Malenadu today exclusive | ಬಿಡಾರದ ಸಾಕಾನೆಗಳು ಕಾಡು ತೊರೆದು ಬಿಡಾರಕ್ಕೆ ಬರುತ್ತಿಲ್ಲವೇಕೆ? |Courtship behavior ಬಗ್ಗೆ ನಿಮಗೆಷ್ಟು ಗೊತ್ತು?

Malenadu today exclusive | Why don't the campers leave the forest and come to the camp?

Malenadu today exclusive | ಬಿಡಾರದ ಸಾಕಾನೆಗಳು ಕಾಡು ತೊರೆದು ಬಿಡಾರಕ್ಕೆ ಬರುತ್ತಿಲ್ಲವೇಕೆ? |Courtship behavior ಬಗ್ಗೆ ನಿಮಗೆಷ್ಟು ಗೊತ್ತು?
Malenadu today exclusive | Why don't the campers leave the forest and come to the camp?

Malenadu today exclusive | Why don't the campers leave the forest and come to the camp / Malenadu today story / SHIVAMOGGA

ಸಕ್ರೆಬೈಲು ಆನೆ ಬಿಡಾರದ ಹೆಣ್ಣಾನೆಗಳ ಪಾಲಿಗೆ ವರದಾನವಾಗಿರುವ ಮೂರು ಕಾಡಾನೆಗಳು ಗಂಡಾನೆಗಳ ಪಾಲಿಗೆ ಯಮಧೂತರಂತಾಗಿವೆ. ಪ್ರತಿದಿನ ಕಾಡಿಗೆ ಬಿಡುವ ಬಿಡಾರದ ಸಾಕಾನೆಗಳು ನೆಮ್ಮದಿಯಾಗಿ ಮಾರನೆ ದಿನ ಮತ್ತೆ ಬಿಡಾರ ಸೇರುವುದು ಈಗ ಕಷ್ಟವಾಗಿದೆ. ಗಂಡಾನೆಗಳ ಮೇಲೆ ಅನಾಯಾಸವಾಗಿ ಎಗರುವ ಕಾಡಾನೆಗಳು..ಹೆಣ್ಣಾನೆಗಳನ್ನು (Courtship behavior) ಕೋರ್ಟ್ ಶಿಪ್ ಬಿಹೇವಿಯರ್ ಮೂಲಕ ಆಕರ್ಷಿಸುತ್ತವೆ. ಹೆಣ್ಣಾನೆಯನ್ನು ಆಕರ್ಷಿಸಲು ಗಂಡಾನೆಗೆ ವಾರಕ್ಕೂ ಅಧಿಕ ಸಮಯ ಬೇಕಾಗುತ್ತದೆ. ತನ್ನ ಆಂಗಿಕ ಭಾವ ಗುಣಲಕ್ಷಣದಿಂದ ಹೆಣ್ಣಾನೆಯನ್ನು ಆಕರ್ಷಿಸಿ ನಂತರ ಅದರ ಜೊತೆ ಲೈಂಗಿಕ ಸಂಪರ್ಕ ಹೊಂದುವುದು ಕೋರ್ಟ್ ಶಿಫ್ ಬಿಹೆವಿಯರ್ ಲಕ್ಷಣವಾಗಿದೆ. ಈ ಸಂದರ್ಭದಲ್ಲಿ ತಿಂಗಳುಗಟ್ಟಲೆ ಸಂಗಾತಿಗಳು ಒಟ್ಟಿಗೆ ಇದ್ದು ಲೈಂಗಿಕ ಸಂಪರ್ಕ ಹೊಂದುತ್ತವೆ. ತನ್ನ ಆಸೆ ಈಡೇರಿದ ನಂತರ ಗಂಡಾನೆ ಹೆಣ್ಣಾನೆಯನ್ನು ಬಿಟ್ಟು ಕಳಿಸುತ್ತೆ.

ಕಾಡು ಸೇರಿರುವ ನೇತ್ರ ಮತ್ತು ಭಾನುಮತಿ ಹೆಣ್ಣಾನೆ

ಈಗ ಸಕ್ರೆಬೈಲು ಆನೆ ಬಿಡಾರದ ನೇತ್ರಾ ತನ್ನ ಮರಿಯೊಂದಿಗೆ ಕಾಡಿಗೆ ಹೋಗಿ ಹದಿನೇಳು ದಿನಗಳೇ ಕಳೆದಿದೆ. ಶೆಟ್ಟಿಹಳ್ಳಿ ಕಾಡಿನಲ್ಲಿ ಬೀಡುಬಿಟ್ಟಿರುವ ಕಾಡಾನೆಯೊಂದು ನೇತ್ರ ಹಾಗು ಮರಿಯನ್ನು ತನ್ನ ಜೊತೆಗಿಟ್ಟುಕೊಂಡು ಬಿಟ್ಟು ಕಳಿಸುತ್ತಿಲ್ಲ. ಇತ್ತ ಕಾಡಾನೆಗೆ ಫಿದಾ ಆಗಿರುವ ನೇತ್ರಾ ಕೂಡ ಕಾಡನ್ನು ಬಿಟ್ಟು ಬರುವ ಲಕ್ಷಣಗಳು ಕಾಣುತ್ತಿಲ್ಲ. ನೇತ್ರಾಳನ್ನು ವಾಪಸ್ಸು ಬಿಡಾರಕ್ಕೆ ತರಲು ಮಾವುತ ಕಾವಾಡಿಗಳು ಪ್ರತಿದಿನ ಹರಸಾಹಸ ಪಡುತ್ತಿದ್ದಾರೆ. ಸಿಬ್ಬಂದಿಗಳಿಗೆ ಕಾಡಾನೆ ದಾಳಿ ಭೀತಿ ಎದುರಾಗಿದೆ.ಬಿಡಾರದ ಸಾಕಾನೆಗಳ ಮೂಲಕ ನೇತ್ರ ಮತ್ತು ಅದರ ಮರಿಯನ್ನು ತರಲು ಪಟ್ಟ ಪ್ರಯತ್ನ ಫಲ ನೀಡಿಲ್ಲ.

ಇನ್ನು ಭಾನುಮತಿ ಹೆಣ್ಣಾನೆ ಕೂಡ ಕಳೆದ ಒಂದು ತಿಂಗಳಿನಿಂದ ಕಾಡು ತೊರೆದು ಬಿಡಾರಕ್ಕೆ ಬರುತ್ತಿಲ್ಲ. ಕೋರ್ಟ್ ಶಿಪ್ ಬಿಹೇವಿಯರ್ ನಂತೆ ಕಾಡಾನೆಯೊಂದಿಗೆ ಸಂಪರ್ಕಹೊಂದಿರುವ ಭಾನುಮತಿ ಕಳೆದ ತಿಂಗಳಷ್ಟೆ ಪ್ರಸವಪೂರ್ವ ಗರ್ಭ ಧರಿಸಿದ್ದರ ಪರಿಣಾಮ ಹಾಲು ಕಾಣದ ಮರಿ ಸಾವನ್ನಪ್ಪಿತ್ತು. ಈಗ ಮತ್ತೆ ಭಾನುಮತಿ ಕಾಡಾನೆಯೊಂದಿಗೆ ಸಂಪರ್ಕ ಹೊಂದಿದ್ದು. ಮತ್ತೆ ಗರ್ಭವತಿಯಾಗುವ ಲಕ್ಷಣಗಳು ಹೆಚ್ಚಿದೆ. ಪ್ರತಿದಿನ ಮಾವುತ ಕಾವಾಡಿಗಳು ಕಾಡಿಗೆ ಹೋಗಿ ಭಾನುಮತಿ ಮತ್ತು ನೇತ್ರಾ ಹೆಣ್ಣಾನೆಗಳ ಚಲನ ವಲನ ಗಮನಿಸಿ ಕರೆತರುವ ಪ್ರಯತ್ನ ಮುಂದುವರೆಸಿದ್ರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ಈ ಹಿಂದೆ ಕಾಡಾನೆ ಬಿಡಾರದ ಹೆಣ್ಣಾನೆಗಳನ್ನು ಇದೇ ರೀತಿ ವಾರಗಟ್ಟಲೆ ಇಟ್ಟುಕೊಂಡು ನಂತರ ಬಿಟ್ಟುಕಳಿಸಿದ ಉದಾಹರಣೆಗಳು ಸಾಕಷ್ಟಿದೆ. ಹೀಗಾಗಿ ನೇತ್ರಾ ಹಾಗು ಮರಿಯ ಜೀವಕ್ಕೇನು ಅಪಾಯವಿಲ್ಲ ಎಂಬುದು ಖಾತರಿಯಾಗಿದೆ. ಎಂದಿದ್ದರೂ ಬಿಡಾರಕ್ಕೆ ಬರುವ ನೇತ್ರ ಗರ್ಭವತಿಯಾದ್ರೆ..,ಬಿಡಾರಕ್ಕೆ ವೈಲ್ಡ್ ಜೀನು ಹೊಂದಿದ ಹೊಸ ಅತಿಥಿಯ ಆಗಮನವಾದಂತಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಸಿಬ್ಬಂದಿಗಳಿದ್ದಾರೆ.