KSE ಗೆ ಬಂತು ದೆಹಲಿ ಕಾಲ್!‌ ಮಗನ ಭವಿಷ್ಯದ ಟ್ರಂಪ್‌ ಕಾರ್ಡ್‌ ಬಳಸಿದ್ರಾ ಅಮಿತ್‌ ಶಾ? ಚುನಾವಣೆಗೆ ನಿಲ್ಲದಿರಲೂ ಈಶ್ವರಪ್ಪರ ಕಂಡೀಷನ್‌ ಏನು? ರಂಗ & ಸಿಂಗ ಯಾರು? ದೊಡ್ಡಮಾತು

KSE got a call from Delhi! Has Amit Shah used his son's future trump card? What is Eshwarappa's condition even if he does not stand for election? big talk

KSE ಗೆ ಬಂತು ದೆಹಲಿ ಕಾಲ್!‌ ಮಗನ ಭವಿಷ್ಯದ ಟ್ರಂಪ್‌ ಕಾರ್ಡ್‌ ಬಳಸಿದ್ರಾ ಅಮಿತ್‌ ಶಾ? ಚುನಾವಣೆಗೆ ನಿಲ್ಲದಿರಲೂ ಈಶ್ವರಪ್ಪರ ಕಂಡೀಷನ್‌ ಏನು? ರಂಗ & ಸಿಂಗ ಯಾರು? ದೊಡ್ಡಮಾತು
Eshwarappa , Amit Shah

Shivamogga Apr 2, 2024 Eshwarappa ,  Amit Shah  ಲೋಕಸಭಾ ಚುನಾವಣೆ 2024 ರಲ್ಲಿ ಬಂಡಾಯ ಅಭ್ಯರ್ಥಿಯಾಗಿರುವ ಕೆಎಸ್‌ ಈಶ್ವರಪ್ಪನವರಿಗೆ ದೆಹಲಿಗೆ ಬರುವಂತೆ ಕೇಂದ್ರ ಗೃಹಸಚಿವ ಅಮಿತ್‌ ಶಾ ಬುಲಾವ್‌ ನೀಡಿದ್ದಾರೆ. ನಿನ್ನೆವರೆಗೂ ಗುಮಾನಿಯಲ್ಲಿದ್ದ ಸುದ್ದಿಯನ್ನು ಇವತ್ತು ಸ್ವತಃ ಕೆಎಸ್‌ ಈಶ್ವರಪ್ಪನವರು ಸ್ಪಷ್ಟಪಡಿಸಿದ್ದಾರೆ. 

 

ದೆಹಲಿಯಿಂದ ಕರೆ ಬಂತು

 

ಅಷ್ಟೆ ಅಲ್ಲದೆ ಅಮಿತ್‌ ಶಾರವರನ್ನ ಉಕ್ಕಿನ ಮನುಷ್ಯ ಎಂದು ಕರೆದ ಕೆಎಸ್‌ ಈಶ್ವರಪ್ಪನವರು, ಹಿಂದೂತ್ವ, ಹಿಂದುಳಿದವರಿಗೆ ಅನ್ಯಾಯ ಹಾಗೂ ಕುಟುಂಬ ರಾಜಕಾರಣ, ತಮಗಾದ ಅನ್ಯಾಯದ ಬಗ್ಗೆ ಅಮಿತ್‌ ಶಾಗೆ ತಿಳಿಸಿದ್ದು ಅವರಿಗೆ ತಮ್ಮ ನಿಲುವನ್ನ ಸಹ ಸ್ಪಷ್ಟಪಡಿಸಿರುವುದಾಗಿ ತಿಳಿಸಿದ್ದಾರೆ

 

ಅಮಿತ್‌ ಶಾರವರು ತಮ್ಮ ಪುತ್ರನ ಭವಿಷ್ಯದ ಬಗ್ಗೆಯು ಯೋಚಿಸಿ ಎಂದಾಗ, ನಾನು ನನ್ನ ಮಗನನ್ನು ಸಹ ವಿಚಾರಿಸಿದ್ದು, ನನ್ನ ಬಗ್ಗೆ ಯೋಚಿಸಬೇಡಿ, ಪಕ್ಷ ಉಳಿಸುವ ನಿಟ್ಟಿನಲ್ಲಿ ನಿಮ್ಮ ಹೋರಾಟ ಮುಂದುವರಿಯಲಿ ಎಂದು ಕೆಇ ಕಾಂತೇಶ್‌ ಹೇಳಿರುವುದಾಗಿ ಅಮಿತ್‌ ಶಾರಿಗೆ ತಿಳಿಸಿದ್ದೇನೆ. 

 

ಚುನಾವಣೆಗೆ ಸ್ಪರ್ಧಿಸುವುದಿಲ್ಲವೇ? 

 

ಈ ನಡುವೆ ಅವರು ನನಗೆ ದೆಹಲಿಗೆ ಬರುವಂತೆ ತಿಳಿಸಿದ್ದಾರೆ. ಇದು ಸೂಚನೆಯಲ್ಲ ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಹಾಗಾಗಿ ಅವರ ಮಾತಿಗೆ ಬೆಲೆಕೊಟ್ಟು ದೆಹಲಿಗೆ ಹೋಗಿ ಅಮಿತ್‌ ಶಾರನ್ನು ಕಂಡು ಮಾತುಕತೆ ನಡೆಸುತ್ತೇನೆ ಎಂದರು. ಇದೇ ವೇಳೆ ಪತ್ರಕರ್ತರು ಹಾಗಾದರೆ ನೀವು ಚುನಾವಣೆ ನಿಲ್ಲುವುದಿಲ್ಲವೇ ಎಂದಾಗ, ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನಾನು ಸ್ಪರ್ಧಿಸುತ್ತೇನೆ. ಇದನ್ನು ಅಮಿತ್‌ ಶಾರಿಗೂ ತಿಳಿಸಿದ್ದೇನೆ ಎಂದರು. 

 

ಹಾಗಾದರೆ ದೆಹಲಿಗೆ ಏಕೆ ಹೋಗುತ್ತಿದ್ದೀರಿ?

 

ಸ್ಪರ್ಧಿಸುವುದು ಖಚಿತವಾದ ಮೇಲೆ ದೆಹಲಿಗೆ ಏಕೆ ಹೋಗುತ್ತಿದ್ದೀರಿ ಎಂದು ಪತ್ರಕರ್ತರು ಕೇಳಿದಾಗ ಉತ್ತರಿಸಿದ ಈಶ್ವರಪ್ಪನವರು ದೊಡ್ಡವರು ಕರೆದ ಮೇಲೂ ಹೋಗದಿದ್ದರೇ ಅದನ್ನು ಸೊಕ್ಕು ಎಂದುಕೊಳ್ಳುವುದಿಲ್ಲವೇ ಅವರ ಸ್ಥಾನ ಗೌರವಕ್ಕೆ ಬೆಲೆ ಕೊಟ್ಟು ಹೋಗುತ್ತಿದ್ದೇನೆ. ಅಲ್ಲಿಯು ತಮ್ಮ ನಿಲುವನ್ನ ಸ್ಪಷ್ಟಪಡಿಸಿ, ಪಕ್ಷದ ಸ್ಥಿತಿಯನ್ನು ವಿವರವಾಗಿ ತಿಳಿಸುತ್ತೇನೆ. ನನ್ನ ಮಾತನ್ನು ಅವರು ಒಪ್ಪಿಕೊಳ್ಳುತ್ತಾರೆ ಎನ್ನುವ ವಿಶ್ವಾಸವೂ ತಮಗೆ ಇದೆ ಎಂದರು

 

ಹಾಗೊಂದು ವೇಳೆ ಬದಲಾವಣೆಗಳು ನಡೆದರೇ ? 

ಬದಲಾವಣೆ ಅಂದರೆ ಏನು? ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿವೈ ವಿಜಯೇಂದ್ರರವರನ್ನ ಬದಲಾವಣೆ ಮಾಡಿದರೆ ನಾನು ಚುನಾವಣೆಗೆ ನಿಲ್ಲೋದಿಲ್ಲ ಎಂದು ಕೆಎಸ್‌ ಈಶ್ವರಪ್ಪನವರು ಹೇಳಿದ್ದಾರೆ. ತಕ್ಷಣವೇ ಚುನಾವಣೆ ನಂತರ ಬದಲಾವಣೆ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರೇ ಎಂಬ ಪ್ರಶ್ನೆಯೆಸದರು. ಇದಕ್ಕೆ ಮರುಕ್ಷಣವೇ ಉತ್ತರಿಸಿದ ಈಶ್ವರಪ್ಪ ಪಕ್ಷ ಸಂಪೂರ್ಣವಾಗಿ ಹಾಳಾದ ಮೇಲೆ ಬದಲಾವಣೆ ಮಾಡಿ ಪ್ರಯೋಜನವೇನು? ಎಂದರು. ಹಾಗಾದರೆ ಬದಲಾವಣೆ ಆದರೆ ನೀವು ಚುನಾವಣೆಗೆ ನಿಲ್ಲುವುದಿಲ್ಲ ಎಂದಾಯ್ತು ಎಂದಾಗ? ನಿಮ್ಮ ಪ್ರಶ್ನೆಗೆ ಉತ್ತರಿಸಿದ್ದೇನೆ. ನೀವು ಕೇಳಿದ್ದಕ್ಕೆ ಉತ್ತರಿಸಿದ್ದೇನಷ್ಟೆ!, ಬದಲಾವಣೆ ಆಗುತ್ತೆ ಎಂದರೆ ನಾನೇನು ಹೇಳಲಿ ಎಂದರು, ಹಾಗೊಂದು ವೇಳೆ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಯಾದರೆ, ಈಶ್ವರಪ್ಪನವರು ಚುನಾವಣೆಗೆ ನಿಂತಿದ್ದರಿಂದಲೇ ಈ ಬದಲಾವಣೆಯಾಯ್ತು ಎಂಬ ಸಂದೇಶ ರವಾನೆಯಾಗುತ್ತದೆ. ಪಕ್ಷ ಉಳಿಯಬೇಕು ಎಂಬುದಷ್ಟೆ ನನ್ನ ಉದ್ದೇಶ ಎಂದರು. 

 

ಅಮಿತ್‌ ಶಾ ಕರೆ ಮಾಡಿದ್ದು ತಡವಾಯ್ತಾ?

ಕೇಂದ್ರ ಸಚಿವ ಅಮಿತ್ ಶಾ ತಡವಾಗಿ ಕರೆ ಮಾಡಿದ್ದಾರೆ  ಅಂತಾ ನನಗೆ ಅನ್ನಿಸಿಲ್ಲ. ನಾನು ಚುನಾವಣೆ ಗೆ ಇಳಿಯಬೇಕಾದ್ರೆ ಯೋಚನೆ ಮಾಡಿದ್ದೇನೆ. ಹಾಗೊಂದು ವೇಳೇ ದೆಹಲಿಗೆ ಹೋದ ಸಂದರ್ಭದಲ್ಲಿ  ಪ್ರಧಾನಿ ನರೇಂದ್ರ ಮೋದಿ ದೇವರು ಸಿಕ್ಕಿದ್ರು ಕಾಲಿಗೆ ಬಿದ್ದು ನಾನೇ ನಿಮ್ಮನ್ನ ಪ್ರಧಾನಿ ಮಾಡ್ತೇನೆ ಎಂದು ಹೇಳಿ ಬರುತ್ತೇನೆ ಎಂದ ಈಶ್ವರಪ್ಪನವರು ಬ್ರಹ್ಮ ಬಂದು ಹೇಳಿದ್ರು ಚುನಾವಣೆ ಗೆ ನಿಲ್ತೇನೆ ಎಂದರು.

 

ಬಿ.ಎಸ್.ವೈ. ಹತ್ತಿರ ಹೋಗುತ್ತೀರ? 

 

ರಂಗಣ್ಣನ (ಅಮಿತ್ ಶಾ) ಹತ್ತಿರವೇ ಹೋಗುತ್ತಿರುವೆ. ಈ ಸಿಂಗನ (ಯಡಿಯೂರಪ್ಪ) ಹತ್ತಿರ ಏಕೆ ಹೋಗಲಿ? ಯಡಿಯೂರಪ್ಪ ನಮ್ಮ ಮನೆಗೆ ಬರುತ್ತಾರಂತೆ. ಹತ್ತು ವರ್ಷದಿಂದ ನಮ್ಮ ಮನೆ ಅವರಿಗೆ ಗೊತ್ತಿರಲಿಲ್ಲವೇ? ಯಾವಾಗ ಬಂದಿದ್ದರು? ಯಾವಾಗ ನನ್ನ ಜೊತೆ ಮಾತನಾಡಿದ್ದಾರೆ? ಅವರು ನಂಬಿಕೆಗೆ ಅರ್ಹರಲ್ಲ ಎಂದು ವಾಗ್ದಾಳಿ ನಡೆಸಿದ್ರು.