ಬೈಕ್ ಱಲಿ, ಚಿಕನ್​ ಬಿರಿಯಾನಿ ಬಳಿಕ ಧಾರ್ಮಿಕ ಸ್ಥಳ ದುರ್ಬಳಕೆ ಆರೋಪ! ಕೆಎಸ್​ ಈಶ್ವರಪ್ಪ ದಂಪತಿ ಸೇರಿ ನಾಲ್ವರ ವಿರುದ್ಧ ಕೇಸ್​!?

After bike rally, chicken biryani, religious places misused Case registered against KS Eshwarappa couple, four others

ಬೈಕ್ ಱಲಿ, ಚಿಕನ್​ ಬಿರಿಯಾನಿ ಬಳಿಕ ಧಾರ್ಮಿಕ ಸ್ಥಳ ದುರ್ಬಳಕೆ ಆರೋಪ! ಕೆಎಸ್​ ಈಶ್ವರಪ್ಪ ದಂಪತಿ ಸೇರಿ ನಾಲ್ವರ ವಿರುದ್ಧ  ಕೇಸ್​!?
Case registered against KS Eshwarappa

Shivamogga  Apr 1, 2024  Case registered against KS Eshwarappa   ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಸ್ಪರ್ಧಿಯಾಗಿರುವ ಕೆಎಸ್​ ಈಶ್ವರಪ್ಪನವರಿಗೆ ಚುನಾವನಾ ನೀತಿ ಸಂಹಿತೆ ಮುಳುವಾಗುತ್ತಿದೆ. ಇತ್ತೀಚೆಗೆ ಅವರು ಶಿಕಾರಿಪುರದಲ್ಲಿ ಪಾಲ್ಗೊಂಡಿದ್ದ ಬೈಕ್​ ಱಲಿ ಸಂಬಂಧ ಕೇಸ್ ದಾಖಲಾಗಿತ್ತು. ಬೈಕ್ ಱಲಿ ಆಯೋಜಿಸಿದ್ದವರ ಮೇಲೆ ಚುನಾವಣಾ ಅಧಿಕಾರಿಗಳು ನೀತಿ ಸಂಹಿತೆ ಉಲ್ಲಂಘನೆ ಕೇಸ್ ದಾಖಲಿಸಿದ್ದರು. 

ಇನ್ನೂ ಕೆಎಸ್​ ಈಶ್ವರಪ್ಪನವರು ಬೈಂದೂರಿನಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ  ಚುನಾವಣಾ ಅಧಿಕಾರಿಗಳು ಬೆಂಬಲಿಗೆ ವಿತರಿಸಲು ಇಟ್ಟಿದ್ದ ಬಿರಿಯಾನಿ ಊಟ ಸೀಜ್ ಮಾಡಿದ್ದರು. 

ಇದರ ಬೆನ್ನಲ್ಲಿ ಇದೀಗ ಶಿವಮೊಗ್ಗ ತುಂಗಾ ನಗರ ಪೊಲೀಸ್ ಸ್ಟೇಷನ್​ನಲ್ಲಿ ಕೆಎಸ್​ ಈಶ್ವರಪ್ಪ ಅವರ ಪತ್ನಿ ಜಯಲಕ್ಷ್ಮೀ ಹಾಗೂ ಇನ್ನಿಬ್ಬರ ವಿರುದ್ಧ ಧಾರ್ಮಿಕ ಸ್ಥಳದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರ ಸಂಬಂಧ ನೀತಿ ಸಂಹಿತೆ ಉಲ್ಲಂಘನೆ ಕೇಸ್ ದಾಖಲಿಸಲಾಗಿದೆ. ಆನಂದಪ್ಪ ಎಂಬ ಹೆಸರಿನ ಗಜೆಟೆಡ್ ಆಫೀಸರ್ ಚುನಾವಣಾ ಕರ್ತವ್ಯದಲ್ಲಿದ್ದು ಶಿವಮೊಗ್ಗದ ಗೋಪಾಳದಲ್ಲಿರುವ ದೇವಸ್ಥಾನದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.  

ಮೊನ್ನೆ ಅಂದರೆ  30/03/2024 ರಂದು ಚುನಾವಣಾ ಪ್ಲೈಯಿಂಗ್​ ಸ್ಕ್ವಾಡ್​  ಶಿವಮೊಗ್ಗ, ಗಾಂಧಿನಗರ ಏರಿಯಾದಲ್ಲಿ ಗಸ್ತು ನಡೆಸುತ್ತಿತ್ತು. ಈ ವೇಳೆ ಗೋಪಾಳದಲ್ಲಿರುವ  ಶ್ರೀ ಆದಿರಂಗನಾಥ ದೇವಸ್ಥಾನದಲ್ಲಿ ಸಾರ್ವಜನಿಕರನ್ನು ಸೇರಿಸಿಕೊಂಡು ಸಭೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿದೆ. 

ತಕ್ಷಣವೇ ಅಲ್ಲಿಗೆ ಸ್ಕ್ವಾಡ್​ ತೆರಳಿದೆ. ಈ ವೇಳೆ  ಕೆ.ಎಸ್ ಈಶ್ವರಪ್ಪ, ಶ್ರೀಮತಿ ಜಯಲಕ್ಷ್ಮೀ ಈಶ್ವರಪ್ಪ,  ಗೋಪಾಲಪ್ಪ  ಆದಿರಂಗನಾಥಸ್ವಾಮಿ ದೇವಸ್ಥಾನದ ಕಮಿಟಿ ಅಧ್ಯಕ್ಷಕರು ಹಾಗೂ  ಆನಂತರಾಮ ಇವರುಗಳು ಸಾರ್ವಜನಿಕರನ್ನು ಸೇರಿಸಿಕೊಂಡು ಲೋಕಸಭಾ ಚುನಾವಣೆ-2024 ರ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಧಾರ್ಮಿಕ ಸ್ಥಳದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವುದು ಕಂಡು ಬಂದಿದೆ. 

ಈ ಸಭೆಯ ಪೋಟೋ ಮತ್ತು ವಿಡಿಯೋ ಚಿತ್ರಿಕರಿಸಿದ ತಂಡವೂ ಚುನಾವಣಾ ಪ್ರಚಾರಕ್ಕೆ ಧಾರ್ಮಿಕ ಸ್ಥಳವನ್ನು ಬಳಸಿಕೊಂಡು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದಡಿ ಕೇಸ್ ಕೊಟ್ಟಿದೆ. ಪ್ರಕರಣ ಸಂಬಂಧ   RELIGIOUS INSTITUTIONS (PREVENTION OF MISUSE) ACT, 1988 (U/s-3,6,7)  ಅಡಿಯಲ್ಲಿ ತುಂಗಾನಗರ ಪೊಲೀಸ್ ಸ್ಟೇಷನ್ ಪೊಲೀಸರು ಕೇಸ್ ದಾಖಲಿಸಿದ್ದಾರೆ.