ವನದೇವತೆಗಳ ಅಪ್ಪಣೆಯಿಲ್ಲದೇ ಇಲ್ಲೇನು ನಡೆಯದು! ವರ್ಷಕ್ಕೊಮ್ಮೆ ನಡೆಯುತ್ತದೆ ಇಲ್ಲಿ ಜಾತಿ, ಧರ್ಮಗಳ ಬೇದವಿಲ್ಲದೆ ಕಾಡಿನ ಜಾತ್ರೆ! ಭಕ್ತಿಯ ಪವಾಡಕ್ಕಿಲ್ಲಿ ಆನೆಗಳೇ ಸಾಕ್ಷಿ! JP EXCLUSIVE STORY

Malenadu Today

MALENADUTODAY.COM  |SHIVAMOGGA| #KANNADANEWSWEB

ತಮ್ಮನ್ನು ಸದಾ ರಕ್ಷಿಸುವ ಕಾಡಿಗಾಗಿ, ಆನೆಗಾಗಿ ಈ ಪ್ರದೇಶದಲ್ಲಿ ವರ್ಷಕ್ಕೊಮ್ಮೆ ನಡೆಯುತ್ತೆ ಪ್ರಾರ್ಥನೆ.

ಹಿಂದು ಮುಸ್ಲಿಂ ಭೇದಭಾವವಿಲ್ಲದೆ ನೆರವೇರುವ ಈ ಪೂಜೆಗೆ ಸೇರುತ್ತಾರೆ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು

ಹೌದು ಸ್ನೇಹಿತರೇ, ನಾವು ಹೇಳುತ್ತರಿವುದು ನಿಜ. ಮಲೆನಾಡು ಶಿವಮೊಗ್ಗದ ಒಡಲಿನಲ್ಲಿ ಸುಪ್ತವಾಗಿ ಹರಿಯುತ್ತಿರುವ ಸತ್ಯಗಳಲ್ಲಿ ಇದು ಸಹ ಒಂದು. ಇಲ್ಲಿ ಮನುಷ್ಯನ ಅಸ್ತಿತ್ವಕ್ಕೂ ದೈವತ್ವವ ಇರುವಿಕೆಗೂ ಹೇಳಲಾಗದಂತಹ ನಂಟಿದೆ. ಕಾಡು, ಕಾಡಿನ ಬಗಲಿನಲ್ಲೊಂದು ಊರು, ಆ ಊರಿನಲ್ಲೊಂದು ದೈವ,, ಆ ದೈವದಿಂದಲೇ ನಾಡು, ಕಾಡಿಗೆ ಬೆಳಕು! ಇದು ಮಲೆನಾಡಲ್ಲಿ ಕಾಣಸಿಗುವ ದೃಶ್ಯಗಳು. ಕಾಂತಾರ ಸಿನಿಮಾ ಒಂದು ದಂತಕಥೆ ಎಂಬ ಅಡಿಬರಹ ಹಾಕಿಕೊಂಡಿದೆಯಾದರೂ, ನೆಲದ ಸಂಸ್ಕೃತಿಯ ಪ್ರತಿಬಿಂಬವಾಗಿತ್ತು. ಅದೇ ರೀತಿ ಮಲೆನಾಡಿನ ಆಚರಣೆಗಳು ಸಹ ಕಾಂತಾರ ಸಿನಿಮಾದಲ್ಲಿ ಕಾಣುವ ಹಾಗೆ ಪ್ರಕೃತಿ ಮತ್ತು ಮನುಷ್ಯನ ಸಂಬಂಧವನ್ನು ಮುಂದುವರಿಸಿಕೊಂಡು ಹೋಗುತ್ತಿದೆ

Malenadu Today

H3N2 ಅಂದರೆ ಏನು? ಸೋಂಕು ಅಂಟಿದ್ರೆ ಏನಾಗುತ್ತೆ!? ಇಬ್ಬರನ್ನ ಬಲಿ ಪಡೆದ ವೈರಸ್​ನಿಂದ ಎದುರಾಗುವ ಸಮಸ್ಯೆಗಳೇನು? ಪೂರ್ತಿ ಮಾಹಿತಿ!

ವಿಶೇಷ ಅಂಧರೆ,  ಹಬ್ಬಗಳು, ಜಾತ್ರೆಗಳು, ಉತ್ಸವ, ರಥೋತ್ಸವಗಳಲ್ಲಿ ನಮ್ಮನ್ನ ಕಾಪಾಡಿಕೊಳ್ಳುವ ಬೇಡಿಕೆಗಳಿರುತ್ತವೆ. ಹರಕೆಗಳಿರುತ್ತವೆ. ಆದರೆ, ಶಿವಮೊಗ್ಗದಲ್ಲಿ ಕಾಡಿನ ರಕ್ಷಣೆಗಾಗಿ, ಕಾಡು ಉಳಿದು ನಾಡಿನ ಉಸಿರು ಉಳಿಯಲಿ ಎಂದು ಹಬ್ಬ ನಡೆಯುತ್ತದೆ. ಅದರದ್ದೆ ಆದ ವಿಶಿಷ್ಟ ಆಚರಣೆ ನಡೆಯುತ್ತಿದೆ. ಅದನ್ನ ಇವತ್ತು ಹೇಳಲು ಹೊರಟಿರುವುದು..

READ |  ಶಿವಮೊಗ್ಗದ ಹೊಳೆಹೊನ್ನೂರು ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಮಹಿಳೆಯ ಶವ ಪತ್ತೆ! ನಡೆಯಿತೆ ಕೊಲೆ?

Malenadu Today

ಸಕ್ರಬೈಲ್​ನಲ್ಲಿ ನಡೆಯುತ್ತೆ ವಿಶಿಷ್ಟ ಆಚರಣೆ!

ಸಕ್ರೆಬೈಲ್​ (sakrebyle elephant camp) ಅನ್ನುವ ಊರು ಆನೆಗಳ ಬಿಡಾರದಿಂದಲೇ ಜಗತ್ತಿಗೆ ಫೇಮಸ್ . ಆದರೆ ಈ ಊರು ಸುತ್ತಮುತ್ತಲಿನ ಜನರಿಗೆ ನಾನಾ ಕಾರಣಕ್ಕೆ ಇಷ್ಟವಾಗುತ್ತೆ. ಪೇಟೆಯಿಂದ ಮೀನು ತಿನ್ನಲು ಬರುವ ಜನರಿಂದ ಹಿಡಿದು, ಕಾಡಿನ ಸೊಪ್ಪು ಹುಡುಕಿಕೊಂಡು ಬರುವವ ಪಂಡಿತರವರೆಗೂ ಸಕ್ರೆಬೈಲ್​ ಎಲ್ಲರನ್ನ ತನ್ನತ್ತ ಸೆಳೆದುಕೊಂಡಿದೆ. ಇನ್ನೂ ಇಲ್ಲಿನ ಆನೆ ಬಿಡಾರದ ಬಗ್ಗೆ ಪೀಠಿಕೆಯ ಅವಶ್ಯತಕತೆಯೇ ಇರುವುದಿಲ್ಲ. ಸದ್ಯ ನಾವು ಹೇಳಲು ಹೊರಟಿರುವುದು ಈ ಸಕ್ರೆಬೈಲ್ ಬಿಡಾರದ ಮಂದಿಯ ಒಂದು ವಿಶಿಷ್ಟ ಆಚರಣೆಯ ಬಗ್ಗೆ 

ಸಕ್ರೆಬೈಲಿನ ಮಾವುತ ಕಾವಾಡಿಗಳಲ್ಲಿ ಹಿಂದು-ಮುಸ್ಲಿಂರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಇವರ ನಡುವೆ ಎಂದು ಧರ್ಮ ಸಂಘರ್ಷಗಳು ನಡೆದಿಲ್ಲ. ಇಲ್ಲಿ ಎಲ್ಲರೂ ಅಣ್ಣ ತಮ್ಮಂದಿರಂತೆ ಒಗ್ಗಾಟ್ಟಾಗಿ ಜೀವನ ಸಾಗಿಸುತ್ತಿದ್ದಾರೆ. ಈ ಮಟ್ಟಿಗೆ ಸಕ್ರೆಬೈಲು ಎಂದರೆ ಅದು ಜಾತ್ಯಾತೀತ ಹಳ್ಳಿ. ಇಲ್ಲಿನ ಮಾವುತರು ಕಾವಾಡಿಗಳು ಸದಾ ಆನೆಯ ಮೇಲೆ ಕೆಲಸ ಮಾಡಬೇಕು.ಕಾಡಿನಲ್ಲಿ ನಡೆಯಬೇಕು. ಇವರ ಬದುಕಿಗೆ ಭದ್ರತೆಯಿಲ್ಲ. ಪ್ರಾಣದ ಹಂಗುತೊರೆದು ಕೆಲಸ ಮಾಡುವ ಮಾವುತ ಕಾವಾಡಿಗಳಿಗೆ ಆ ವನದೇವತೆಯೇ ಶೀರಕ್ಷೆ.

Malenadu Today

ಹಾಗಾಗಿ ಬದುಕಿನುದ್ದಕ್ಕೂ ಕಾಡಿನ ಆಸರೆಯಲ್ಲಿಯೇ ಬದುಕುವ ಮಾವುತ ಕಾವಾಡಿಗಳು ವನದೇವತೆ ಮಾಸ್ತಿಯಮ್ಮನಿಗೆ ವರ್ಷಕ್ಕೊಮ್ಮೆ ಪೂಜೆ ಸಲ್ಲಿಸುತ್ತಾರೆ. ಸಕ್ರೆಬೈಲಿನ ಶೆಟ್ಟಿಹಳ್ಳಿ ಕಾಡಿನಲ್ಲಿ ಮಾವುತರು ಕಾವಾಡಿಗಳು ನಮ್ಮನ್ನು ಕಾಪಾಡು ತಾಯಿ ಎಂದು ಮನದೇವತೆಗೆ ಪ್ರತಿ ವರ್ಷ ಪೂಜೆ ಸಲ್ಲಿಸುತ್ತಾರೆ. ನಮ್ಮ ಬಿಡಾರದ ಆನೆಗಳಿಗೆ ರಕ್ಷಣೆಕೊಡು, ಕಾಡಿನ ಆನೆಗಳಿಂದ ನಮ್ಮನ್ನ ರಕ್ಷಿಸಿ, ಆನೆ ಸಾಕುವ ಉದ್ಯೋಗದಲ್ಲಿ ಅಪಾಯ ಎದುರಾಗದಿರಲಿ, ಬಿಡಾರದ ಬದುಕಿಗೆ ದಕ್ಕೆಯಾಗದಿರಲಿ, ತಪ್ಪಿದ ಕೈಗಳಿಂದ ಆದ ಅಚಾತುರ್ಯಗಳಿಗೆ ಕ್ಷಮೆ ನೀಡು, ಕಾಡಿಗೆ ಬೆಂಕಿ ಬೀಳದಿರಲಿ, ಮಂದಡಿ ಇಡುವ ಪ್ರತಿ ಹೆಜ್ಜೆಗೂ ಬೆನ್ನ ಹಿಂದೆ ನಿನ್ನ ಆಶೀರ್ವಾದವಿರಲಿ ಎಂದು ಬಿಡಾರದ ಮಂದಿ ಮಾಸ್ತಿಯಮ್ಮನನ್ನ ಪೂಜಿಸುತ್ತಾರೆ. ವರ್ಷದ ಪೂಜೆ ಕೊಟ್ಟ ಮೇಲೆಯೇ ಆ ವರ್ಷದ ಮುಂದಿನ ಚಟುವಟಿಕೆಗಳು ಸಲೀಸು ಎಂಬುದು ಇಲ್ಲಿಯ ಸಿಬ್ಬಂದಿಯ ನಂಬಿಕೆ

Malenadu Today

ಆತ ಹಿಂದೂವೇ ಇರಲಿ, ಮುಸ್ಲೀಮೇ ಇರಲಿ, ಇಲ್ಲಿ ಜಾತಿ ಅಥವಾ ಧರ್ಮ ಮುಖ್ಯವಾಗುವುದಿಲ್ಲ. ಕಾಡಿನ ತಾಯಿಯೇ ಎಲ್ಲದಕ್ಕೂ ಮೂಲ. ಆಕೆ ಅಸ್ತು ಅನ್ನದೇ ಹುಲ್ಲು ಕೂಡ ಕಾಡಿನಲ್ಲಿ ಮಿಸುಕಾಡದು ಎನ್ನುತ್ತಾರೆ ಬಿಡಾರದ ಸಿಬ್ಬಂದಿ. ಆಕೆಯ ಆಶೀರ್ವಾದದಿಂದಲೇ ಆನೆಯಂತಹ ಆನೆಯು, ಸಣಕಲು ದೇಹದ ಮಾತಿಗೆ ಹೂ ಗುಟ್ಟುತ್ತದೆ, ತಲೆ ಅಲ್ಲಾಡಿಸುತ್ತದೆ! ಮನುಷ್ಯ ಪ್ರಯತ್ನದಿಂದಷ್ಟೆ ಇವೆಲ್ಲಾ ಸಾದ್ಯವಾ ಎನ್ನುತ್ತಾರೆ ಸ್ಥಳೀಯರು

ವಿಶೇಷ ಅಂದರೆ, ವರ್ಷಕ್ಕೊಮ್ಮೆ ಕಾಡಿನ ಮಾಸ್ತಿಯಮ್ಮನಿಗೆ ಪೂಜೆ ಕೊಡುವ ಬಿಡಾರದ ಸಿಬ್ಬಂದಿ ಅಲ್ಲಿಯೇ ಬೂತಪ್ಪನ ಗುಡಿಗೂ ಪೂಜೆ ಕೊಡುತ್ತಾರೆ. ಅಲ್ಲದೆ ಸಮೀಪದಲ್ಲಿಯೇ ಇರುವ ಚಸೈಯದ್ ಜಲಾಲುದ್ದಿನ್ ಷಾ ದರ್ಗಾಕೂ ಪೂಜೆ ಕೊಡುತ್ತಾರೆ. ನಿಮಗೆ ಗೊತ್ತಿರಲಿ, ತುಂಗಾನದಿಯಲ್ಲಿ ಅದೆಷ್ಟೂ ನೀರು ಬಂದು ಪ್ರವಾಹ ಸೃಷ್ಟಿಯದರೂ ಈ ದರ್ಗಾ ಇದುವರೆಗೂ ತುಂಗೆಯಲ್ಲಿ ಮುಳುಗಿಲ್ಲವಂತೆ. 

Malenadu Today

ಕಾಡಿನಲ್ಲಿ ಈವರೆಗೂ ವನ್ಯಪ್ರಾಣಿಗಳಿಂದ ತೊಂದರೆಯಾಗಿಲ್ಲ.

ಸಕ್ರೆಬೈಲು ಮಾವುತ ಕಾವಾಡಿಗಳು ಪ್ರತಿದಿನ ಮುಂಜಾನೆ ಮತ್ತು ಬೆಳಿಗ್ಗೆ ಮಾವುತರು ಕಾವಾಡಿಗಳು ಕಾಡಿಗೆ ಹೋಗುತ್ತಾರೆ. ಇದುವರೆಗೂ ಇಲ್ಲಿನ ಸಿಬ್ಬಂದಿಗಳಿಗೆ ವನ್ಯಪ್ರಾಣಿಗಳಿಂದ ಯಾವುದೇ ತೊಂದರೆಯಾಗಿಲ್ಲ. ಇವರಿರುವ ಪ್ರದೇಶದಲ್ಲಿ ಎಲ್ಲಿಯೂ ಬೆಂಕಿ ಕಾಣಿಸಿಕೊಂಡಿಲ್ಲ. ಸಾಕಾನೆಗಳಿಂದ ಪ್ರಾಣಹಾನಿಯಾಗಿಲ್ಲ. ಕೆಲ ಸಾಂದರ್ಭಿಕ ಸಂದರ್ಭದಲ್ಲಿ ನಡೆದ ಕಹಿ ಘಟನೆಗಳನ್ನು ಹೊರತು ಪಡಿಸಿದರೆ ಶೆಟ್ಟಿಹಳ್ಳಿಯನ್ನು ವನದೇವತೆಯೇ ಕಾಯುತ್ತಿದ್ದಾಳೆ. ಇನ್ನೂಂದು ವಿಶೇಷ ಅಂದರೆ,  ಕಾಡಿನಲ್ಲಿರುವ ದರ್ಗಾವನ್ನು ಕಾಯಕಲ್ಪ ಮಾಡಲು ಹಲವರು ಮುಂದೆ ಬಂದರೂ, ಅದಕ್ಕೆ ದೇವರು ವರ ನೀಡಿಲ್ಲ. ನಾನೇಗಿದ್ದೇನೋ ಹಾಗೆಯೇ ಇರಲು ಬಿಡಿ ಎಂಬ ಸಂದೇಶ ಲಭಿಸಿದ ನಂತರವೇ ಈ ದರ್ಗಾವನ್ನು ಯಥಾ ಸ್ಥಿತಿಯಲ್ಲಿ ಕಾಯ್ದಿರಿಸಿಕೊಳ್ಳಲಾಗಿದೆ.

Malenadu Today

ಹೀಗೆ ರಾಷ್ಟ್ರಿಯ ಹೆದ್ದಾರಿಯ ಪಕ್ಕದಲ್ಲಿ ಸಾಗುವ ಕಾಡಿನ ನಡುವೆ ವರ್ಷಕ್ಕೊಮ್ಮೆ ಕುಟುಂಬಸ್ಥರ ಜೊತೆಗೆ ಸೇರವ ಮಾವುತರು, ಕಾವಾಡಿಗಳು, ಸಿಬ್ಬಂದಿಗಳು, ಮಾಸ್ತಿಯಮ್ಮ, ಬೂತಪ್ಪ ಹಾಗೂ ದರ್ಗಾಕ್ಕೆ ಪೂಜೆ ಕೊಟ್ಟು, ಅಲ್ಲಿಯೆ ವಿಶೇಷ ಅಡುಗೆ ಮಾಡಿ , ಹಬ್ಬದ ರೀತಿಯಲ್ಲಿ ಹೊಸಬಟ್ಟೆಯೊಂದಿಗೆ ಸಂಭ್ರಮಿಸುತ್ತಾರೆ. ಕಾಡು ಕಾಪಾಡಲಿ ಎಂದು ಪರಸ್ಪರ ಹಾರೈಸಿಕೊಳ್ಳುತ್ತಾರೆ. ರಾತ್ರಿ ಕಾಡು ಸೇರಿದ ಆನೆಯ ಮರುದಿನ ಕರೆದುಕೊಂಡು ಬರುವಾಗ ಹಿಡಿವ ಕತ್ತಿಗೆ ಮೊದಲು ನಮಸ್ಕರಿಸಿ, ಕಾಡಿನ ಆರಂಭದಲ್ಲಿ ನೆಲ ಮುಟ್ಟಿ ಮುನ್ನೆಡೆಯುತ್ತಾರೆ. ದುತ್ತೆಂದು ಅವತರಿಸುವ ಅಪಾಯಗಳನ್ನ ಕಾಡಿನ ದೇವತೆ ತಡೆಯುತ್ತಾಳೆ. ಇದು ಸಕ್ರೆಬೈಲ್​ನಲ್ಲಿ ನಡೆವ ಒಂದು ವಿಶೇಷತೆ.. 

STORY BY JP :  ಮಲೆನಾಡು ಟುಡೆ ತಂಡ ವಿವರಗಳ ಸಮೇತ ಸುದ್ದಿಗಳನ್ನು ಹೆಕ್ಕಿ ತರುತ್ತದೆ. ಇದರ ಹಿಂದೆ ವಿಶಿಷ್ಟ ಶ್ರಮವಿರುತ್ತದೆ. ಹಾಗಾಗಿ ಈ ವರದಿಯನ್ನು ಯಥಾವತ್ತು ಕಾಪಿಮಾಡಿ, ತಮ್ಮ ಹೆಸರನ್ನು ಹಾಕಿಕೊಳ್ಳುವಂತಿಲ್ಲ..

READ | ಶಿವಮೊಗ್ಗ ಬಸ್​ಸ್ಟ್ಯಾಂಡ್​ನಲ್ಲಿ ಶಾರೀಖ್! ಶಂಕಿತ ಆರೋಪಿಗಳನ್ನು ಇಲ್ಲಿ ಕರೆತಂದು ವಿಚಾರಿಸುತ್ತಿರುವುದೇಕೆ? ಇಲ್ಲಿದೆ ವರದಿ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS :#sakrebyleelephantcamp, #sakrebailuelephantcamp, #elephantcamp, #sakrebyle, #elephantcampsakrebyle, #sakrebyleelephantcampkarnataka, #sakrebyleelephantcampshivamoga, #elephant, #sakrebyleelephant, #elephantcampsinkarnataka, #elephants, #sakrebylecamp, #elephantinsakrebyle, #sakrebyleelephantcampstay, #sakrebyleelephant #campshimoga, #sakrebyleelephantcampuntamed, #sakkarebyleelephantcamp #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga 

Share This Article