SHIVAMOGGA Feb 25, 2024 ಶಿವಮೊಗ್ಗ ಪ್ರತಿಷ್ಟಿತ ಕಾಲೇಜುಗಳ ಆವರಣಗಳಲ್ಲಿ ನಡೆಯುವಂತ ಚಲುವಿನ ಚಿತ್ತಾರದಂತಹ ಘಟನೆಗಳ ಬಗ್ಗೆ ಈ ಹಿಂದೆ ಮಲೆನಾಡು ಟುಡೆ ವರದಿ ಮಾಡಿತ್ತು. ಅಂತಹದ್ದೊಂದು ಪ್ರಕರಣದಲ್ಲಿ ಅಪ್ರಾಪ್ತೆಯೊಬ್ಬಳು ಇದೀಗ ತನ್ನ ಜೀವ ತೆತ್ತಿದ್ದಾಳೆ.
ಶಿವಮೊಗ್ಗದ ಪೊಲೀಸ್ ಸ್ಟೇಷನ್ ಒಂದರ ವ್ಯಾಪ್ತಿಯಲ್ಲಿ (ಹೆಸರು, ವಿವರ, ವೈಯಕ್ತಿಕ ವಿಚಾರಗಳನ್ನು ಗೌಪ್ಯವಾಗಿ ಇಡಲಾಗಿದೆ) ನಿವಾಸಿಯಾಗಿರುವ ಅಪ್ರಾಪ್ತೆಯೊಬ್ಬಳಿಗೆ ಫೋನ್ ಕರೆಯೊಂದು ಬಂದು ಅರ್ಧ ಗಂಟೆಯಲ್ಲಿ ನೇಣಿಗೆ ಶರಣಾಗಿದ್ದಾಳೆ ಎಂಬುದು ಪೊಲೀಸ್ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ.
ಪ್ರಾಥಮಿಕವಾಗಿ ಸಿಕ್ಕಿ ಮಾಹಿತಿ ಪ್ರಕಾರ, ಅಪ್ರಾಪ್ತೆಯನ್ನು ಯುವಕನೊಬ್ಬ ಪ್ರೀತಿಸು ಎಂದು ಬೆನ್ನು ಹತ್ತಿದ್ದನಂತೆ.ಈ ಸಂಬಂಧ ಯುವತಿ ಕುಟುಂಬಸ್ಥರು ಯುವಕನಿಗೆ ಎಚ್ಚರಿಕೆಯನ್ನ ಸಹ ನೀಡಿದ್ದರು ಎನ್ನಲಾಗಿದೆ. ಈ ಮಧ್ಯೆ ನಿನ್ನೆ ಯುವಕ ಮತ್ತೊಬ್ಬನ ಮೂಲಕ ಕರೆ ಮಾಡಿ ಯುವತಿಯ ಜೊತೆ ಮಾತನಾಡಿದ್ದಾನೆ. ಆನಂತರ ಯುವತಿ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಸದ್ಯ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಪ್ರಕರಣದ ಮಾಹಿತಿ ಕಲೆಹಾಕುತ್ತಿದ್ದಾರೆ.