ಒಂದೇ ರೂಂನಲ್ಲಿರುವುದನ್ನ ವಿಡಿಯೋ ಮಾಡಿ ಯುವಕ-ಯುವತಿಯ ಬ್ಲ್ಯಾಕ್‌ಮೇಲ್!‌ ಸ್ನೇಹಿತರೇ ಇಲ್ಲಿ ದುಶ್ಮನ್‌! ಹುಷಾರ್

young man and a woman blackmailed by making a video of them in the same room/ shivamogga crime news

ಒಂದೇ ರೂಂನಲ್ಲಿರುವುದನ್ನ ವಿಡಿಯೋ ಮಾಡಿ ಯುವಕ-ಯುವತಿಯ ಬ್ಲ್ಯಾಕ್‌ಮೇಲ್!‌ ಸ್ನೇಹಿತರೇ ಇಲ್ಲಿ ದುಶ್ಮನ್‌! ಹುಷಾರ್
shivamogga crime news

Shivamogga  Mar 26, 2024 shivamogga crime news   ಶಿವಮೊಗ್ಗ ಜಿಲ್ಲೆಯ ಪ್ರಮುಖ ಪೊಲೀಸ್‌ ಸ್ಟೇಷನ್‌ ಒಂದರಲ್ಲಿ ಯುವಕ ಯುವತಿ ರೂಂನಲ್ಲಿರುವುದನ್ನ ವಿಡಿಯೋ ಮಾಡಿ ಬೆದರಿಕೆ ಹಾಕಿದ ಸಂಬಂಧ ಕೇಸ್‌ವೊಂದು ದಾಖಲಾಗಿದೆ. 

ಪರಸ್ಪರ ಸ್ನೇಹಿತರು ತಮ್ಮ ಸ್ನೇಹಿತನ ಹುಟ್ಟುಹಬ್ಬವನ್ನು ನೆರೆಯ ಜಿಲ್ಲೆಯಲ್ಲಿ ಆಚರಿಸಲು ನಿರ್ಧರಿಸಿದ್ದರು.ಅದರಂತೆ ಎಲ್ಲರೂ ಒಂದು ಕಡೆಯಲ್ಲಿ ಸೇರುವ ನಿರ್ಧಾರವಾಗಿತ್ತು. ಈ ನಡುವೆ ಆರೋಪಿ ಯುವಕ-ಯುವತಿ ಉದ್ದೇಶಪೂರ್ವಕವಾಗಿ ಬರುವುದು ತಡವಾಗುತ್ತೆ ಎಂದು ಮಹಿಳೆಯೊಬ್ಬರಿಗೆ ಹೇಳಿ ಅವರನ್ನ ಇನ್ನೊಬ್ಬ ಸ್ನೇಹಿತನ ಜೊತೆಗೆ ಕಳುಹಿಸಿದ್ದಾರೆ. 

ಅವರು ಹೇಳಿದಂತೆ ಅಲ್ಲಿಗೆ ಹೋದ ಸಂದರ್ಭದಲ್ಲಿ ಆರೋಪಿ ಯುವಕ-ಯುವತಿ ಜನರೊಂದಿಗೆ ದಾಳಿ ಮಾಡಿ ವಿಡಿಯೋ ಮಾಡಿ ನಿಮ್ಮ ಮಾನ ಕಳೆಯುತ್ತೇನೆ ದುಡ್ಡು ಕೊಡಬೇಕು ಎಂದು ಪೀಡಿಸಲು ಆರಂಭಿಸಿದ್ದಾರೆ. ಕಳೆದ ವರ್ಷದ ಸೆಪ್ಟೆಂಬರ್‌ ತಿಂಗಳಿನಿಂದ ಇದೇ ವಿಚಾರವಾಗಿ ಬ್ಲಾಕ್‌ಮೇಲ್‌ ಮಾಡಲು ಆರಂಭಿಸಿದ್ದಾರೆ. ಇದರಿಂದ ನೊಂದ ಮಹಿಳೆಯು ಶಿವಮೊಗ್ಗ ಜಿಲ್ಲೆಯ ಪೊಲೀಸರಿಗೆ ಕಂಪ್ಲೆಂಟ್‌ ನೀಡಿದ್ದು ಅದರಂತೆ ಕೇಸ್‌ ದಾಖಲಾಗಿದೆ. 

ಸೂಚನೆ: ಪ್ರಕರಣದ ವೈಯಕ್ತಿಕ ವಿವರಗಳು ಗೌಪ್ಯವಾಗಿ ಇಡಲಾಗಿದೆ.