ಫ್ರೀಡಂಪಾರ್ಕ್​ನಲ್ಲಿ ಸಿಎಂ ಕಾರ್ಯಕ್ರಮ! ಶಿವಮೊಗ್ಗದಲ್ಲಿ ಎಲ್ಲೆಲ್ಲಿ ಪಾರ್ಕಿಂಗ್ ನಿಷೇಧ? ವಿವರ ಇಲ್ಲಿದೆ

SHIVAMOGGA  |  Jan 10, 2024  |   ಶಿವಮೊಗ್ಗದ ಫ್ರೀಡಂಪಾರ್ಕ್​ನಲ್ಲಿ ನಡೆಯಲಿರುವ ಯುವನಿಧಿ ಯೋಜನೆ ಉದ್ಘಾಟನೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ರವರು ಆಗಮಿಸಲಿದ್ದಾರೆ.ಈ ಹಿನ್ನೆಲೆಯಲ್ಲಿ  ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ  ತಾತ್ಕಾಲಿಕ ವಾಹನಗಳ ನಿಲುಗಡೆಗೂ ಅಧಿಸೂಚನೆಯನ್ನು ಹೊರಡಿಸಲಾಗಿದೆ. 

ವಾಹನ ನಿಲುಗಡೆ ನಿಷೇಧ

1) ಆಲ್ಗೊಳ ಸರ್ಕಲ್‌ನಿಂದ ಪೊಲೀಸ್ ಚೌಕಿ ಮಾರ್ಗವಾಗಿ ಉಷಾ ಸರ್ಕಲ್ ವರೆಗೆ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ನಿಷೇಧ.

2) ಹೆಲಿಪ್ಯಾಡ್ ಸರ್ಕಲ್ ನಿಂದ ಜೈಲ್ ಸರ್ಕಲ್‌ವರೆಗೆ ಹಾಗು ಜೈಲ್ ಸರ್ಕಲ್ ನಿಂದ ಲಕ್ಷ್ಮೀ ಟಾಕೀಸ್ ವರೆಗೆ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ನಿಷೇಧ.

3) ಎಂ.ಆರ್.ಎಸ್. ಸರ್ಕಲ್ ನಿಂದ ಬೈಪಾಸ್ ರಸ್ತೆ ಸಂದೇಶ್ ಮೋಟಾರ್ ಸರ್ಕಲ್ ನಿಂದ ಅಶೋಕ ಸರ್ಕಲ್ ಮೂಲಕ ಹೆಲಿಪ್ಯಾಡ್ ಮಾರ್ಗವಾಗಿ ವಿನೋಬನಗರ ಕೆಳದಿ ಚೆನ್ನಮ್ಮ ರಸ್ತೆ (60 ಅಡಿ ರಸ್ತೆ) – ಸೈಕೋತ್ಸವ ಸರ್ಕಲ್ ನಿಂದ ವಿನೋಬನಗರ ಕೆ.ಇ.ಬಿ. ಆಫೀಸ್ ವರೆಗೆ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ನಿಷೇಧ.

4) ರಾಜ್ ಕುಮಾರ್ ಸರ್ಕಲ್ ನಿಂದ ಮೇದಾರಿ ಕೇರಿ ರಸ್ತೆ ಬೋಮ್ಮನಕಟ್ಟೆ ರೈಲ್ವೆ ಗೇಟ್ ವರೆಗೆ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ನಿಷೇಧ.

5) ಪೊಲೀಸ್ ಚೌಕಿ (police chowki shimoga )ಯಿಂದ ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿ ಶನೇಶ್ವರ ದೇವಸ್ಥಾನ ರಸ್ತೆ ಮಾರ್ಗವಾಗಿ ಬೊಮ್ಮನ ಕಟ್ಟೆ ರೈಲ್ವೆ ಗೇಟ್‌ಗೆ ಹೋಗುವ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ನಿಷೇಧ.

ವಾಹನ ಸಂಚಾರದ ಮಾರ್ಗ ಬದಲಾವಣೆಯ ಬಗ್ಗೆ ನೀಡಲಾಗಿರುವ ಅಧಿಸೂಚನೆ ಇಲ್ಲಿದೆ : ಯುವನಿಧಿ ಕಾರ್ಯಕ್ರಮ! ವಾಹನ ಸಂಚಾರದ ಮಾರ್ಗ ಬದಲಾವಣೆ! ಓಡಾಡುವ ದಾರಿಯ ವಿವರ ಇಲ್ಲಿದೆ!

ಇನ್ನೂ ಅಕ್ಕಪಕ್ಕದ ಜಿಲ್ಲೆಯವರು  : ಸಿಎಂ ಕಾರ್ಯಕ್ರಮಕ್ಕೆ ಆಗಮಿಸುವವರಿಗಾಗಿ ಪಾರ್ಕಿಂಗ್ ವಿವರ & Google ರೂಟ್ ಮ್ಯಾಪ್ ಇಲ್ಲಿದೆ!

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು