ಒಂದೇ ದಿನ ಶಿವಮೊಗ್ಗದ ವಿವಿಧ ಸ್ಟೇಷನ್​ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಐದು ASI ಸೇರಿದಂತೆ ಏಳು ಅಧಿಕಾರಿಗಳ ನಿವೃತ್ತಿ!

Seven officers, including five ASI working at various stations in Shivamogga, retired!

ಒಂದೇ ದಿನ  ಶಿವಮೊಗ್ಗದ ವಿವಿಧ ಸ್ಟೇಷನ್​ಗಳಲ್ಲಿ   ಕಾರ್ಯನಿರ್ವಹಿಸುತ್ತಿದ್ದ ಐದು ASI  ಸೇರಿದಂತೆ ಏಳು ಅಧಿಕಾರಿಗಳ ನಿವೃತ್ತಿ!

KARNATAKA NEWS/ ONLINE / Malenadu today/ Jul 1, 2023 SHIVAMOGGA NEWS

ಶಿವಮೊಗ್ಗದ ವಿವಿಧ ಸ್ಟೇಷನ್​ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಐವರು ಎಎಸ್​​ಐ, ಒಬ್ಬರು ಪಿಎಸ್​ಐ ಹಾಗೂ ಒಬ್ಬರು ಎಆರ್​ ಎಸ್​ಐ ನಿವೃತ್ತರಾಗಿದ್ದಾರೆ. ಇವರಿಗೆ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್​ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದ್ದಾರೆ. 

ನಿವೃತ್ತರಾದ ಅಧಿಕಾರಿಗಳು

1) ಜಿ ಮೋಹನ್ ಪಿಎಸ್ಐ ಹೊಳೆಹೊನ್ನೂರು ಪೊಲೀಸ್ ಠಾಣೆ, 

2) ವಿ ಎಸ್, ತಿಮ್ಮಯ್ಯ, ಎಎಸ್ಐ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ, 

3) ಟಿ ಹೆಚ್ ಬಸವರಾಜ್, ಎಎಸ್ಐ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಶಿವಮೊಗ್ಗ, 

4) ಸುರೇಶ್ ಆರ್, ಎಎಸ್ಐ, ಹಳೆನಗರ ಪೊಲೀಸ್ ಠಾಣೆ ಭದ್ರಾವತಿ, 

5) ಸಿ ರಾಜೇಂದ್ರಪ್ಪ, ಎಎಸ್ಐ,  ಜಯನಗರ ಪೊಲೀಸ್ ಠಾಣೆ,

6) ಕೆ. ಕೆ. ತ್ಯಾಗರಾಜ್, ಎಎಸ್ಐ, ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ 

7) ಎ. ಟಿ ಶಿವಾಜಿ ರಾವ್, ಎಆರ್.ಎಸ್ಐ ಡಿಎಆರ್

ನಿನ್ನೆ ಅಂದರೆ,  30-06-2023  ರಂದು ಈ ಅಧಿಕಾರಿಗಳು ನಿವೃತ್ತರಾಗಿದ್ದು, ಅವರಿಗೆ  ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಈ ವೇಳೆ ಎಸ್​ಪಿ  ಮಿಥುನ್ ಕುಮಾರ್  ಅನಿಲ್‌ ಕುಮಾರ್‌ ಭೂಮರಡ್ಡಿ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ,  ಜಿಲ್ಲಾ ಪೊಲೀಸ್ ಕಛೇರಿಯ  ಸತೀಶ್, ಸಹಾಯಕ ಆಡಳಿತಾಧಿಕಾರಿಗಳು, ಶ್ರೀ ಮಾಳಗಿ ಶಾಖಾಧೀಕ್ಷಕರು ಮತ್ತು ಶ್ರೀ ಅರುಣ್, ಶಾಖಾಧೀಕ್ಷಕರವರು ಉಪಸ್ಥಿತರಿದ್ದರು.


ಬಕ್ರೀದ್ ನಮಾಜ್​ ಮುಗಿಸಿ ಬರುತ್ತಿದ್ದವರ ಮೇಲೆ ಜೇನುನೊಣಗಳ ದಾಳಿ! 22 ಕ್ಕೂ ಹೆಚ್ಚು ಮಂದಿಗೆ ಪೆಟ್ಟು

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಹಳ್ಳಿಬೈಲ್​ ಗ್ರಾಮದಲ್ಲಿ ಬಕ್ರಿದ್ ಹಬ್ಬದ ದಿನ ಜೇನುನೊಣಗಳು ದಾಳಿ ಇಟ್ಟಿವೆ. ಪರಿಣಾಮ 22 ಮಂದಿ ಜೇನುನೊಣಗಳು ಕಚ್ಚಿದ್ದರಿಂದ ಅಸ್ವಸ್ಥಗೊಂಡಿದ್ದರು. ಸುಮಾರು 150 ಮಂದಿ ನಮಾಜ್ ಮುಗಿಸಿಕೊಂಡು ವಾಪಸ್ ಆಗುತ್ತಿದ್ದ ವೇಳೆ ಅಲ್ಲಿಯೇ ಇದ್ದ ಜೇನುನೊಣಗಳು ದಾಳಿನಡೆಸಿವೆ. ಇನ್ನೂ ಜೇನು ದಾಳಿಗೆ ತುತ್ತಾದವರು ಸಾಗರ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಯಲ್ಲಿನ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗಿದ್ದಾರೆ. 


ಟ್ರಕ್ಕಿಂಗ್​ಗೆ ಬಂದಿದ್ದ ಯುವಕ ಸಾವು! ನೇತ್ರಾವತಿ ಪೀಕ್​ ಸ್ಪಾಟ್​ನಲ್ಲಿ ನಡೆದಿದ್ದೇನು?

ಚಿಕ್ಕಮಗಳೂರು  ಜಿಲ್ಲೆಯಲ್ಲಿ ಟ್ರಕ್ಕಿಂಗ್​ಗೆ ಎಂದು ಬಂದಿದ್ದ ಪ್ರವಾಸಿಗನೊಬ್ಬ ಹೃದಯಘಾತದಿಂದಾಗಿ ಸಾವನ್ನಪ್ಪಿದ್ಧಾನೆ. 27 ವರ್ಷದ ರಕ್ಷಿತ್ ಮೃತ ಯುವಕ. ಮೂಲತಃ ಮೈಸೂರು ಕಡೆಯವರು. ಮೈಸೂರಿನಿಂದ ಒಟ್ಟಾರೆ ಏಳು ಮಂದಿ ಟ್ರಕ್ಕಿಂಗ್​ಗೆ ಅಂತಾ ಚಿಕ್ಕಮಗಳೂರಿಗೆ ಆಗಮನಿಸಿದ್ದರು, ಕುದುರೆ ಮುಖದಿಂದ ನೇತ್ರಾವತಿ ಪೀಕ್ ಸ್ಪಾಟ್​ಗೆ ತೆರಳುತ್ತಿದ್ದರು. ಈ ನಡುವೆ ದಾರಿಯಲ್ಲಿಯೇ ರಕ್ಷಿತ್​ಗೆ ಎದೆನೋವು ಕಾಣಿಸಿದೆ. ತಕ್ಷಣಕ್ಕೆ ಅವರಿಗೆ ಚಿಕಿತ್ಸೆ ನೀಡಲು ಸಹ ಅಲ್ಲಿ ಸಾಧ್ಯವಿರಲಿಲ್ಲ. ಇನ್ನೂ ಸ್ಥಳದಲ್ಲಿಯೇ ಅವರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಕಳಸಕ್ಕೆ ರವಾನೆ ಮಾಡಿದ್ದು, ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ದಾಖಲಾಗಿದೆ.