ಬಕ್ರೀದ್ ನಮಾಜ್​ ಮುಗಿಸಿ ಬರುತ್ತಿದ್ದವರ ಮೇಲೆ ಜೇನುನೊಣಗಳ ದಾಳಿ! 22 ಕ್ಕೂ ಹೆಚ್ಚು ಮಂದಿಗೆ ಪೆಟ್ಟು

Bees attack those who were returning after Bakrid namaz! More than 22 people injured

ಬಕ್ರೀದ್ ನಮಾಜ್​ ಮುಗಿಸಿ ಬರುತ್ತಿದ್ದವರ ಮೇಲೆ ಜೇನುನೊಣಗಳ ದಾಳಿ!  22 ಕ್ಕೂ ಹೆಚ್ಚು ಮಂದಿಗೆ ಪೆಟ್ಟು

KARNATAKA NEWS/ ONLINE / Malenadu today/ Jul 1, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಹಳ್ಳಿಬೈಲ್​ ಗ್ರಾಮದಲ್ಲಿ ಬಕ್ರಿದ್ ಹಬ್ಬದ ದಿನ ಜೇನುನೊಣಗಳು ದಾಳಿ ಇಟ್ಟಿವೆ. ಪರಿಣಾಮ 22 ಮಂದಿ ಜೇನುನೊಣಗಳು ಕಚ್ಚಿದ್ದರಿಂದ ಅಸ್ವಸ್ಥಗೊಂಡಿದ್ದರು. ಸುಮಾರು 150 ಮಂದಿ ನಮಾಜ್ ಮುಗಿಸಿಕೊಂಡು ವಾಪಸ್ ಆಗುತ್ತಿದ್ದ ವೇಳೆ ಅಲ್ಲಿಯೇ ಇದ್ದ ಜೇನುನೊಣಗಳು ದಾಳಿನಡೆಸಿವೆ. ಇನ್ನೂ ಜೇನು ದಾಳಿಗೆ ತುತ್ತಾದವರು ಸಾಗರ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಯಲ್ಲಿನ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗಿದ್ದಾರೆ. 


BIG NEWS / ಶಿವಮೊಗ್ಗ ಡಿಸಿಸಿ ಬ್ಯಾಂಕ್ ಸ್ಕ್ಯಾಮ್ ಕೇಸ್ ಗೆ ಎಂಟ್ರಿಯಾಯ್ತಾ ಜಾರಿ ನಿರ್ದೇಶನಾಲಯ ! ನಡೆಯುತ್ತಾ ED ತನಿಖೆ

ಶಿವಮೊಗ್ಗ/ ನಗರದ ಡಿಸಿಸಿ ಬ್ಯಾಂಕ್​ ನಲ್ಲಿ ನಡೆದಿದ್ದ 62 ಕೋಟಿ ರೂಪಾಯಿ ಬಂಗಾರದ ಅಡಮಾನ ಸಾಲ ಪ್ರಕರಣ ಇದೀಗ ಮತ್ತೊಂದು ಟ್ವಿಸ್ಟ್​ ಪಡೆದುಕೊಳ್ಳುವ ಸಾಧ್ಯತೆ ಇದೆ. ಪ್ರಕರಣದಲ್ಲಿ ದೇಶದ ಆರ್ಥಿಕ ಅವ್ಯವಹಾರಗಳ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ ಎಂಟ್ರಿಯಾಗುವ ನಿರೀಕ್ಷೆಯಿದ್ದು, ಈ ಸಂಬಂಧ ಪೂರ್ವ ಪ್ರಕ್ರಿಯೆಗಳು ನಡೆಯುತ್ತಿವೆ.ಸಾಕ್ಷಿ ಎಂಬಂತೆ ಸದ್ಯ ಜಾರಿನಿರ್ದೇಶನಾಲಯದ ಬೆಂಗಳೂರು ಪ್ರಾದೇಶಿಕ ಕಚೇರಿಯ ಸಹಾಯಕ ನಿರ್ದೇಶಕ ಅಜಯ್ ಚೌದರಿ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಿಗೆ ಪ್ರಮುಖ ಮಾಹಿತಿಗಳನ್ನ ಮೂರು ದಿನಗಳಲ್ಲಿ ಸಲ್ಲಿಸುವಂತೆ ಸೂಚಿಸಿದ್ದಾರೆ. 

ಜಾರಿ ನಿರ್ದೇಶನಾಲಯ ಕೇಳಿದ್ದೇನು? 

ಶಿವಮೊಗ್ಗ ಡಿಸಿಸಿ ಬ್ಯಾಂಕ್​ ನಗರ ಶಾಖೆಗೆ ಸಂಬಂಧಿಸಿದ 2012 ರಿಂದ 2014 ರ ಅವಧಿಯ, 62 ಕೋಟಿ ರೂಪಾಯಿ ಬಂಗಾರ ಅಡಮಾನದ ಪ್ರಕರಣಕ್ಕೆ ಸಂಬಂಧಿಸಿದ  34 ಸಾಲ ಖಾತೆಗಳಿಗೆ ಸಂಬಂಧಿಸಿದ ಎಲ್ಲಾ ಕೆವೈಸಿ ದಾಖಲೆಗಳನ್ನು ಸಲ್ಲಿಸಬೇಕು.

ಹಗರಣ ನಡೆದ ಅವಧಿಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ, ಆಡಳಿತ ಮಂಡಳಿ ನಿರ್ದೇಶಕರೆಲ್ಲರ ಹೆಸರು, ವಿಳಾಸ, ಫೋನ್ ನಂ., ಈ-ಮೇಲ್ ಐಡಿ ಹಾಗೂ ಅವರುಗಳ ಜವಾಬ್ದಾರಯ  ವಿವರ ನೀಡುವಂತೆ ಸೂಚಿಸಲಾಗಿದೆ.ಸದರಿ ಅವಧಿಯಲ್ಲಿನ ಡಿಸಿಸಿ ಬ್ಯಾಂಕಿನ ಜನರಲ್ ಮ್ಯಾನೇಜರ್, ಉಪ ಮತ್ತು ಸಹಾಯಕ ಜನರಲ್ ಮ್ಯಾನೇಜರ್ ಆಗಿದ್ದವರು, ಶಾಖಾ ವ್ಯವಸ್ಥಾಪಕರು, ಸಿಇಒ, ಕ್ಯಾಷಿಯರ್, ಬಂಗಾರದ ವ್ಯಾಲ್ಯುಯರ್ ಆಗಿದ್ದವರ ಹೆಸರು, ವಿಳಾಸ, ಫೋನ್ ನಂ.,ಈ-ಮೇಲ್ ಐಡಿ, ಅವರುಗಳ ಜವಾಬ್ದಾರಿ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಜೊತೆಗೆ ಸದರಿ ಬ್ಯಾಂಕ್ ಶಾಖೆಯ ಹಾಲಿ ಶಾಖಾ ವ್ಯವಸ್ಥಾಪಕರ ವಿವರ ನೀಡಬೇಕೆಂದು ಸೂಚಿಸಲಾಗಿದೆ.

  

ಏನಿದು ಪ್ರಕರಣ

ಡಿಸಿಸಿ ಬ್ಯಾಂಕ್ ನಲ್ಲಿ 2014 ರಲ್ಲಿ ನಡೆದಿರುವ 62 ಕೋಟಿ ರೂ. ಬಂಗಾರದ ಅಡಮಾನ ಸಾಲದ ಹಗರಣ ದೇಶದ ಗಮನ ಸೆಳೆದಿತ್ತು. ಚಿನ್ನವನ್ನೆ ಅಡಮಾನವಾಗಿ ಇಡದೇ ಹಾಗೂ ನಕಲಿ ಬಂಗಾರವನ್ನು ಅಡಮಾನವಾಗಿ ಇಟ್ಟು ಸಾಲ ನೀಡಿದ್ದ ಘಟನೆ ಬೆಳಕಿಗೆ ಬಂದಿತ್ತು. ಅಲ್ಲದೆ ಈ ಸಂಬಂಧ  ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲ ಡಿಸಿಸಿ ಎಂಡಿ ದೂರು ಕೊಟ್ಟಿದ್ದರು. ಆಗಿನ ಎಸ್​ಪಿ ಕೌಶಲೇಂದ್ರ ಕುಮಾರ್ ಈ ಪ್ರಕರಣ ವಿಶೇಷ ತಂಡ ರಚಿಸಿ 18  ಮಂದಿ ಬಂಧಿಸಿದ್ದರು. ನಂತರ ಪ್ರಕರಣ ಸಿಒಡಿಗೆ ತೆಕ್ಕೆಗೆ ಹೋಗಿದ್ದು, ಅಲ್ಲಿ ಕೆಲವರಿಗೆ ಕ್ಲೀನ್ ಚಿಟ್ ಸಿಕ್ಕಿದ್ದು, ಇನ್ನೂ ಕೆಲವರ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆಯಾಗಿತ್ತು. ಇದರ ನಡುವೆ  ಸಹಕಾರಿ ಇಲಾಖೆಯು ಸಹಕಾರ ಸಂಘಗಳ ಜಂಟಿ ನಿಬಂಧಕರು ಪಾಂಡುರಂಗ ಗರ್ಗ್​ ಪ್ರಕರಣ ಇಲಾಖಾ ತನಿಖೆ ನಡೆಸಿ ವರದಿ ಸಲ್ಲಿಸಿದ್ದರು.  ಅವ್ಯವಹಾರದಿಂದ ಬ್ಯಾಂಕ್‌ಗೆ ಆಗಿರುವ ನಷ್ಟವನ್ನು ಆಪಾದಿತರಿಂದ ವಸೂಲಿ ಮಾಡಬೇಕು ಎಂದು ಸಹಕಾರ ಸಂಘಗಳ ಜಂಟಿ ನಿಬಂಧಕರು ವರದಿಯಲ್ಲಿ ತಿಳಿಸಿದ್ದರು.ಇದೆ ಕಾರಣಕ್ಕೆ ಆಡಳಿತ ಮಂಡಳಿಯ ಏಳು ಮಂದಿಯನ್ನು ಅನರ್ಹಗೊಳಿಸಿದ್ದರು. ಆನಂತರ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಅಲ್ಲಿ ಆಡಳಿತ ಮಂಡಳಿಯ ಸದಸ್ಯರ ಅನರ್ಹತೆಯನ್ನು ರದ್ದುಗೊಳಿಸಲಾಗಿತ್ತು. ಸದ್ಯ ಈ ಪ್ರಕರಣ ಸಂಬಂಧ ಜಾರಿನಿರ್ದೇಶನಾಲಯ ವಿವಿಧ ಮಾಹಿತಿಗಳನ್ನು ಕೇಳಿರುವುದು ಗಮನಾರ್ಹವಾಗಿದೆ.ಈ ನಿಟ್ಟಿನಲ್ಲಿ  ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್  ಕಾಯ್ದೆ  2003ರ ಸೆಕ್ಷನ್ 54ರಡಿ ಜಾರಿ ನಿರ್ದೇಶನಾಲಯ ನಕಲಿ ಬಂಗಾರ ಸಾಲ ಹಗರಣದ ತನಿಖೆ ನಡೆಸುವ ಸಾಧ್ಯತೆ ಇದೆ…. 


ಟ್ರಕ್ಕಿಂಗ್​ಗೆ ಬಂದಿದ್ದ ಯುವಕ ಸಾವು! ನೇತ್ರಾವತಿ ಪೀಕ್​ ಸ್ಪಾಟ್​ನಲ್ಲಿ ನಡೆದಿದ್ದೇನು?

ಚಿಕ್ಕಮಗಳೂರು  ಜಿಲ್ಲೆಯಲ್ಲಿ ಟ್ರಕ್ಕಿಂಗ್​ಗೆ ಎಂದು ಬಂದಿದ್ದ ಪ್ರವಾಸಿಗನೊಬ್ಬ ಹೃದಯಘಾತದಿಂದಾಗಿ ಸಾವನ್ನಪ್ಪಿದ್ಧಾನೆ. 27 ವರ್ಷದ ರಕ್ಷಿತ್ ಮೃತ ಯುವಕ. ಮೂಲತಃ ಮೈಸೂರು ಕಡೆಯವರು. ಮೈಸೂರಿನಿಂದ ಒಟ್ಟಾರೆ ಏಳು ಮಂದಿ ಟ್ರಕ್ಕಿಂಗ್​ಗೆ ಅಂತಾ ಚಿಕ್ಕಮಗಳೂರಿಗೆ ಆಗಮನಿಸಿದ್ದರು, ಕುದುರೆ ಮುಖದಿಂದ ನೇತ್ರಾವತಿ ಪೀಕ್ ಸ್ಪಾಟ್​ಗೆ ತೆರಳುತ್ತಿದ್ದರು. ಈ ನಡುವೆ ದಾರಿಯಲ್ಲಿಯೇ ರಕ್ಷಿತ್​ಗೆ ಎದೆನೋವು ಕಾಣಿಸಿದೆ. ತಕ್ಷಣಕ್ಕೆ ಅವರಿಗೆ ಚಿಕಿತ್ಸೆ ನೀಡಲು ಸಹ ಅಲ್ಲಿ ಸಾಧ್ಯವಿರಲಿಲ್ಲ. ಇನ್ನೂ ಸ್ಥಳದಲ್ಲಿಯೇ ಅವರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಕಳಸಕ್ಕೆ ರವಾನೆ ಮಾಡಿದ್ದು, ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ದಾಖಲಾಗಿದೆ.