ಸಿಮೆಂಟ್ ಜಿಂಕೆ ಮೈಮೇಲೆ ಬಿದ್ದು ಗಾಂಧಿಬಜಾರ್​ನ 6 ವರ್ಷದ ಮಗು ಸಾವು!

Malenadu Today

Shivamogga |  Jan 29, 2024  | ಶಿವಮೊಗ್ಗ ಟ್ರೀ ಪಾರ್ಕ್​ ನಲ್ಲಿ ಸಿಮೆಂಟ್ ಜಿಂಕೆ ಮೇಲೆ ಕುಳಿತಿದ್ದ ಆರು ವರ್ಷದ ಮಗುವೊಂದು , ಸಿಮೆಂಟಿನ ಕಲಾಕೃತಿ ಮುರಿದು ಬಿದ್ದು ಸಾವನ್ನಪ್ಪಿದ ಘಟನೆ ನಿನ್ನೆ ನಡೆದಿದೆ. 

ಶಿವಮೊಗ್ಗ  ಜಿಲ್ಲೆಯ ಮುದ್ದಿನಕೊಪ್ಪದಲ್ಲಿ ಟ್ರೀ ಪಾರ್ಕ್​ ಇದೆ. ನಿನ್ನೆ ಭಾನುವಾರವಾದ್ದರಿಂದ ಮಗುವೊಂದನ್ನ ಕುಟುಂಬಸ್ಥರು ಅಲ್ಲಿಗೆ ಕರೆದೊಯ್ದಿದ್ದರು. ಮಗು ಅಲ್ಲಿ ಆಟವಾಡುತ್ತಿತ್ತು. ಈ ವೇಳೆ ಅಲ್ಲಿಯೇ ಇದ್ದ ಸಿಮೆಂಟ್​ನಲ್ಲಿ ಮಾಡಲಾಗಿದ್ದ ಕಲಾಕೃತಿ ಜಿಂಕೆಯ ಮೇಲೆ ಮಗುವನ್ನ ಕೂರಿಸಿದ್ದರು. 

ಈ ವೇಳೆ ಕಲಾಕೃತಿ ಮುರಿದುಬಿದ್ದಿದೆ.ಪರಿಣಾಮ ಕೆಳಕ್ಕೆ ಬಿದ್ದ ಮುಗುವಿಗೆ ಪೆಟ್ಟು ಬಿದ್ದಿದೆ. ತಕ್ಷಣವೆ ಮಗುವನ್ನ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ. ಸದ್ಯ ಘಟನೆ ಸಂಬಂಧ ಕುಂಸಿ ಪೊಲೀಸ್ ಸ್ಟೇಷನ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ಮಗುವಿನ ಮಲೆಯೇ ಕಲಾಕೃತಿ ಬಿದ್ದಿದ್ದರಿಂದ ಮಗುವಿಗೆ ತೀವ್ರವಾಗಿ ಪೆಟ್ಟಾಗಿತ್ತು. ಗಾಂಧಿಬಜಾರ್​ನ ನಿವಾಸಿಯೊಬ್ಬರ ಮಗುವಾದ ಸಮೀಕ್ಷಾ ಮೃತ ದುರ್ದೈವಿ. ಘಟನೆಯಲ್ಲಿ ಮಗುವಿಗೆ ಪೆಟ್ಟು ಬಿದ್ದಾಗಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲು ಮಗುವಿನ ತಾಯಿ ಹರಸಾಹಸ ಪಟ್ಟಿದ್ದು, ತಕ್ಷಣಕ್ಕೆ ನೆರವು ಸಹ ಸಿಗದೇ ಮಗು ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. 


TAGGED:
Share This Article