ದೊಡ್ಡಪೇಟೆ ಪೊಲೀಸ್‌ ಸ್ಟೇಷನ್‌ ಪೊಲೀಸರಿಂದ ಸೀಗೆಹಟ್ಟಿಯಲ್ಲಿ ರೇಡ್‌ ! ಸಿಕ್ಕಿದ್ದೇನು?

Doddapet police station raid at Seegehatti What did you get

ದೊಡ್ಡಪೇಟೆ ಪೊಲೀಸ್‌ ಸ್ಟೇಷನ್‌ ಪೊಲೀಸರಿಂದ ಸೀಗೆಹಟ್ಟಿಯಲ್ಲಿ ರೇಡ್‌ ! ಸಿಕ್ಕಿದ್ದೇನು?
Doddapet police station raid

Shivamogga  Mar 26, 2024 Doddapet police station raid  ಶಿವಮೊಗ್ಗದ ದೊಡ್ಡಪೇಟೆ ಪೊಲೀಸರು ಹಳೆಯ ಶಿವಮೊಗ್ಗದ ಸೀಗೆಹಟ್ಟಿಯಲ್ಲಿ ರೇಡ್‌ ನಡೆಸಿದ್ದಾರೆ. ಈ ವೇಳೆ ಅಕ್ರಮ ಮದ್ಯ ಪತ್ತೆಯಾಗಿದೆ. ನಿನ್ನೆ ದಿನ ನಡೆದ ರೇಡ್‌ನಲ್ಲಿ 10 ಸಾವಿರಕ್ಕೂ ಅಧಿಕ ಮೌಲ್ಯದ ಮದ್ಯ ಜಪ್ತಿ ಮಾಡಲಾಗಿದೆ. 

ದಿನಾಂಕ  26-03-2024 ರಂದು ಬೆಳಗ್ಗೆ ಶಿವಮೊಗ್ಗ ಟೌನ್ ಸೀಗೆಹಟ್ಟಿ, ಓಟಿ ರಸ್ತೆಯಲ್ಲಿರುವ ಪಾಳು ಬಿದ್ದಿರುವ ಮನೆಯ ಬಳಿ ದೊಡ್ಡಪೇಟೆ ಪೊಲೀಸ್‌ ಸ್ಟೇಷನ್‌ ಪೊಲೀಸರು ರೇಡ್‌ ನಡೆಸಿದ್ದಾರೆ.. 

ಮನೆಯ ಹಿಂಭಾಗದ ಓಣಿಯಲ್ಲಿ  ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಅಕ್ರಮವಾಗಿ ಮದ್ಯ ಸಂಗ್ರಹ ಮಾಡಿಟ್ಟುಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಸಂಬಂಧ  ರವಿ ಪಾಟೀಲ್ ಪಿಐ,  ದೊಡ್ಡಪೇಟೆ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂಧಿಗಳ ತಂಡ ರೇಡ್‌ ನಡೆಸಿತ್ತು. 

ಈ ದಾಳಿಯಲ್ಲಿ  ಅಂದಾಜು ಮೌಲ್ಯ 10,079 /- ರೂಗಳ ಒಟ್ಟು 22.1 ಲೀಟರ್ ಮದ್ಯವನ್ನು ಅಮಾನತ್ತುಪಡಿಸಿಕೊಂಡು ದೊಡ್ಡಪೇಟೆ ಪೊಲೀಸ್ ಠಾಣಾ ಗುನ್ನೆ ಸಂಖ್ಯೆ 0116/2024 ಕಲಂ 32, 34 ಕೆ. ಇ ಕಾಯ್ದೆ - 1965 ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.