shivamogga Mar 17, 2024 ಲೋಕಸಭಾ ಚುನಾವಣೆ 2024 ರ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗದಲ್ಲಿ ಪೊಲೀಸ್ ಇಲಾಖೆ ರೂಟ್ ಮಾರ್ಚ್ ನಡೆಸಿದೆ.
ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ರವಿ ಪಾಟೀಲ್ ಪಿ.ಐ. ರವರ ನೇತೃತ್ವದಲ್ಲಿ 16-03-2024 ರಂದು ಮಧ್ಯಾಹ್ನ ಪಥ ಸಂಚಲನ ನಡೆಸಿದೆ.
ಶಿವಮೊಗ್ಗ ನಗರದಲ್ಲಿ ಆರ್.ಎ.ಎಫ್ ಮತ್ತು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸ್ ಪಥ ಸಂಚಲನವನ್ನು ಹಮ್ಮಿಕೊಳ್ಳಲಾಗಿತ್ತು.
ಸಂದೇಶ ಮೋಟಾರ್ಸ್ ವೃತ್ತ ದಿಂದ ಪ್ರಾರಂಭವಾದ ಪಥ ಸಂಚಲನ, ಅಶೊಕ ವೃತ್ತ, ಎಎ ವೃತ್ತ, ಎಸ್ ಎನ್ ವೃತ್ತ, ಕರ್ನಾಟಕ ಸಂಘ, ಶಂಕರಮಠದಿಂದ ಹೊಳೆ ಬಸ್ ನಿಲ್ದಾಣಕ್ಕೆ ಬಂದು ಮುಕ್ತಾಯ ಮಾಡಲಾಯಿತು.
ಸದರಿ ಪಥ ಸಂಚನದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯ ವಸಂತ್, ಪಿಎಸ್ಐ, ಲೋಕೇಶ್ ಪಿಎಸ್ಐ ಮತ್ತು ಸುರೇಶ್ ಪಿಎಸ್ಐ ಹಾಗೂ ಆರ್. ಎ. ಎಫ್ ತುಕಡಿಯ ಅಧಿಕಾರಿ ಸಿಬ್ಬಂಧಿಗಳು ಹಾಗೂ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.