Shivamogga police | ಶಿವಮೊಗ್ಗ ಪೊಲೀಸ್ ಇಲಾಖೆಯ ಖಡಕ್ ಕಾರ್ಯಾಚರಣೆ ! ನಾಲ್ಕು ದಿನಗಳಲ್ಲಿ 109 ಕೇಸ್

Shivamogga police | Shimoga police action 109 cases in four days

Shivamogga police |  ಶಿವಮೊಗ್ಗ ಪೊಲೀಸ್ ಇಲಾಖೆಯ ಖಡಕ್ ಕಾರ್ಯಾಚರಣೆ ! ನಾಲ್ಕು ದಿನಗಳಲ್ಲಿ 109 ಕೇಸ್
Shivamogga police

Shivamogga Feb 24, 2024 Shivamogga police   ಶಿವಮೊಗ್ಗ ಪೊಲೀಸರು ಪೂಟ್ ಪೆಟ್ರೋಲಿಂಗ್ ಮುಂದುವರಿಸಿದ್ದಾರೆ. ನಾಲ್ಕು ದಿನಗಳಲ್ಲಿ ಬರೋಬ್ಬರಿ 109 ಕೇಸ್ ದಾಖಲಿಸಿದ್ದಾರೆ. ಅದರ ವಿವರ ಇಲ್ಲಿದೆ 

ದಿನಾಂಕಃ 18-02-2024  ರಂದು ಸಂಜೆ ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ ಓಲ್ಡ್ ಮಂಡ್ಲಿ, ನ್ಯೂ ಮಂಡ್ಲಿ, ಕುರುಬರ ಪಾಳ್ಯ, ಬಾಪೂಜಿ ನಗರ, ಟ್ಯಾಂಕ್ ಮೊಹಲ್ಲಾ, ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ ಬಸವನ ಗುಡಿ, ಜಯನಗರ, ಎಎ ಕಾಲೋನಿ, ವಿಕಾಸ ಶಾಲೆ ಹತ್ತಿರ, ರಾಗಿಗುಡ್ಡ, ಆಯನೂರು, ಹಾರ್ನಳ್ಳಿ,ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಸೀಗೆ ಬಾಗಿ, ಭೋವಿ ಕಾಲೋನಿ, ಉಜನಿಪುರ, ವೀರಪುರ, ಅರೇಬಿಳಚಿ ಕ್ಯಾಂಪ್, ಶಿಕಾರಿಪುರ  ಉಪ ವಿಭಾಗ ವ್ಯಾಪ್ತಿಯ ಭದ್ರಾಪುರ, ಸಿದ್ದಿನ ಪುರ, ಆನವಟ್ಟಿ ಸಾಗರ ಉಪ ವಿಭಾಗ ವ್ಯಾಪ್ತಿಯ  ಸಾಗರ ಟೌನ್ ನ ಅಶೋಕ ರಸ್ತೆ, ಐತಪ್ಪ ವೃತ್ತ, ಇಕ್ಕೇರಿ, ಆನಂದಪುರ, ಕಾರ್ಗಲ್, ತೀರ್ಥಹಳ್ಳಿ ಉಪ ವಿಭಾಗ ವ್ಯಾಪ್ತಿಯ ಮಹಿಷಿ ಯಲ್ಲಿ ಆಯಾ ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡಗಳು ಕಾಲ್ನಡಿಗೆ ವಿಶೇಷ ಗಸ್ತು  (Foot Patrolling) ಮಾಡಿ Public Nuisance ಮಾಡಿದ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ ಒಟ್ಟು 10 ಲಘು ಪ್ರಕರಣಗಳನ್ನು ದಾಖಲಿಸಿದ್ದಾರೆ. 



ಇನ್ನೂ  ದಿನಾಂಕಃ 19-02-2024  ರಂದು ಸಂಜೆ ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ ಮಾರ್ನಮಿ ಬೈಲು, ವಿಜಯ ಗ್ಯಾರೇಜ್ ಹತ್ತಿರ, ಸಾವರ್ಕರ್ ನಗರ, ಕೋಟೆ ರಸ್ತೆ, ವಾದಿಯೇ ಹುದ, ಅಂಬೇಡ್ಕರ್ ನಗರ ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ ಬಾಲರಾಜ್ ಅರಸು ರಸ್ತೆ, ಕೆಇಬಿ ವೃತ್ತ, ಜೆಹೆಚ್ ಪಟೇಲ್ ಬಡಾವಣೆ, ಹಾರ್ನಹಳ್ಳಿ, ಕುಂಸಿ ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಕೂಲಿ ಬ್ಲಾಕ್ ಶೆಡ್, ಹೊಳೆಹೊನ್ನೂರು ರಸ್ತೆ, ಸಂತೆ ಮೈದಾನ, ಹುಡ್ಕೋ ಕಾಲೋನಿ, ಸನ್ಯಾಸಿ ಕೊಡ್ಮಗ್ಗೆ ಶಿಕಾರಿಪುರ  ಉಪ ವಿಭಾಗ ವ್ಯಾಪ್ತಿಯ ಜಾಕಿರ್ ಹುಸೇನ್ ರಸ್ತೆ ಶಿಕಾರಿಪುರ ಟೌನ್ ಸಾಗರ ಉಪ ವಿಭಾಗ ವ್ಯಾಪ್ತಿಯ  ಸಾಗರ ಟೌನ್ ನ ಜನ್ನತ್ ನಗರ, ಬಳಸಗೋಡು, ಮಲಂದೂರು, ಕಾರ್ಗಲ್ ತೀರ್ಥಹಳ್ಳಿ ಉಪ ವಿಭಾಗ ವ್ಯಾಪ್ತಿಯ ಮಾಳೂರು, ಹೊಸನಗರ ಟೌನ್, ನಗರದಲ್ಲಿ ಆಯಾ ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡಗಳು ಕಾಲ್ನಡಿಗೆ ವಿಶೇಷ ಗಸ್ತು  (Foot Patrolling) ಮಾಡಿ Public Nuisance ಮಾಡಿದ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ ಒಟ್ಟು 36 ಲಘು ಪ್ರಕರಣಗಳನ್ನು ದಾಖಲಿಸಿದ್ದಾರೆ. 



ದಿನಾಂಕಃ 20-02-2024  ರಂದು ಸಂಜೆ ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ ಲಷ್ಕರ್ ಮೊಹಲ್ಲಾ, ಗಾಂಧಿ ಬಜಾರ್, ಎಸ್ ಪಿ ಎಂ ರಸ್ತೆ, ಪದ್ಮ ಟಾಕೀಸ್ ಹತ್ತಿರ, ವಿನಾಯಕ ವೃತ್ತ, ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ ಫ್ರೀಡಂ ಪಾರ್ಕ್ ಹತ್ತಿರ, ಎಎ ಕಾಲೋನಿ, ನಾಗೇಂದ್ರ ಕಾಲೋನಿ, ಚಿಕ್ಕಲ್, ಕುಂಸಿ, ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಜನ್ನಾಪುರ, ಕುರುಬರ ಬೀದಿ, ಭೋವಿ ಕಾಲೋನಿ, ಡಿ ಜೆ ಹಳ್ಳಿ, ಹೊಳೆ ನೇರಳಕೆರೆ, ಹೊಳೆಹೊನ್ನೂರು ಟೌನ್, ಶಿಕಾರಿಪುರ  ಉಪ ವಿಭಾಗ ವ್ಯಾಪ್ತಿಯ ಶಿಕಾರಿಪುರ ಟೌನ್, ಸೊರಬ ಟೌನ್, ಸಾಗರ ಉಪ ವಿಭಾಗ ವ್ಯಾಪ್ತಿಯ  ಸಾಗರ ಟೌನ್ ನ ಜೆಸಿ ರಸ್ತೆ, ಯಳವರಸೆ, ಗಡಿಕಟ್ಟೆ, ತೀರ್ಥಹಳ್ಳಿ ಉಪ ವಿಭಾಗ ವ್ಯಾಪ್ತಿಯ ಬೆಜ್ಜುವಳ್ಳಿ, ಮಾಸ್ತಿಕಟ್ಟೆ, ರಿಪ್ಪನ್ ಪೇಟೆಯಲ್ಲಿ ಆಯಾ ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡಗಳು ಕಾಲ್ನಡಿಗೆ ವಿಶೇಷ ಗಸ್ತು  (Foot Patrolling) ಮಾಡಿ Public Nuisance ಮಾಡಿದ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ ಒಟ್ಟು 23 ಲಘು ಪ್ರಕರಣಗಳನ್ನು ದಾಖಲಿಸಿದ್ದಾರೆ. 



ದಿನಾಂಕಃ 21-02-2024  ರಂದು ಸಂಜೆ ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ ಓಟಿ ರಸ್ತೆ, ಪಂಚವಟಿ ಕಾಲೋನಿ ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಸಂಜಯ್ ಕಾಲೋನಿ, ತಾಲೂಕು ಕಛೇರಿ ರಸ್ತೆ, ತಿಮ್ಮಣ್ಣ ಕಾಲೋನಿ, ಉಜನಿಪುರ, ವೀರಾಪುರ, ಹೊಳೆಹೊನ್ನೂರು ಟೌನ್, ಶಿಕಾರಿಪುರ  ಉಪ ವಿಭಾಗ ವ್ಯಾಪ್ತಿಯ ಹೆಚ್ ಎಸ್ ದೇವಸ್ಥಾನ ರಸ್ತೆ, ಆನವಟ್ಟಿ ಸಾಗರ ಉಪ ವಿಭಾಗ ವ್ಯಾಪ್ತಿಯ  ಸಾಗರ ಟೌನ್ ನ ಜನ್ನತ್ ನಗರ, ಮಲ್ಲಂದೂರು ತೀರ್ಥಹಳ್ಳಿ ಉಪ ವಿಭಾಗ ವ್ಯಾಪ್ತಿಯ ಮಾಸ್ತಿಕಟ್ಟೆಯಲ್ಲಿ ಆಯಾ ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡಗಳು ಕಾಲ್ನಡಿಗೆ ವಿಶೇಷ ಗಸ್ತು  (Foot Patrolling) ಮಾಡಿ Public Nuisance ಮಾಡಿದ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ ಒಟ್ಟು 40 ಲಘು ಪ್ರಕರಣಗಳನ್ನು ದಾಖಲಿಸಿರುತ್ತಾರೆ.

ಹೀಗೆ ಒಟ್ಟು ನಾಲ್ಕು ದಿನ ಪೊಲೀಸ್ 190 ಪಿಟ್ಟಿ ಕೇಸ್​ಗಳನ್ನು ದಾಖಲಿಸಿದ್ದು ಈ ಮೂಲಕ ಸಂಜೆ ಹೊತ್ತಲ್ಲಿ ಸಾಮಾನ್ಯರಿಗೆ ತೊಂದರೆ ಕೊಡುವ ಜನರಿಗೆ ಎಚ್ಚರಿಕೆ ನೀಡಿದ್ದಾರೆ.