ಸಿಕ್ಕಿಬಿದ್ದ ಕಾಳಿಂಗ ಸರ್ಪದ ತಲೆ ಮೇಲೆ ಬಿತ್ತು ನೀರು!! ವೈರಲ್ ವಿಡಿಯೋ

SHIVAMOGGA |  Jan 11, 2024  |  ಶಿವಮೊಗ್ಗ ಜಿಲ್ಲೆಗೆ ಹಾವುಗಳು ಹೊಸ ವಿಚಾರವೇನಲ್ಲ. ಆದಾಗ್ಯು ಕಾಣ ಸಿಗುವ ಹಾವುಗಳು ತಮ್ಮದೇ ವೈಶಿಷ್ಟ್ಯದಿಂದ ಜನರಲ್ಲಿ ಕುತೂಹಲ, ಅಚ್ಚರಿ ಜೊತೆಗೆ ಚೂರು ಭಯ ಮೂಡಿಸುತ್ತದೆ. ಅದರಲ್ಲಿಯು ಕಾಳಿಂಗ ಸರ್ಪ ಅಂದರೆ ಎದೆ ಸಣ್ಣಕ್ಕೆ ಜುಮ್​ ಎಂದು, ಉಸಿರು ಬಿಡುವಂತೆ ಮಾಡುತ್ತದೆ. 

ಸೆರೆಯಾದ ಕಾಳಿಂಗ ಸರ್ಪ

ಸದ್ಯ ಕಾಳಿಂಗ ವಿಚಾರ ಹೇಳುವುದಕ್ಕೆ ಕಾರಣವಿದೆ. ಶಿವಮೊಗ್ಗ ಜಿಲ್ಲೆ  ಸಾಗರ ತಾಲ್ಲೂಕು ಆಡುಕಟ್ಟೆ ಗ್ರಾಮದಲ್ಲಿ  ಸುಮಾರು 8 ಅಡಿ ಉದ್ದದ ಕಾಳಿಂಗವೊಂದು ಕಾಣಿಸಿಕೊಂಡಿತ್ತು. ಅದು ಸೆರೆಯಾದ ದೃಶ್ಯ ಕ್ಯಾಮಾರದಲ್ಲಿ  ರೆಕಾರ್ಡ್ ಆಗಿದೆ. ಸದ್ಯ ವೈರಲ್ ಸಹ ಆಗುತ್ತಿದೆ.

ಇಲ್ಲಿನ ನಿವಾಸಿಯೊಬ್ಬರ ಮನೆ ಸಮೀಪ ಕಾಣಿಸಿಕೊಂಡಿದ್ದ ಕಾಳಿಂಗ ಅತ್ತಿಂದಿತ್ತ ಹಂದಾಡುತ್ತಿರುತ್ತಿರಲಿಲ್ಲ. ಅಲ್ಲಿಯೇ ಠಿಕಾಣಿ ಹೂಡುವ ಸುಳಿವು ನೀಡಿತ್ತು. ಹೀಗಾಗಿ ರಗಳೆ ವಿಚಾರ ಎಂದುಕೊಂಡ ಸ್ಥಳೀಯರು ಹಾವುಗಳನ್ನ ಸಂರಕ್ಷಿಸುವ ಅನುಪ್ ಎಂಬವರಿಗೆ ಕರೆ ಮಾಡಿದ್ದಾರೆ. 

 

ಆಟೋ ಓಡಿಸುವ ವೃತ್ತಿಯಲ್ಲಿರುವ ಅನುಪ್​ ಹಾವುಗಳನ್ನ ಸಹ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡುತ್ತಾರೆ. ಹಾವು ಸಂರಕ್ಷಣೆಯನ್ನ ಹವ್ಯಾಸವಾಗಿಸಿಕೊಂಡಿರುವ ಇವರು ಸ್ಥಳೀಯರು ಕರೆದ ತಕ್ಷಣ ಸ್ಥಳಕ್ಕೆ ಬಂದು ಕಾಳಿಂಗವನ್ನು (King cobra) ಹಿಡಿದಿದ್ದಾರೆ

ಹಿಡಿಯುವ ಸಂದರ್ಭದಲ್ಲಿ ಹಾವಿನ ಮೇಲೆ ನೀರನ್ನ ಸುರಿದಿದ್ದಾರೆ. ಬಳಿಕ ಅದಕ್ಕೆ ತೊಂದರೆಯಾಗದಂತೆ ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿ ಕಾಡಿಗೆ ಬಿಟ್ಟಿದ್ದಾರೆ. 

Leave a Comment