King Cobra new research update | ಸರ್ಪರಾಜನ ಬಗ್ಗೆ ಹೊರಬಿತ್ತು ರಣರೋಚಕ ಸಂಶೋಧನೆ

King Cobra new research update / Agumbe snake research

King Cobra new research update | ಸರ್ಪರಾಜನ ಬಗ್ಗೆ ಹೊರಬಿತ್ತು ರಣರೋಚಕ ಸಂಶೋಧನೆ
Agumbe snake research
King Cobra new research update | ಸರ್ಪರಾಜನ ಬಗ್ಗೆ ಹೊರಬಿತ್ತು ರಣರೋಚಕ ಸಂಶೋಧನೆ

 King Cobra new research update  / Malenadu today story / SHIVAMOGGA ಜನರು ಕಾರ್ಕೋಟಕ ವಿಷವನ್ನು ಕೇಳಿರಬಹುದು ಆದರೆ ನೋಡಿರಲು ಸಾದ್ಯವಿಲ್ಲ. ಆದರೆ ಕಾಳಿಂಗ ಸರ್ಪದ ವಿಷವನ್ನು ಕಾರ್ಕೋಟಕ ವಿಷಕ್ಕೆ ಹೋಲಿಸುತ್ತಾರೆ. ಅಷ್ಟರಮಟ್ಟಿಗೆ ವಿಷಜಂತು ಎನಿಸಿಕೊಂಡಿರುವ ಕಾಳಿಂಗವೂ, ಹಿಂದಿನಿಂದಲೂ ಕೌತುಕದ ಜೀವಂತ ಸರಿಸೃಪವಾಗಿ ಕಣ್ಮುಂದೆಯೆ ನಿಲ್ಲುತ್ತಿದೆ.


ಎದೆಮಟ್ಟಕ್ಕೆ ಹೆಡೆಯೆತ್ತಿ ಕಚ್ಚಬಲ್ಲ ಕಾಳಿಂಗವನ್ನ ನೆನಸಿಕೊಂಡರೆ ಭಯದ ದನಿಯೊಂದು ಎದೆಯೊಳಗೆ ಸದ್ದು ಮಾಡುತ್ತದೆ. ಆದಾಗ್ಯು ಉರಗಭಕ್ಷಕ ಕಾಳಿಂಗವೂ ಇವತ್ತಿಗೂ ಜಗತ್ತಿನ ಆಕರ್ಷಣೀಯ ಕಣ್ಣಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಲೇ ಇದೆ.

ಕಾಳಿಂಗ ಒಂದೇ ಪ್ರಭೇದ ಎಂಬ ಶತಮಾನದ ಸತ್ಯಕ್ಕೆ ತಿಲಾಂಜಲಿ ಇಟ್ಟ ಸಂಶೋಧನೆ


ಜಗತ್ತಿನ ಈ ಕುತೂಹಲಕ್ಕೆ ಪೂರಕವೆಂಬಂತೆ ಕಾಳಿಂಗ ಸರ್ಪಕ್ಕೆ ಸಂಬಂಧಿಸಿದಂತೆ ಹೊಸದೊಂದು ಸಂಶೋಧನೆ ಹೊರಬಿದ್ದಿದೆ. ಕಾಳಿಂಗ ಮಾದರಿಯ ಜೀವಿ ಜಗತ್ತಿನಲ್ಲಿ ಒಂದೇ ಎಂದು ತಿಳಿಯಲಾಗಿತ್ತು. ಆದರೆ ಇದೀಗ ಹೊರಬಿದ್ದಿರುವ ಸಂಶೋಧನೆಯಲ್ಲಿ ಕಾಳಿಂಗ ಒಂದೇ ಜಾತಿಯ ಸಂತತಿಯಲ್ಲ. ವಿಭಿನ್ನ ಜಾತಿಗಳನ್ನು ಹೊಂದಿರುವ ಕುಟುಂಬ ಕಾಳಿಂಗ ಎನ್ನುವ ಸಂಗತಿಯು ಉರುಗ ತಜ್ಞ ಪಿ. ಗೌರಿಶಂಕರ್ ಮತ್ತು ತಂಡ ನಡೆಸಿರುವ ಸಂಶೋಧನೆಯಲ್ಲಿ ತಿಳಿದು ಬಂದಿದೆ


1836 ರಲ್ಲಿ ಕಾಂಟರ್ ಎಂಬಾತ ಕಾಳಿಂಗ ಸರ್ಪಕ್ಕೆ ಒಪಿಯೋ(ಹಾವು) ಪಾಗಸ್( ತಿನ್ನುವ) ಒಪಿಯೋಪಾಗಸ್ ಎಂದು ಹೆಸರಿಟ್ಟದ್ದ , 150 ವರ್ಷಗಳ ನಂತರ ಕಾಳಿಂಗ ಸರ್ಪ ಸಂತತಿಯು ಹಲವು ವಿಕಸನಗೊಂಡ ವಂಶಾವಳಿಗಳನ್ನು ಹೊಂದಿದೆ ಎನ್ನುವ ಸಂಗತಿ ಖಾತರಿಗೊಂಡಿದೆ. ವೈಲ್ಡ್ ಲೈಫ್ ಬಯೋಲಾಜಿಸ್ಟ್ ಹಾಗೂ ಕಾಳಿಂಗ ಸಂರಕ್ಷಕ ಪಿ ಗೌರಿ ಶಂಕರ್ ತಮ್ಮ ಪಿಎಚ್ಡಿ ಸಂಶೋಧನಾ ಗೃಂಥದ ಮೂಲಕ ಕಾಳಿಂಗ ಸಂತತಿಯ ವಂಶಾವಳಿ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಕಾಳಿಂಗ ಸರ್ಪಗಳ ಮೇಲೆ ಡಿಎನ್ಎ ತಂತ್ರಜ್ಞಾನದ ಮೂಲಕ ಸಂಶೋಧನೆ ಕೈಗೊಂಡ ಗೌರಿ ಶಂಕರ್, ಎಸ್ಕೆ ದತ್ತಾ, ಗುನಾನಿಧಿ ಸಾಹೋ, ಜಾಕೋಬ್ ಹೋಗ್ಲೋಂಡ್ ಕಾರ್ತೀಕ್ ಶಂಕರ್ ರವರುಗಳ ಮಾರ್ಗದರ್ಶನದಲ್ಲಿ ಈ ಸಂಶೋಧನೆಯನ್ನು ಪ್ರಚುರಪಡಿಸಿದ್ದಾರೆ. ಇವರೊಂದಿಗೆ ವೂಲ್ಪ್ ಗ್ಯಾಂಗ್ ವೂಸ್ಟರ್, ಹಾಗೂ ಇಂದ್ರಾನೈಲ್ ದಾಸ್ ಸಹ ಕೈಜೋಡಿಸಿದ್ದರು. ಈ ಸಂಶೋಧನೆ ಕುರಿತು ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಗೌರಿಶಂಕರ್ ಹಲವು ಮಹತ್ವದ ಮಾಹಿತಿ ಹಂಚಿಕೊಂಡರು.


ಗೌರಿಶಂಕರ್ರವರು ಕೈಗೊಂಡ ಸಂಶೋಧನೆಯಲ್ಲಿ ಕಾಳಿಂಗ ಸರ್ಪವೂ ಕೇವಲ ಒಂದೆ ಸಂತತಿಯಲ್ಲ. ಬದಲಾಗಿ ಕಾಳಿಂಗ ಎನ್ನುವುದು ನಾಲ್ಕು ಬೇರೆ ಬೇರೆಯಾದ ವಂಶಾವಳಿಯನ್ನು ಹೊಂದಿರುವ ಸಂತತಿ ಎನ್ನುವುದು ಬೆಳಕಿಗೆ ಬಂದಿದೆ. ಬೌಗೋಳಿಕವಾಗಿ ಇದನ್ನು ವಿಂಗಡಿಸುವುದಾದರೆ, ಪಶ್ಚಿಮಘಟ್ಟ ಪ್ರದೇಶ, ಇಂಡೋ ಚೈನಿಸ್ ಪ್ರದೇಶ, ಇಂಡೋ ಮಲಯನ್ ಪ್ರದೇಶ, ಹಾಗೂ ಫಿಲಿಫೈನ್ಸ್ನ ಲೂಝನ್ ಪ್ರದೇಶ ಕಾಳಿಂಗದ ವಿಭಿನ್ನ ವಂಶಾವಳಿಯ ನೆಲವೀಡಾಗಿದೆ. ಕಾಳಿಂಗ ಮೈಮೇಲಿನ ಪಟ್ಟಿ ಬಣ್ಣದ ಮೂಲಕ ಪ್ರಭೇದಗಳನ್ನು ಗುರುತಿಸಬಹುದಾಗಿದೆ.ಪಶ್ಚಿಮಘಟ್ಟ ಪ್ರದೇಶದಲ್ಲಿರುವ ಕಾಳಿಂಗ ಸರ್ಪಗಳ ಉದ್ದ ಹಾಗು ಹೆಡೆ ಗಾತ್ರ ಕಡಿಮೆ ಇರುತ್ತದೆ. ಇಂಡೋ ಮಲಯನ್ ಹಾಗು ಪಿಲಿಪೆನ್ಸ್ ಕಾಡುಗಳಲ್ಲಿರುವ ಕಾಳಿಂಗ ಸರ್ಪಗಳು 18 ಅಡಿ ಉದ್ಜವರಗೆ ಹಾಗು ಹೆಡೆಯೂ ದೊಡ್ಡ ಗಾತ್ರದಲ್ಲಿರುತ್ತದೆ ಎಂದು ಗೌರಿಶಂಕರ್ ಹೇಳಿದ್ದಾರೆ.

ಕಾಳಿಂಗಕ್ಕೆ ಕಾಳಿಂಗವೇ ಶತ್ರು, ನಿಸರ್ಗವೇ ಸಮತೋತನ ಕಾಪಾಡಿಕೊಂಡು ಬಂದಿದೆ /Agumbe snake research

 ಕಾಳಿಂಗ ಸರ್ಪಗಳ ಸಂತತಿ ಇತ್ತಿಚ್ಚೆಗೆ ಹೆಚ್ಚಾಗಿದೆ ಎಂಬುದನ್ನು ಗೌರಿಶಂಕರ್ ಅಲ್ಲಗಳೆದಿದ್ದಾರೆ. ಆನೆ ಹುಲಿ ಚಿರತೆ ಸಿಂಹದ ಗಣತಿಯ ರೀತಿಯಲ್ಲಿ ಕಾಳಿಂಗ ಸರ್ಪದ ಗಣತಿ ಮಾಡಲು ಸಾಧ್ಯವಿಲ್ಲ. ಕಾಳಿಂಗ ಸರ್ಪ ಸುಮಾರು 40 ರಷ್ಟು ಮೊಟ್ಟೆಗಳನ್ನು ಇಟ್ಟರೂ...ಅದರಲ್ಲಿ ನೈಸರ್ಗಿಕವಾಗಿ ಬದುಕುಳಿಯುವುದು ಕೇವಲ ಒಂದು ಇಲ್ಲ ಎರಡು. ಹುಟ್ಟಿದಾಗಲೇ ಕಾಳಿಂಗ ಮರಿಗೆ ಒಂದು ವಾರಕ್ಕಾಗುವಷ್ಟು ಆಹಾರ ದೈಹಿಕವಾಗಿಯೇ ಲಭ್ಯವಾಗುತ್ತದೆ.

ಒಂದು ವಾರದ ನಂತರ ಪೊರೆ ಕಳಚಿದಾಗ ಮರಿಹಾವು ಬೇಟೆಗೆ ಅಣಿಯಾಗುತ್ತೆ. ಆ ಸಂದರ್ಭದಲ್ಲಿ ತನ್ನ ಗಾತ್ರಕ್ಕಿಂತಲೂ ಸಣ್ಣದಿರುವ ಕಾಳಿಂಗ ಮರಿಯನ್ನು ಅದು ತಿಂದು ಹಾಕುತ್ತದೆ. ಗಾತ್ರದಲ್ಲಿ ದೊಡ್ಡವಿರುವ ಕಾಳಿಂಗ ಸರ್ಪ ತನಗಿಂತ ಸಣ್ಣಗಿರುವ ಕಾಳಿಂಗ ಸರ್ಪವನ್ನು ಕೊಂದು ತಿನ್ನುತ್ತದೆ. ಕಾಳಿಂಗ ಸರ್ಪಕ್ಕೆ ಕಾಳಿಂಗವೇ ಶತ್ರುವಾಗಿದ್ದು, ಅದನ್ನು ತಿನ್ನುವ ಪ್ರಾಣಿ ಬೇರೆ ಇಲ್ಲ. ಹದಿನೈದು ಅಡಿ ಉದ್ದವಿರುವ ಕಾಳಿಂಗ 14 ಅಡಿ ಉದ್ದವಿರುವ ಸರ್ಪವನ್ನು ಕೊಲ್ಲುತ್ತೆ. ಹದಿನಾಲ್ಕು ಅಡಿ ಉದ್ದವಿರುವ ಕಾಳಿಂಗ ಸರ್ಪವು ಹದಿಮೂರು ಅಡಿ ಉದ್ದ ಇರುವ ಹಾವನ್ನು ಕೊಂದು ತಿನ್ನುತ್ತದೆ.ದೊಡ್ಡ ಕಾಳಿಂಗ ತನಗಿಂತ ಒಂದು ಅಡಿ ಸಣ್ಣಗಿರುವ ಕಾಳಿಂಗ ಸರ್ಪವನ್ನು ಕೊಂದು ತಿನ್ನುತ್ತದೆ. ಹೀಗಾಗಿ ನಿಸರ್ಗವೇ ಕಾಳಿಂಗ ಸರ್ಪದ ಸಮತೋಲನವನ್ನು ಕಾಪಾಡಿಕೊಂಡು ಬಂದಿದೆ. ಯಾವುದೇ ಕಾರಣಕ್ಕೂ ಕಾಳಿಂಗ ಸರ್ಪದ ಸಂತತಿ ಹೆಚ್ಚಾಗಿದೆ ಎಂದರೆ ನಂಬಲು ಸಾಧ್ಯವಿಲ್ಲ. ಎಂದು ಗೌರಿ ಶಂಕರ್ ಹೇಳಿದ್ದಾರೆ.