ಇದುವರೆಗೂ ಸಿಗದ ಅತಿಹೆಚ್ಚು ತೂಕ & ಉದ್ದ ಹೊಂದಿರುವ ಕಾಳಿಂಗ ಪತ್ತೆ.! ಡಾ.ಗೌರಿಶಂಕರ್ ಹಿಡಿದ ಕಿಂಗ್ ಕೋಬ್ರಾ ಹೇಗಿದೆ ನೀವೆ ನೋಡಿ!?
Kalinga with the highest weight & length in the country was found. How is the King Cobra caught by Dr. Gaurishankar!?
Shivamogga Apr 1, 2024 ಮಲೆನಾಡ ವಿಶೇಷ ಜೀವಿಗಳಲ್ಲಿ ಕಾಳಿಂಗ ಸರ್ಪವೂ ಒಂದು. ಬೇಸಿಗೆಯ ಸಂದರ್ಭದಲ್ಲಿ ಹೆಚ್ಚಾಗಿ ಮಾನವ ವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಈ ಕಾಳಿಂಗ ಸರ್ಪ ಜಗತ್ತಿನ ವಿಷಕಾರಿ ಸರ್ಪಗಳಲ್ಲಿ ಅಂಗ್ರಪಂಕ್ತಿಯಲ್ಲಿದೆ.ಸದ್ಯ ವಿಷಯ ಏನಂದರೆ ಮಲೆನಾಡ ಕಾಡಿನಲ್ಲಿ ಮತ್ತೊಮ್ಮೆ ಅತಿ ಉದ್ದದ ಹಾಗೂ ಹನ್ನೇರಡುವರೆ ಕೇಜಿ ತೂಗುವ ಕಾಳಿಂಗ ಸರ್ಪವೊಂದು ಕಾಣಿಸಿದೆ. ತಮ್ಮ 2 ದಶಕದ ವೃತ್ತಿ ಜೀವನದಲ್ಲಿ ಡಾ.ಪಿ.ಗೌರಿ ಶಂಕರ್ ರವರು ಅತಿಯುದ್ದ ಕಾಳಿಂಗ ಸರ್ಪವನ್ನ ಹಿಡಿದಿದ್ದಾರೆ.
ಕಾಳಿಂಗದ ಉದ್ದವೆಷ್ಟು?
ಥೈಲ್ಯಾಂಡ್ನಲ್ಲಿ ಸುಮಾರು 18 ಅಡಿ ಉದ್ದದಷ್ಟು ಕಾಳಿಂಗ ಕಾಣ ಸಿಕ್ಕಿವೆ. ಭಾರತದಲ್ಲಿ ಇದುವರೆಗೂ ಕಾಣಿಸಿಕೊಂಡ ಅತಿಉದ್ದದ ಕಾಳಿಂಗ 15 ಅಡಿಯದ್ದಾಗಿದೆ. ಇಷ್ಟು ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಳ್ಳುವುದು ತೀರಾ ಅಪರೂಪ. ಇದೀಗ ಅಂತದ್ದೊಂದು ಕ್ಷಣಕ್ಕೆ ಸಾಕ್ಷಿಯಾಗಿರುವ ಡಾ.ಗೌರಿ ಶಂಕರ್, ವೃತ್ತಿಜೀವನದ ಅನುಭವದ ಜೊತೆಗೆ ಹಾವಿನ ಬಗ್ಗೆ ವಿವರಣೆಯನ್ನ ನೀಡಿದ್ದಾರೆ..
ಆಗುಂಬೆಯ ಕಾಳಿಂಗ ಮನೆಯಲ್ಲಿ ರಿಸರ್ಚ್ ನಡೆಸ್ತಿರುವ ಗೌರಿಶಂಕರ್, ಕಾಳಿಂಗ ಸರ್ಪಗಳ ವಂಶಾವಳಿಯ ಬಗ್ಗೆ ಸಲ್ಲಿಸಿರುವ ಪ್ರಬಂಧಕ್ಕೆ ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ. 2 ದಶಕದಿಂದ ಕಾಳಿಂಗ ಸರ್ಪಗಳ ಮೇಲೆ ವಿಶೇಷ ಅಧ್ಯಯನ ಮಾಡಿಕೊಂಡು ಬಂದಿರುವ ಅವರು ನಿನ್ನೆ 31 ರಂದು ದಷ್ಟಪುಷ್ಟ ಹಾಗೂ ಧೈತ್ಯ ಸ್ವರೂಪದ ಕಾಳಿಂಗವನ್ನು ಹಿಡಿದು ಸಂರಕ್ಷಿಸಿದ್ದಾರೆ.
Ophiophagus Hanna
ಕಾಳಿಂಗ ಸರ್ಪ (ಒಫಿಯೋಫಾಗಸ್ ಹನ್ನಾ) ಕ್ಕೆ ಫೆಬ್ರವರಿಯಿಂದ ಮೇ ತಿಂಗಳ ನಡುವಿನ ಅವಧಿ ಸಂತಾನೋತ್ಪತ್ತಿಯ ಸಮಯ. ಈ ಟೈಂನಲ್ಲಿ ಹೆಣ್ಣು ಹಾವುಗಳನ್ನ ಹುಡುಕಿಕೊಂಡು ಹೋಗುವ ಗಂಡು ಕಾಳಿಂಗ ಮನೆ ಸುತ್ತಮುತ್ತ ಕಾಣಿಸಿಕೊಳ್ಳುತ್ತವೆ.. ಇದೇ ರೀತಿಯಲ್ಲಿ ಹೆಬ್ರಿಯ ಸೀತಾ ನದಿ ತೀರದಲ್ಲಿರುವ ಭಾಸ್ಕರ್ ಶೆಟ್ಟರ ಮನೆಯ ಸಮೀಪ ಕಾಳಿಂಗವೊಂದು ಪ್ರತ್ಯಕ್ಷವಾಗಿತ್ತು.
ಇದರ ಬಗ್ಗೆ ಮಾಹಿತಿ ಪಡೆದ ಡಾ.ಗೌರಿ ಶಂಕರ್ ತಮ್ಮ ಸಹೋದ್ಯೋಗಿಗಳ ಜೊತೆಗೆ ಸ್ಥಳಕ್ಕೆ ತೆರಳಿದ್ದಾರೆ. ಉರಗ ತಜ್ಞ ಸೇಫ್ಟಿ ಮೆಜರ್ಸ್ನೊಂದಿಗೆ ಹಾವನ್ನ ಹಿಡಿಯಲು ಹೋದ ಸಂದರ್ಭದಲ್ಲಿ ತೋಡಿಗೆ ಹಾಕುವ ದೊಡ್ಡ ಪೈಪ್ನಡಿಯಲ್ಲಿ ಕಾಳಿಂಗ ಪತ್ತೆಯಾಗಿದೆ.
ಇದನ್ನ ನೋಡಿದ ಗೌರಿಶಂಕರ್ ಕ್ಷಣಕಾಲ ದಂಗಾಗಿದ್ದಾರೆ ಅದಕ್ಕೆ ಕಾರಣವೂ ಇದೆ ಎಂದಿರುವ ಗೌರಿಶಂಕರ್ ತಮ್ಮ ವೃತ್ತಿ ಜೀವನದಲ್ಲಿ ಇಷ್ಟು ದೊಡ್ಡ ಕಾಳಿಂಗವನ್ನ ನೋಡಿರಲಿಲ್ಲ.
ಇಲ್ಲಿವರೆಗೂ ಗರಿಷ್ಟ ಅಂದರೆ ಸುಮಾರು 10 ಕೆಜಿ ವರೆಗಿನ ಕಾಳಿಂಗ ಸರ್ಪವನ್ನು ಹಿಡಿದಿದ್ದೇನೆ. ಆದರೆ ಸದ್ಯ ಸಿಕ್ಕಿರುವ ಹಾವಿನ ತೂಕ ಬರೋಬ್ಬರಿ 12.50 ಕೆಜಿ ಇದೆ. ಇದು ಇಷ್ಟು ದಿನದ ಅನುಭವದಲ್ಲಿ ಮೊದಲು ದಾಖಲಿಸುತ್ತಿರುವ ವಿಷಯ ಎಂದಿದ್ದಾರೆ.
ಸಾಮಾನ್ಯವಾಗಿ 12-13 ಅಡಿ ಉದ್ದದ ಕಾಳಿಂಗವನ್ನು ನೋಡಲು ಸಿಗುತ್ತದೆ. ಸುರಿಸುಮಾರು 15 ಅಡಿ ಉದ್ದದ ಹಾಗೂ ದಷ್ಟಪುಷ್ಟ ದೇಹದ ತೂಕ 12.50 ಕೆಜಿಯಷ್ಟು ಇರುವ ಕಾಳಿಂಗವನ್ನು ಇದೇ ಫಸ್ಟ್ ಟೈಂ ಸಂರಕ್ಷಣೆ ಮಾಡಿ ಕಾಡಿಗೆ ಬಿಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.