಿದ ಯುವಕನ ವಿರುದ್ಧ ಕೇಸ್‌ ದಾಖಲಿಸಿದ್ದಾರೆ. 

ಪ್ಲಾನ್‌ ಎ ಪ್ಲಾನ್‌ ಬಿ ಎಂಬ ಹೆಸರಿನ ಪೋಸ್ಟ್‌ಗಳ ವಿರುದ್ಧ ಪೊಲೀಸ್‌ ಸಿಬ್ಬಂದಿಯೇ ಸುಮುಟೋ ಕೇಸ್‌ ದಾಖಲಿಸಿದ್ದು Act & Section: IPC 1860 (U/s-505(2)) ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಈ ಮೂಲಕ ಪ್ರಚೋಧನೆ ನೀಡುವ ವ್ಯಕ್ತಿಗಳ ಬಗ್ಗೆ ಪೊಲೀಸ್‌ ಗಮನ ಸ್ಪಷ್ಟವಾಗಿದೆ ಎಂಬ ಸಂದೇಶವನ್ನು ಇಲಾಖೆ ರವಾನೆ ಮಾಡಿದೆ. 

TODAY ವಾಟ್ಸ್ಯಾಪ್​ ಚಾನಲ್​ ಫಾಲೋ ಮಾಡಿ! ಯಾವಾಗ ಬೇಕೋ ಆಗಲೇ  ಸುದ್ದಿ ಓದಿ,  ಲಿಂಕ್​ ಕ್ಲಿಕ್ ಮಾಡಿ

https://whatsapp.com/channel/0029Va9I91s3LdQVrdq7yl1h

ಇದನ್ನು ಓದಿ : ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಲ್ಲೀಗ ಮಧು ಬಂಗಾರಪ್ಪನವರೇ ಸುಪ್ರೀಂ!  ಶೀಘ್ರದಲ್ಲಿಯೇ ಇನ್ನೊಂದು ಬದಲಾವಣೆ! ಏನದು ರಾಜಕಾರಣ