ಸಕ್ರೈಬೈಲ್​ ಬಿಡಾರದಲ್ಲಿ ಡಾಕ್ಟರ್​ ಮೇಲೆ ಆನೆಯ ದಾಳಿ, ಡಾ.ವಿನಯ್​ ರನ್ನ ನೆಲಕ್ಕುರಳಿಸಿದ ನೀಲಾಂಬರಿ

BREAKING NEWS | Elephant attacks doctor at Sakraibail camp, Neelambari knocks dr Vinay down with trunk

ಸಕ್ರೈಬೈಲ್​ ಬಿಡಾರದಲ್ಲಿ ಡಾಕ್ಟರ್​ ಮೇಲೆ ಆನೆಯ ದಾಳಿ,  ಡಾ.ವಿನಯ್​ ರನ್ನ ನೆಲಕ್ಕುರಳಿಸಿದ ನೀಲಾಂಬರಿ
BREAKING NEWS | Elephant attacks doctor at Sakraibail camp, Neelambari knocks dr Vinay down with trunk

ಸಕ್ರೆಬೈಲು ಆನೆ ಬಿಡಾರದಲ್ಲಿ ಇಂದು ದೊಡ್ಡ ಅನಾಹುತವೊಂದು ತಪ್ಪಿದೆ.ಮರಿ ಹಾಕಿದ ತಾಯಿ ಆನಮೆ ಮತ್ತು ಮರಿಯಾನೆಗೆ ಔಷದೋಪಚಾರ ಮಾಡಲು ಬಂದ ವೈದ್ಯ ಡಾಕ್ಟರ್ ವಿನಯ್ ಕುಮಾರ್ ಮೇಲೆ ಪಕ್ಕದಲ್ಲಿದ್ದ ನಿಲಾಂಬರಿ ಆನೆ ದಾಳಿ ನಡೆಸಿದೆ.

ಸೊಂಡಿಲಿನಿಂದ ಡಾಕ್ಟರ್ ವಿನಯ್ ಗೆ ನಿಲಾಂಬರಿ ಆನೆ ತಿವಿದ ಪರಿಣಾಮ ಅವರು ನೆಲಕ್ಕುರುಳಿದ್ದಾರೆ.ತಕ್ಷಣ ಆನೆ ಸೊಂಡಿಲಿನಿಂದ ವಿನಯ್ ರವರ ಬಲಗಾಲನ್ನು ಎತ್ತಿ ಕಾಲಿನಿಂದ ತಿವಿಯಲು ಮುಂದಾಗಿದೆ. ಆಗ ವಿನಯ್ ಅರಚಿಕೊಂಡರೂ ಸಾಕಾನೆ ಮಾತ್ರ ಮಾತು ಕೇಳಲಿಲ್ಲ. ಮಾವುತ ಕಾವಾಡಿಗಳು ಸನಿಹದಲ್ಲಿ ಬಾನುಮತಿ ಆನೆಯ ಆರೈಕೆಯಲ್ಲಿದ್ದರಿಂದ ತಕ್ಷಣಕ್ಕೆ ಯಾರು ಸ್ಥಳಕ್ಕೆ ಧಾವಿಸಲು ಸಾಧ್ಯವಾಗಲಿಲ್ಲ.

ಅದೃಷ್ಟ ವಶಾತ್ ಎರಡು ಬಾರಿ ಮುಂಗಾಲು ಎತ್ತಿ ವಿನಯ್ ತುಳಿಯಲು ಮುಂದಾದ ನಿಲಾಂಬರಿ ಆನೆ ನಂತರ ಶಾಂತಳಾಗಿದ್ದಾಳೆ. ಆನೆ ದಾಳಿಯಿಂದ ವಿನಯ್ ರವರ ಎರಡು ಕಾಲಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನಿಲಾಂಬರಿ ಆನೆ ಚಿತ್ರದುರ್ಗ ಮಠದ ಆನೆಯಾಗಿದ್ದು, ಇತ್ತೀಚೆಗೆ ಸಕ್ರೆಬೈಲು ಆನೆ ಬಿಡಾರಕ್ಕೆ ಹೆಚ್ಚಿನ ತರಬೇತಿ ಮತ್ತು ಆರೈಕೆಗಾಗಿ ಕರೆತರಲಾಗಿತ್ತು.

ಆನೆ ಮೊದಲಿನಿಂದಲೂ ಅಕ್ರಮಣಕಾರಿ ಸ್ವಭಾವ ಹೊಂದಿರುವ ಈ ಆನೆಯ ಜೊತೆಗೆ ಮಾವುತ ಯಾವಾಗಲೂ ಇರಬೇಕಾದ ಅನಿವಾರ್ಯತೆ ಎದುರಾಗಿದೆ. ಇಂದು ವಿನಯ್ ಮೇಲೆ ನಿಲಾಂಬರಿ ದಾಳಿ ಮಾಡಿದಾಗ ಮಾವುತ ಸ್ಥಳದಲ್ಲಿರಲಿಲ್ಲ. ಆನೆ ಕೊಂಚ ರೋಷ ಭರಿತವಾಗಿದ್ರೂ, ಇಂದು ವಿನಯ್ ಬದುಕುಳಿಯುತ್ತಿರಲಿಲ್ಲ ಎಂದು ಅವರು ನಡೆದ ಘಟನೆಯನ್ನು ಹಂಚಿಕೊಂಡಿದ್ದಾರೆ.