ಬಸ್​ಸ್ಟ್ಯಾಂಡ್​ ಬಳಿ ನಿತ್ರಾಣ ಸ್ಥಿತಿಯಲ್ಲಿ ಸಿಕ್ಕ ಇಬ್ಬರ ಸಾವು! ಪೊಲೀಸ್ ಇಲಾಖೆ ಹೊರಡಿಸಿದೆ ಈ ಪ್ರಕಟಣೆ!

Two unidentified men, who were found in a weak condition near the bus stand, died. This announcement has been issued by the police department for identification!

ಬಸ್​ಸ್ಟ್ಯಾಂಡ್​ ಬಳಿ ನಿತ್ರಾಣ ಸ್ಥಿತಿಯಲ್ಲಿ ಸಿಕ್ಕ ಇಬ್ಬರ ಸಾವು!  ಪೊಲೀಸ್ ಇಲಾಖೆ ಹೊರಡಿಸಿದೆ ಈ ಪ್ರಕಟಣೆ!

KARNATAKA NEWS/ ONLINE / Malenadu today/ Jul 3, 2023 SHIVAMOGGA NEWS

ಶಿವಮೊಗ್ಗ ನಗರದ ಬಸ್​ ಸ್ಟಾಂಡ್​ಗಳ ಬಳಿಯಲ್ಲಿ ನಿತ್ರಾಣಗೊಂಡು, ಬಳಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಇಬ್ಬರು ವ್ಯಕ್ತಿಗಳ ಗುರುತು ಪತ್ತೆಗಾಗಿ ಪೊಲೀಸ್ ಇಲಾಖೆ ಪ್ರಕಟಣೆಯನ್ನು ಹೊರಡಿಸಿದೆ. 

ಪ್ರಕರಣ 1

ಶಿವಮೊಗ್ಗದ  ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೂನ್ 21 ರಂದು ನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿ ನಿತ್ರಾಣಗೊಂಡು, ಅಸ್ವಸ್ಥನಾಗಿದ್ದ ಸುಮಾರು 60 ರಿಂದ 65 ವರ್ಷದ ಅಪರಿಚಿತ ವ್ಯಕ್ತಿಯನ್ನು ಸಾರ್ವಜನಿಕರು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಅಲ್ಲಿ, ಚಿಕಿತ್ಸೆ ಫಲಕಾರಿಯಾಗದೇ ಜೂನ್ 24 ರಂದು ಆತ ಮೃತಪಟ್ಟಿರುತ್ತಾನೆ. ಈ ವ್ಯಕ್ತಿಯ ಹೆಸರು ಗಣೇಶ ಎಂದಿದ್ದು, ಈತನ ಸಂಬಂಧಿಕರು ಅಥವಾ ವಿಳಾಸ ಪತ್ತೆಯಾಗಿರುವುದಿಲ್ಲ.  ಮೃತ ವ್ಯಕ್ತಿ ಸುಮಾರು 05.08 ಇಂಚು ಎತ್ತರ, ಗೋಧಿ ಮೈಬಣ್ಣ, ದೃಢವಾದ ಮೈಕಟ್ಟು , ಕೋಲುಮುಖ ಹೊಂದಿದ್ದು, ತಲೆಯಲ್ಲಿ 03 ಇಂಚು ಉದ್ದದ ಬಿಳಿ ಕೂದಲು, 2 ಇಂಚು ಉದ್ದದ ಗಡ್ಡ ಮೀಸೆ ಇರುತ್ತದೆ. ಮೈ ಮೇಲೆ ಬಿಳಿ ಬಣ್ಣದ ಕೆಂಪು ಗೆರೆಗಳಿರುವ ತುಂಬು ತೋಳಿನ ಶರ್ಟ್, ನೀಲಿ ಬಣ್ಣದ ಚಡ್ಡಿ  ಧರಿಸಿರುತ್ತಾನೆ. 

ಪ್ರಕರಣ2 

ಇನ್ನೊಂದು ಪ್ರಕರಣದಲ್ಲಿ ಜುಲೈ 02 ರಂದು ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ನಿತ್ರಾಣಗೊಂಡು, ಅಸ್ವಸ್ಥನಾಗಿದ್ದ ಸುಮಾರು 55 ರಿಂದ 60 ವರ್ಷದ ಅಪರಿಚಿತ ವ್ಯಕ್ತಿಯನ್ನು ಸಾರ್ವಜನಿಕರು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು ವೈದ್ಯರು ಪರೀಕ್ಷಿಸಿ ಮೃತಪಟ್ಟಿದ್ಧಾನೆ. 

ಈ ವ್ಯಕ್ತಿಯ ಹೆಸರು, ಸಂಬಂಧಿಕರು ಅಥವಾ ವಿಳಾಸ ಪತ್ತೆಯಾಗಿರುವುದಿಲ್ಲ.   ಮೃತ ವ್ಯಕ್ತಿ ಸುಮಾರು 05.05 ಇಂಚು ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು , ದುಂಡುಮುಖ ಹೊಂದಿದ್ದು, ತಲೆಯಲ್ಲಿ 02 ಇಂಚು ಉದ್ದದ ಬಿಳಿ ಕೂದಲು, 1 ಇಂಚು ಉದ್ದದ ಗಡ್ಡ ಮೀಸೆ ಇರುತ್ತದೆ. ಮೈ ಮೇಲೆ ನೀಲಿ ಬಣ್ಣದ ಅರ್ಧ ತೋಳಿನ ಟೀಶರ್ಟ್, ಕಪ್ಪನೆಯ ಬರ್ಮುಡ  ಧರಿಸಿರುತ್ತಾನೆ. 

ಎರಡೂ ಮೃತದೇಹಗಳನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು, ಮೃತ ವ್ಯಕ್ತಿಗಳ ವಾರಸುದಾರರು ಯಾರಾದರೂ ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ಸಂಖ್ಯೆ : 08182-261414 / 9611761255 ಗಳನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ. 


600 ಕ್ಕೂ ಹೆಚ್ಚು ಮಕ್ಕಳಿಗೆ ಸ್ಕೂಲ್ ಕಿಟ್ ವಿತರಣೆ ! ಏನಿದು ಗೊತ್ತಾ ಕಾರ್ಯಕ್ರಮ!

ಯೂಥ್ ಫಾರ್ ಸೇವಾ ಹಾಗೂ  ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸಹಯೋಗದೊಂದಿಗೆ ವಿವಿಧ ಸರ್ಕಾರಿ ಶಾಲಾ ಮಕ್ಕಳಿಗೆ ಸ್ಕೂಲ್ ಕಿಟ್ ಗಳನ್ನು ವಿತರಿಸಲಾಯಿತು, ‘

ಭದ್ರಾವತಿ ಭಾಗದಲ್ಲಿ ಎರಡು ಶಾಲೆಗಳಿಗೆ, ತೀರ್ಥಹಳ್ಳಿ ಭಾಗದಲ್ಲಿ ಒಂದು ಶಾಲೆಗೆ, ಶಿಕಾರಿಪುರ ಭಾಗದಲ್ಲಿ ಎರಡು ಶಾಲೆಗಳಿಗೆ, ಸೊರಬ ಭಾಗದಲ್ಲಿ ಎರಡು ಶಾಲೆಗಳಿಗೆ ಹಾಗೂ ಹೊಸನಗರ ಭಾಗದಲ್ಲಿ ಮೂರು ಶಾಲೆಗಳಿಗೆ ಸೇರಿದಂತೆ ಒಟ್ಟು 10 ಸರ್ಕಾರಿ ಶಾಲೆಯ 600 ಕ್ಕೂ ಹೆಚ್ಚು ಮಕ್ಕಳಿಗೆ ಸ್ಕೂಲ್ ಕಿಟ್ ಗಳನ್ನು ವಿತರಿಸಲಾಯಿತು,  

ಕನಸಿನ ಕಟ್ಟೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗೇಂದ್ರಪ್ಪನವರು ಮತ್ತು ಯೂಥ್ ಫಾರ್ ಸೇವಾದ ಸಂಯೋಜಕರಾದ ಹರೀಶ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಈ ಎಲ್ಲಾ ಕಾರ್ಯಕ್ರಮದಲ್ಲಿ ಯೂಥ್ ಫಾರ್ ಸೇವಾದ 30 ಕ್ಕೂ ಹೆಚ್ಚು ಸೇವಾ ಕಾರ್ಯಕರ್ತರು ಆಯಾ ಸ್ಕೂಲ್ ಭಾಗದಲ್ಲಿ ಕಾರ್ಯನಿರ್ವಹಿಸಿ ಸ್ಕೂಲ್ ಕಿಟ್ ಗಳನ್ನು ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿಕೊಟ್ಟಿದ್ದಾರೆ.

ಯೂಥ್ ಫಾರ್ ಸೇವಾ  ಸಂಸ್ಥೆಯು ಶಿಕ್ಷಣ, ಆರೋಗ್ಯ, ಪರಿಸರ ಮತ್ತು ಜೀವನ ಕೌಶಲ್ಯಗಳ ಬಗಗಿನ ಕಾರ್ಯಕ್ರಮಗಳನ್ನು ರಾಷ್ಟ್ರದಾದ್ಯಂತ ನಡೆಸಿಕೊಡುತ್ತಿದ್ದು ಈಗ ಶಿವಮೊಗ್ಗದಲ್ಲಿ ತನ್ನ ಕಾರ್ಯಕ್ರಮದ ಕಾರ್ಯಚಟುವಟಿಕೆಗಳನ್ನು ಶಿವಮೊಗ್ಗದ ಜಿಲ್ಲಾ ಸಂಯೋಜಕರಾದ ಹರೀಶ್‍ ರವರ ನೇತೃತ್ವದಲ್ಲಿ ತನ್ನ ಕಾರ್ಯ ವಿಸ್ತರಣೆ ಮಾಡಿದೆ. 


ಎಲ್ಲಿದೆ ಮೋದಿ ಗ್ಯಾರಂಟಿ!? ಶಿವಮೊಗ್ಗದಲ್ಲಿ ಕಿಮ್ಮನೆ ರತ್ನಾಕರ್​ ನೇತೃತವದಲ್ಲಿ ಕಾಂಗ್ರೆಸ್ ಸತ್ಯಾಗ್ರಹ!



ಶಿವಮೊಗ್ಗ/ ಕೇಂದ್ರ ಸರ್ಕಾರ ಅಕ್ಕಿ ತಾರತಮ್ಯ ಮಾಡ್ತಿದೆ ಹಾಗೂ  ಸುಳ್ಳು ಭರವಸೆಗಳನ್ನು ನೀಡ್ತಿದೆ ಎಂಧು ಆರೋಪಿಸಿ ಇವತ್ತು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು  ಮಹಾತ್ಮಾ ಗಾಂಧಿ ಪಾರ್ಕಿನ ಗಾಂಧಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹ ಕೈಗೊಂಡರು. 

ಪ್ರತಿಭಟನೆಯ ಆರಂಭದಿಂದಲೇ  ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರದ ಸರ್ಕಾರ ಯಾವ ಭರವಸೆಗಳನ್ನೂ ಈಡೇರಿಸಿಲ್ಲ. ಅವರ ಪ್ರಣಾ ಳಿಕೆಯಲ್ಲಿ ಕೊಟ್ಟ ಭರವಸೆಗಳು ಹುಸಿಯಾಗಿವೆ. ಮೋದಿ ಅವರೇ ಹೇಳಿದಂತೆ ಉದ್ಯೋಗ ಕೊಟ್ಟಿಲ್ಲ. ಮನೆಗಳನ್ನು ಕಟ್ಟಿಸಿಲ್ಲ. ಹಣ ಹಾಕುತ್ತೇವೆ ಎಂದರು. ಅದನ್ನೂ ಕೊಟ್ಟಿಲ್ಲ. ಮಹಿಳೆಯರಿಗೆ ಮದುವೆಗೆ ಚಿನ್ನ ಕೊಡುತ್ತೇವೆ ಎಂದಿದ್ದರು. ಅದನ್ನೂ ಕೊಟ್ಟಿಲ್ಲ. ಯಾವ ಭರವಸೆಗಳನ್ನೂ ಅವರು ಈಡೇರಿಸಿಲ್ಲ. ಈಗ ರಾಜ್ಯ ಸರ್ಕಾರಕ್ಕೆ ಅಕ್ಕಿಯನ್ನೂ ಕೊಡಲಿಲ್ಲ ಎಂದು ಆರೋಪಿಸಿದ್ರು. 

ಕೇಂದ್ರ ಸರ್ಕಾರ  9 ವರ್ಷಗಳ ಹಿಂದೆಯೇ ಹಲವು ಭರವಸೆಗಳನ್ನು ನೀಡಿತ್ತು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿತ್ತು. ಅದರಂತೆ 9 ವರ್ಷದಲ್ಲಿ 18 ಕೋಟಿ ಉದ್ಯೋಗಗಳನ್ನು ನೀಡಬೇಕಿತ್ತು. ಆದರೆ ನೀಡುವುದಿರಲಿ, ಇರುವ ಉದ್ಯೋಗಗಳನ್ನೇ ಕಸಿದುಕೊಂಡಿದೆ ಎಂದು ದೂರಿದರು. 

ಇನ್ನೂ ವೇಳೆ ಆಕ್ರೋಶ ಹೊರಹಾಕಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಅಧಿಕಾರ ಇಲ್ಲದೆ ಬದುಕಲು ಸಾಧ್ಯವೇ  ಇಲ್ಲ ಎಂಬಂತೆ ಬಿಜೆಪಿಯವರು ವರ್ತಿಸುತ್ತಿದ್ಧಾರೆ ಎಂದು ಆರೋಪಿಸಿದ್ರು. ಬಿಜೆಪಿಯವರು, ಹಪಾಹಪಿತನಕ್ಕೆ ಒಳಗಾಗಿದ್ದಾರೆ. ಜಾತಿ, ಧರ್ಮ, ಹಣದ ಮೇಲೆ ಅದೂ ಸಾಧ್ಯವಾಗದಿದ್ದರೆ ಶಾಸಕರನ್ನು ಕೊಂಡುಕೊಳ್ಳುವ ಮೂಲಕ ಪ್ರಜಾಪ್ರಭುತ್ವವನ್ನೇ ಖರೀದಿ ಮಾಡಿದ್ದಾರೆ ಎಂದ ಕಿಮ್ಮನೆ ರತ್ನಾಕರ್​,  ಪ್ರಣಾಳಿಕೆಯಲ್ಲಿ ನೀಡಿದ ಯಾವ ಭರವಸೆಯನ್ನೂ ಈಡೇರಿಸದ ಬಿಜೆಪಿ,  ಈಗ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಮನೆಗಳನ್ನೂ ನೀಡಲಿಲ್ಲ. ಉದ್ಯೋಗವನ್ನೂ ಕೊಡಲಿಲ್ಲ. ಡಾಲರ್ ರೇಟ್ ಇಳಿಸುತ್ತೇವೆ ಎಂದು ಅದನ್ನೂ ಮಾಡಲಿಲ್ಲ ಎಂದರು.