ಗಂಡಾಗಿ ಬದಲಾದ ಗೆಳತಿ ಜೊತೆ ಬೆಂಗಳೂರಿಗೆ ಹೋದಳೆ ಯುವತಿ!? ಶಿವಮೊಗ್ಗ ಪೊಲೀಸ್ ಬಳಿ ಸೀರಿಯಸ್ ಮಿಸ್ಸಿಂಗ್ ಕೇಸ್!
Woman goes to Bengaluru with friend who turned into a man! Serious missing case near Shivamogga police

Shivamogga Apr 2, 2024 Shivamogga police ಶಿವಮೊಗ್ಗ ನಗರದ ಸ್ಟೇಷನ್ ಒಂದರಲ್ಲಿ ದಾಖಲಾದ ಮಿಸ್ಸಿಂಗ್ ಪ್ರಕರಣ ಗಂಭೀರ ಕುತೂಹಲವನ್ನ ಮೂಡಿಸುತ್ತಿದೆ. ಪ್ರಕರಣದ ತನಿಖೆಯನ್ನ ಶಿವಮೊಗ್ಗ ಪೊಲೀಸರು ನಡೆಸಿದರೆ ಕಾಣೆಯಾದವರು ಎಂಬ ವಿಚಾರದ ಅಡಿಯಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ..
ಪ್ರಕರಣವನ್ನು ಗಮನಿಸುವುದಾದರೆ, ಶಿವಮೊಗ್ಗ ಜಿಲ್ಲೆ ನಿವಾಸಿ ಯುವತಿಯೊಬ್ಬರು ತಮ್ಮ ಮನೆಯಿಂದ ತೆರಳಿ ಬೆಂಗಳೂರಿಗೆ ಹೋಗಿದ್ದಾರೆ. ಅಲ್ಲಿಂದ ಮನೆಯವರಿಗೆ ಕರೆ ಮಾಡಿ ತಮ್ಮನ್ನು ಹುಡಕಬೇಡಿ ಎಂದಿದ್ದಾರೆ. ಆದರೆ ಕರಳು ಸಂಕಟ ಬಿಡಬೇಕಲ್ಲ. ಮನೆಯವರು ಏನಾಗಿದೆಯೋ ಏನೋ ಎಂದುಕೊಂಡು ಯುವತಿಯು ಕರೆ ಮಾಡಿದ ನಂಬರ್‌ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆ ನಂಬರ್‌ನಲ್ಲಿದ್ದ ವ್ಯಕ್ತಿಗಳು ಯುವತಿಯ ಮನೆಯವರಿಗೆ ಬೆದರಿಸಿದ್ದಾರೆ ಎಂದು ದೂರಿನಲ್ಲಿ ದೂರಲಾಗಿದೆ.
ಇಷ್ಟಾದ ಬಳಿಕ ಯುವತಿ ಮನೆಯವರು ಪದೇಪದೇ ತಮ್ಮ ಮನೆ ಮಗಳಿಗಾಗಿ ಅದೇ ನಂಬರ್ ಹಿಡಿದುಕೊಂಡು ವಿಚಾರಣೆ ಮಾಡಿದ್ದಾರೆ. ಈ ನಡುವೆ ಬೆಂಗಳೂರು ನಗರದ ಪೊಲೀಸ್ ಸ್ಟೇಷನ್‌ವೊಂದರಲ್ಲಿ ಕಂಪ್ಲೆಂಟ್ ಆಗಿದ್ದು, ಅದರಡಿಯಲ್ಲಿ ಯುವತಿ ಮನೆಯವರನ್ನ ವಿಚಾರಣೆಗೆ ಪೊಲೀಸರು ಕರೆಸಿದ್ದಾರೆ. ಅಲ್ಲಿ ಯುವತಿ ಪರವಾಗಿದ್ದ ಸಂಸ್ಥೆಯೊಂದರ ಸದಸ್ಯರು ಯುವತಿಯಿಂದ ವಿಡಿಯೋ ಕಾಲ್ ಮಾಡಿಸಿ, ಮತ್ತೆ ಬರಬೇಡಿ, ತನ್ನನ್ನ ಹುಡುಕಬೇಡಿ ಎಂದು ಹೇಳಿಸಿದ್ದಾರೆ. ಆದಾಗ್ಯು ಪೋಷಕರು ಪೊಲೀಸರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಯುವತಿಯನ್ನ ಸ್ಟೇಷನ್ಗೆ ಕರೆಸಲಾಗಿದೆ. ಅಲ್ಲಿ ಆನಂತರ ಏನಾಯ್ತು ಎಂಬುದು ಸ್ಪಷ್ಟವಿಲ್ಲ.
ಎಲ್ಲಾ ಮುಗಿಸಿ ಶಿವಮೊಗ್ಗಕ್ಕೆ ವಾಪಸ್ ಆದ ಕುಟುಂಬ ಮನೆಮಗಳ ಸುರಕ್ಷತೆಯ ಬಗ್ಗೆ ಆತಂಕಗೊಂಡು ಪೊಲೀಸರಿಗೆ ಕಂಪ್ಲೆಂಟ್ ನೀಡಿದ್ದು ಎಫ್‌ಐಆರ್ ದಾಖಲಿಸಿದ್ದಾರೆ. ಅಲ್ಲದೆ ತಮ್ಮ ಮಗಳು ತಮ್ಮ ಸ್ನೇಹಿತೆಯ ಜೊತೆಗೆ ಹೋಗಿರುವ ಸಾಧ್ಯತೆ ಇದ್ದು, ಆಕೆಯ ಪರವಾಗಿ ನಿಂತಿರುವವರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಯುವತಿಯ ಸ್ನೇಹಿತೆಯು ಲಿಂಗ ಬದಲಾವಣೆ ಮಾಡಿಕೊಂಡಿದ್ದು, ಆತನ ಜೊತೆಗೆ ಯುವತಿಯು ಹೋಗಿದ್ದರಬಹುದು ಎಂದು ಶಂಕಿಸಿದ್ದಾರೆ. ಅಲ್ಲದೆ ಆಕೆಯನ್ನ ತಮ್ಮ ವಶಕ್ಕೆ ನೀಡದ ಸಂಸ್ಥೆಯ ವಿರುದ್ಧವೂ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಸದ್ಯ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಪೊಲೀಸ್ ಇಲಾಖೆ ಕೇಸ್‌ನ್ನ ಗಂಭೀರವಾಗಿ ಪರಿಗಣಿಸಿದೆ. ವೈಯಕ್ತಿಕ ವಿಚಾರಗಳನ್ನು ಗೌಪ್ಯವಾಗಿ ಇಡಲಾಗಿದ್ದು, ಕೇಸ್ ಯಾವುದೇ ಟ್ವಿಸ್ಟ್ ಪಡೆದುಕೊಳ್ಳುವ ಸಾಧ್ಯತೆ ಇದೆ
TODAY ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ! ಯಾವಾಗ ಬೇಕೋ ಆಗಲೇ ಸುದ್ದಿ ಓದಿ, ಲಿಂಕ್ ಕ್ಲಿಕ್ ಮಾಡಿ
https://whatsapp.com/channel/0029Va9I91s3LdQVrdq7yl1h
ಇದನ್ನು ಓದಿ : ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಲ್ಲೀಗ ಮಧು ಬಂಗಾರಪ್ಪನವರೇ ಸುಪ್ರೀಂ! ಶೀಘ್ರದಲ್ಲಿಯೇ ಇನ್ನೊಂದು ಬದಲಾವಣೆ! ಏನದು ರಾಜಕಾರಣ