#Gandhadagudi /ಅಪ್ಪು ಗಂಧದ ಗುಡಿ ಆರಂಭವಾಗಿದ್ದು ಎಲ್ಲಿಂದ ಗೊತ್ತಾ?/ಪವರ್​ ಸ್ಟಾರ್​ ಶಿವಮೊಗ್ಗದ ಮಿಸ್ಸಿಂಗ್​ ಲಿಂಕ್ ಏನು Story by JP

Do you know where Appu Gandhadagudi started from?/Do you know what scared Power Star Puneeth Story by JP

#Gandhadagudi /ಅಪ್ಪು ಗಂಧದ ಗುಡಿ ಆರಂಭವಾಗಿದ್ದು ಎಲ್ಲಿಂದ ಗೊತ್ತಾ?/ಪವರ್​ ಸ್ಟಾರ್​ ಶಿವಮೊಗ್ಗದ ಮಿಸ್ಸಿಂಗ್​ ಲಿಂಕ್ ಏನು Story by JP
Do you know where Appu Gandhadagudi started from?/Do you know what scared Power Star Puneeth Story by JP

#Gandhadagudi /ಅಪ್ಪು ಗಂಧದ ಗುಡಿ ಥಿಯೇಟರ್​ನಲ್ಲಿ ಅಬ್ಬರಿಸಲು ಆರಂಭವಾಗಿದೆ. ನಾವಾಡುವ ನುಡಿಯೇ ಗಂಧದಗುಡಿ ಅಂತಾ ಪುನೀತ್ ಸರ್​ ಹಾಡಿದ್ದಾರೆ.

ಹೆಂಡ್ತಿ ಮಕ್ಕಳನ್ನು ಬಿಟ್ಟು ನಿಮ್ಮನ್ನ ನಂಬಿ ಬಂದಿದ್ದೀನಿ ಎಂದು ಅಪ್ಪರವರು ಹೇಳುವಾಗ, ನಮ್ಮನ್ನೂ ಕಾಡು ಸುತ್ತಲು ಕರೆದುಕೊಂಡು ಹೋಗುತ್ತಾರೆ.

ನಾಡಿನ ಮಂದಿ ಕಾಡಿಗೆ ಸುತ್ತಲು ಹೋಗಬಹುದು, ಆದರೆ ಸಿಟಿಗೆ ಒಗ್ಗಿದ್ದ ಮೈ, ಕಾನಿನ ಹಾದಿಗೆ ಒಗ್ಗುವುದು ಸುಲಭವಲ್ಲ. ಅಪ್ಪು ಪುನೀತ್​ ರಾಜಕುಮಾರ್ ಅದೆಲ್ಲವನ್ನು ಸಹಿಸಿಕೊಂಡೇ, ಗಂಧದಗುಡಿಯೊಳಗೆ ಸುತ್ತಾಡಿದ್ದಾರೆ.

ಇದು ಗಂಧದಗುಡಿಯ ಅಪ್ಪುವಿನ ವಿಶಿಷ್ಟ ಸುದ್ದಿ

ವಿಶೇಷ ಅಂದರೆ, ಇಲ್ಲಿಯವರೆಗೂ #Gandhadagudi ಅಡಿಯಲ್ಲಿ ಸಾಕಷ್ಟು ಸುದ್ದಿಗಳು ಬಂದಿವೆ. ಆದರೆ, ಇವತ್ತು ನಾವು ಹೇಳಲು ಹೊರಟಿರುವ ಸುದ್ದಿ ಎಲ್ಲಿಯು ಸಿಗಲಾರದು. ಕಾರಣ ಇಷ್ಟೆ. ಇದು ಅಪ್ಪುರವರ ಎಕ್ಸ್​ಕ್ಲ್ಯೂಸಿವ್​ ಸ್ಟೋರಿ.

ಪುನೀತ್​ ರಾಜಕುಮಾರ್ ರವರು ಗಂಧದಗುಡಿ ಸಿನಿಮಾ ಮಾಡೋದಕ್ಕೆ ಕಾರಣ ಇದೆ. ಅದನ್ನ ನೆಕ್ಟ್ಸ್ಸ್​ ಸ್ಟೋರಿಯಲ್ಲಿ ಹೇಳುತ್ತೇವೆ. ಸದ್ಯ ಕನ್ನಡಿಗರ ರಾಜಕುಮಾರನ ಸಿನಿಮಾ ಶುರುವಾಗಿದ್ದು ಎಲ್ಲಿಂದ ಅನ್ನುವ ಮಾಹಿತಿ ನಿಮ್ಮ ಮುಂದೆ ಇಡುತ್ತಿದ್ದೇವೆ.

ಇಲ್ಲಿದೆ ನೋಡಿ ಆ ಸತ್ಯ

ಅಪ್ಪುರವರ #GG  ಸಿನಿಮಾ ಆರಂಭವಾಗಿದ್ದು ಶಿವಮೊಗ್ಗದಲ್ಲಿ.. ಹೌದು. ಇದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ.. ಬೆಟ್ಟದ ಹೂವಿನಿಂದ ಸಿನಿಮಾ ತೆರೆ ಮೇಲೆ ಆರಂಭವಾದರೆ, ನಿಜವಾಗಿಯು ಚಿತ್ರೀಕರಣ ಆರಂಭಗೊಂಡಿದ್ದು ನಮ್ಮ ಶಿವಮೊಗ್ಗದಲ್ಲಿ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯಲ್ಲಿ.

ಹೌದು, ಇಂತಹದ್ದೊಂದು ಕುತೂಹಲದ ವಿಷಯದ ಮೂಲ ಸಿಕ್ಕಾಗ ನಾವು ಆಗುಂಬೆಯಲ್ಲಿ ಸಿಕ್ಕವರನ್ನೆಲ್ಲಾ ಸಂಪರ್ಕಿಸಿದ್ದೆವು. ಆದರೆ, ಪುನೀತ್​ರ GG ಶುರುವಾದ ಮೂಲ ಸಿಗಲಿಲ್ಲ. ಹಾಗೆ ನೋಡುವಾಗ ಸಿನಿಮಾದ ಟ್ರೈಲರ್​ನಲ್ಲಿ ನಮ್ಮ ಮಲೆನಾಡಿನ ಕಾಳಿಂಗ ಮನೆಯ ಗೌರಿ ಶಂಕರ್​ರವರು ಕಾಣಸಿಕ್ಕರು. ತಕ್ಷಣವೇ ಅವರನ್ನ ಸಂಪರ್ಕಿಸುವ ಪ್ರಯತ್ನ ಮಾಡಿದೆವು. ಕಾಡು ಕಾಳಿಂಗ ಸುತ್ತುತ್ತಿರುವ ಗೌರಿಶಂಕರ್​ರ ಸಿಗುವಾಗ ತಡವಾಯ್ತಾದರೂ ಅದ್ಭುತ ವಿಚಾರಗಳು ಅವರಿಂದ ಸಿಕ್ಕವು.

punith rajkumar

ಗೌರಿ ಶಂಕರ್​ ಹೇಳಿದ್ದೇನು?

ಹೌದು, ಅಪ್ಪುರವರ ಗಂಧದ ಗುಡಿ ಆರಂಭವಾಗಿದ್ದು ಆಗುಂಬೆಯ ಕಾಳಿಂಗ ಮನೆಯಲ್ಲಿ. ಒಂದು ಅಪರಿಚಿತ ಜಾಗದಲ್ಲಿ ಪ್ರತ್ಯಕ್ಷವಾಗಿದ್ದ ಕಾಳಿಂಗವೊಂದನ್ನು ಹಿಡಿದು ಕಾಡಿಗೆ ಬಿಡುವ ಸೀನ್​ ಮೂಲಕ ಸಿನಿಮಾದ ಚಿತ್ರೀಕರಣ ಆರಂಭವಾಗಿತ್ತು. ಅದಕ್ಕೂ ಮೊದಲು ಚಿತ್ರದ ಅಮೋಘ್​ ಗೌರಿಶಂಕರ್​ರವರನ್ನ ಸಂಪರ್ಕಿಸಿ, ಈ ಬಗ್ಗೆ ಚರ್ಚೆ ಮಾಡಿದ್ದರಂತೆ. ಈ ಬಗ್ಗೆ ನಮ್ಮೊಂದಿಗೆ ಮಾತನಾಡಿದ ಗೌರಿಶಂಕರ್​ರವರು ಹೇಳಿದ್ದು ಹೀಗೆ..

ನಾನು ಅಮೋಘ್ ಸ್ನೇಹಿತರು. ಗಂಧದ ಗುಡಿ ಸಿನಿಮಾದ ಬಗ್ಗೆ ಮೊದಲು ಅಮೋಘ್ ಫೋನ್ ಕಾಲ್ ಮಾಡಿದ್ರು. ಪುನಿತ್ ರಾಜ್ ಕುಮಾರ್ ಸರ್ ಜೊತೆ ಗಂಧದ ಗುಡಿ ಸಿನಿಮಾ ಮಾಡಲು ಉದ್ದೇಶಿಸಿರುವ ಬಗ್ಗೆ ತಿಳಿಸಿದ್ರು. ಈ ಡಾಕ್ಯುಮೆಂಟರಿಯಲ್ಲಿ ನೀನು ಕೂಡ ಕಾಣಿಸಿಕೊಳ್ಳಬೇಕು ಎಂದು ಹೇಳಿದಾಗ. ನನಗೆ ತುಂಬಾ ಖುಷಿಯಾಯ್ತು.ಪುನಿತ್ ಸರ್ ಅವರನ್ನು ನೋಡಿದ್ದೇನೆ ಕೇಳಿದ್ದೇನೆ

ಅವರೊಂದಿಗೆ ಕಾಡು ವನ್ಯಜೀವಿ ವಿಷಯದಲ್ಲಿ ಕೆಲಸ ಮಾಡಬೇಕೆಂದಿನಿಸಿದಾಗ. ರೈಟ್ ಪರ್ಸನ್ ಅಂದುಕೊಂಡೆ. ಕಾಡು ವನ್ಯಪ್ರಾಣಿಗಳ ಬಗ್ಗೆ ನ್ಯಾಷನಲ್ ಜಿಯೋಗ್ರಾಫೀಕ್ ಚಾನಲ್ ನಲ್ಲಿ ಬಂದ್ರೆ ಸಾಲದು. ಸ್ಥಳೀಯವಾಗಿ ಅದರ ಬಗ್ಗೆ ಅರಿವು ಜಾಗೃತಿ ಮೂಡಿಸುವಂತ ಕೆಲಸಗಳಾಗಬೇಕು.

ನಿರ್ದೇಶಕ ಅಮೋಘ್ ಜೊತೆ ಮಾತನಾಡಿದಾಗ ನಿಜಕ್ಕೂ ಖುಷಿಯಾಯ್ತು. ಪುನಿತ್ ಸರ್ ರೊಂದಿಗೆ ಸಿನಿಮಾ ಮಾಡಬೇಕಾದ ಅವಕಾಶ ಸಿಕ್ಕಿದ್ದು, ಕನಸು ನನಸಾದಂತಾಗಿದೆ. ಸಿನಿಮಾ ನಟರೊಂದಿಗೆ ಕಾಡು ಹಾಗು ವನ್ಯಜೀವಿಗಳ ಬಗ್ಗೆ ಹಲವು ಚರ್ಚೆ ಮಾಡಿದ್ದೇನೆ. ಆದ್ರೆ ಪುನೀತ್ ರವರ ಬಗ್ಗೆ ಅಮೋಘ್ ಹೇಳಿದಾಗ, ಇವರೇ ಇಂತಹ ಸಿನಿಮಾ ಮಾಡಲು ಸೂಕ್ತ ವ್ಯಕ್ತಿ ಎಂದುಕೊಂಡೆ

puntih rajkumar

ಇದು ಆಕ್ಚುಲಿ ನಡೆದಿದ್ದು..!

ಗೌರಿಶಂಕರ್​ರವರು ಪುನೀತ್​ರ ಬಗ್ಗೆ ಹೇಳುತ್ತಾ ಹೋದಂತೆ, ನಮಗೆ ಸಿನಿಮಾ ನೋಡಿದಷ್ಟೆ ಖುಷಿಯಾಗುತ್ತಿತ್ತು. ಕಣ್ಮುಂದೇಯೇ ಅಪ್ಪುರವರು ಓಡಾಡ್ತಿದ್ದೇರೇನೋ ಎಂದೆನಿಸಿತ್ತು. ಅದರಲ್ಲಿಯು ಡಾ.ರಾಜಕುಮಾರ್​ರವರ ಗಂಧದಗುಡಿಯ ಸಿನಿಮಾ ನೋಡಿ ವೈಲ್ಡ್​ ಲೈಫ್​ ಕಡೆಗೆ ಆಸಕ್ತಿ ತಿರುಗಿಸಿದ್ದ ಗೌರಿಶಂಕರ್​ರವರು, ಅವರ ಮಗನ ಗಂಧದ ಗುಡಿಯಲ್ಲಿ ಅಭಿನಯಿಸುವ ಅವಕಾಶ ಸಿಗುತ್ತದೆ ಎಂದು ಊಹಿಸಿಯು ಇರಲಿಲ್ಲವಂತೆ. ಆದರೆ ಕೆಲವೊಂದು ಅದಾಗಿಯೇ ನಡೆಯುತ್ತವೆ. ಅದರ ಭಾಗವಷ್ಟೆ ನಾವು ಆಗಬಹುದು.. ಕಾರಣಕರ್ತರಾಗಲಾರೆವು ಎನ್ನುತ್ತಾರೆ.

ಅಮೋಘ್​ ನನ್ನ ಹತ್ತಿರ ಮಾತನಾಡ್ತಾ, ಆಗುಂಬೆಯಲ್ಲಿಯೇ ಮೊದಲು ಶೂಟಿಂಗ್ ಆರಂಭಿಸುವುದಾಗಿ ಹೇಳಿದ್ದರು. ಸ್ಟೋರಿ ಪ್ರಕಾರದಂತೆ ಅದರ ಆರಂಭ ಬೇರೆ ಸ್ಥಳ ತೋರಿಸಲಾಗಿದೆ. ಕಾಳಿಂಗ ಸರ್ಪಗಳ ಬಗ್ಗೆ ಅಧ್ಯಯನ ಮಾಡುತ್ತಿರುವ ನನ್ನ ಬಗ್ಗೆ ಅಮೋಘ್, ಪುನಿತ್ ಸರ್ ಗೆ ತಿಳಿಸಿದ್ರು. ಆಗುಂಬೆಯಲ್ಲಿಯೇ ಕಾಳಿಂಗ ಸರ್ಪಗಳನ್ನು ಹಿಡಿದು ಕಾಡಿಗೆ ಬೀಡುವ ಸೀನ್ ನಿಂದಲೇ ಸಿನಿಮಾ ಆರಂಭ ಮಾಡೋಣ ಎಂದು ಹೇಳಿದ್ರು. ಅದರಂತೆ ಆಗುಂಬೆಯಲ್ಲಿಯೇ ಆಕ್ಷನ್ ಕಟ್ ಹೇಳಿದ್ರು.
ಪುನಿತ್ ಸರ್ ಗೆ ಕಾಳಿಂಗ ಸರ್ಪ ಹಿಡಿಯುವುದನ್ನು ಲೈವ್ ಆಗಿ ತೋರಿಸಿದೆ.ಅವರು ತುಂಬಾ ಖುಷಿ ಪಟ್ಟರು. ಗಂಧದ ಗುಡಿ ಆಗುಂಬೆಯಿಂದಲೇ ಶುರು ಮಾಡಿದ್ದರಿಂದ ಹಾಗೂ ಕಾಣಸಿಕ್ಕ ಕಾಳಿಂಗದ ದೆಸೆಯಿಂದ, ಪುನೀತ್ ಸರ್ ಗೆ ಒಂದು ಗುಡ್ ಫೀಲ್ ಆರಂಭದಲ್ಲಿಯೇ ಸಿಕ್ಕಿತ್ತು. ಗೌರಿಶಂಕರ್​

ಕೇಳಿದ್ರಲ್ಲಾ,, ಗೌರಿಶಂಕರ್​ರವರ ಮಾತುಗಳನ್ನು.. ಸ್ನೆಹಿತರೇ ಗೌರಿ ಶಂಕರ್​ ಹೇಳಿದ್ದು ಇಷ್ಟೆ ಅಲ್ಲ, ಅಪ್ಪುರವರ ಕಾಳಿಂಗ ದರ್ಶನದ ಕಥೆ ನಿಜಕ್ಕೂ ರೋಚಕವಾಗಿದೆ. ಕೆಲವೇ ಹೊತ್ತಿನಲ್ಲಿ ಇನ್ನೊಂದು ಸ್ಟೋರಿಯೊಂದಿಗೆ ಅದನ್ನು ಹೇಳುತ್ತೇವೆ. ಈ ಸ್ಟೋರಿ ಇಷ್ಟವಾದಲ್ಲಿ ನಿಮ್ಮವರ ಜೊತೆ ಹಂಚಿಕೊಳ್ಳಿ, ನಿಮ್ಮ ಅಭಿಪ್ರಾಯ ತಿಳಿಸಿ