H3N2 ಅಂದರೆ ಏನು? ಸೋಂಕು ಅಂಟಿದ್ರೆ ಏನಾಗುತ್ತೆ!? ಇಬ್ಬರನ್ನ ಬಲಿ ಪಡೆದ ವೈರಸ್​ನಿಂದ ಎದುರಾಗುವ ಸಮಸ್ಯೆಗಳೇನು? ಪೂರ್ತಿ ಮಾಹಿತಿ!

H3N2: What is this virus and how can it be prevented from spreading

H3N2  ಅಂದರೆ ಏನು? ಸೋಂಕು ಅಂಟಿದ್ರೆ ಏನಾಗುತ್ತೆ!? ಇಬ್ಬರನ್ನ ಬಲಿ ಪಡೆದ ವೈರಸ್​ನಿಂದ ಎದುರಾಗುವ ಸಮಸ್ಯೆಗಳೇನು? ಪೂರ್ತಿ ಮಾಹಿತಿ!
H3N2 ಅಂದರೆ ಏನು? ಸೋಂಕು ಅಂಟಿದ್ರೆ ಏನಾಗುತ್ತೆ!? ಇಬ್ಬರನ್ನ ಬಲಿ ಪಡೆದ ವೈರಸ್​ನಿಂದ ಎದುರಾಗುವ ಸಮಸ್ಯೆಗಳೇನು? ಪೂರ್ತಿ ಮಾಹಿತಿ!

MALENADUTODAY.COM  |SHIVAMOGGA| #KANNADANEWSWEB

ರಾಜ್ಯದಲ್ಲಿ ಕೋವಿಡ್​ನ ನಂತರ ಇದೀಗ ಹೆಚ್​3 ಎನ್​2 ಸಾಕಷ್ಟು ಸದ್ದು ಮಾಡುತ್ತಿದೆ. ಸದ್ಯ ಈ ವೈರಲ್​ ಇಬ್ಬರನ್ನ ಬಲಿ ತೆಗೆದುಕೊಂಡಿದ್ದು, ಈ ಪೈಕಿ ಓರ್ವರು ನಮ್ಮ ರಾಜ್ಯದವರು. ಸದ್ಯ , ಈ ವೈರಸ್​ನಿಂದ ಹಲವೆಡೆ ಆತಂಕವೂ ಮೂಡಿದೆ.ಈ ನಿಟ್ಟಿನಲ್ಲಿ ಏನಿದು ಏನಿದರ ಲಕ್ಷಣ ನಿವಾರಣೆ ಹೇಗೆ ಎಂಬುದರ ಒಂದು ವರದಿ ಇದಾಗಿದೆ.  ವಾತಾವರಣದಲ್ಲಿ ದಿಢೀರ್ ಬದಲಾವಣೆ ಅಥವಾ ವ್ಯತ್ಯಾಸದಿಂದಾಗಿ ಈ ವೈರಸ್​ ಜನರಲ್ಲಿ ಕಾಣಿಸಿಕೊಳ್ತಿದೆ. ಹೀಗಾಗಿ ಬದಲಾಗುವ ವಾತವರಣದ ಹೊರತಾಗಿಯು ತಮ್ಮ ದೇಹಸ್ಥಿತಿಯನ್ನು ಆರೋಗ್ಯಯುತವಾಗಿ ಇಟ್ಟುಕೊಳ್ಳುವುದು ಇಲ್ಲಿ ಮುಖ್ಯವಾಗುತ್ತದೆ. ಇನ್ನೂ ಇಲ್ಲ ಸಲ್ಲದ ಆತಂಕದ ವರದಿಗಳನ್ನು ಓದಿ ಹೆದರುವ ಮೊದಲು, ಈ ಅಂಕಿಸಂಖ್ಯೆಯ ಸೋಂಕು ಎನು ಅದರರ್ಥವೇನು ಎಂಬದನ್ನ ತಿಳಿದುಕೊಳ್ಳಬೇಕು

H3N2  Influenza A ವೈರಸ್​ ಎಂದರೇ ಏನು? 

H3N2  Influenza A ವೈರಸ್​ನ ಉಪಪ್ರಕಾರ ಎನ್ನುತ್ತಾರೆ. ಇನ್ಫ್ಲುಯೆನ್ಜಾ ಎ ವೈರಸ್​ ಎನ್ನುವುದಕ್ಕೂ ಮೊದಲು, ಇನ್​ಪ್ಯೂಯೆನ್ಜಾ ವೈರಸ್ಗಳಲ್ಲಿ ನಾಲ್ಕು ವಿಧಗಳಿವೆ ಎಂಬುದು ನಿಮಗೆ ಗೊತ್ತಿರಲಿ. ಅವುಗಳ ಹೆಸರು ಎ, ಬಿ, ಸಿ ಮತ್ತು ಡಿ. ಈ ಪೈಕಿ ಇನ್​ಪ್ಲ್ಯೂಯೆನ್ಜಾ ಎ ಮತ್ತು ಬಿ   ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತವೆ. ಇನ್ನೂ ಇನ್​ಪ್ಲ್ಯೂಯೆನ್ಜಾ ಸಿ ವೈರಸ್  ಸಾಮಾನ್ಯವಾಗಿ  ಸಣ್ಣ ಮಟ್ಟಿಗಿನ ಅನಾರೋಗ್ಯಕ್ಕೆ ಕಾರಣವಾಗುತ್ತವೆ. ಹಾಗೂ ಇದು ತೀವ್ರ ಸ್ಥರದ ರೋಗಗಳಿಗೆ ಕಾರಣವಾಗದು. ಇನ್​ಪ್ಲ್ಯೂಯೆನ್ಜಾ ಡಿ ವೈರಸ್​ ಮೊದಲ ಹಂತ ಜ್ವರ ತರುತ್ತದೆಯಾದರೂ ಇದು ಗೊತ್ತಾಗದಷ್ಟು ಸಣ್ಣ ಮಟ್ಟಿಗೆ ಬಾದಿಸುತ್ತದೆ. 

ಇನ್ನೂ  ಇನ್​ಪ್ಲ್ಯೂಯೆನ್ಜಾ ಎ ವೈರಸ್​ ಸಾಂಕ್ರಾಮಿಕ ರೋಗ ಹರಡುವ ವೈರಸ್​ ಎಂದು ಹೇಳಲಾಗುತ್ತದೆ. ಅಂದರೆ ಚಳಿಗಾಲ ಮತ್ತು ಬೇಸಿಗೆಯಲ್ಲಿ ಹರಡುವ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುವ ವೈರಸ್​ಗಳು ಈ ಪಟ್ಟಿಯಲ್ಲಿ ಬರುತ್ತದೆ. ಈ ವೈರಸ್​ಗಳು ಪರಿವರ್ತನೆಗೊಳ್ಳುತ್ತಲೇ ಇರುತ್ತವೆ. ಹೀಗೆ ಪರಿವರ್ತನೆಗೊಂಡು ರೋಗನಿರೋಧಕ ಶಕ್ತಿ ಕಡಿಮೆ ಇರುವ ಜನರಲ್ಲಿ ಹೊಗ್ಗಿ ವಿಪರೀತವಾಗಿ ಸೋಂಕು ತಗುಲಿಸಿ, ಪರಿಣಾಮಕಾರಿಯಾಗಿ ಸಮಾಜದ ನಡುವೆ ಹರಡುವಷ್ಟು ಶಕ್ತಿಶಾಲಿಯಾಗಿ ವೈರಸ್ ಬೆಳೆದರೆ, ಅದರಿಂದ ಸಾಂಕ್ರಾಮಿಕ ರೋಗ ಹರಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಉದಾಹರಣೆಗೆ ಕೋವಿಡ್ 19 ವೈರಸ್! 

READ |  ಶಿವಮೊಗ್ಗದ ಹೊಳೆಹೊನ್ನೂರು ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಮಹಿಳೆಯ ಶವ ಪತ್ತೆ! ನಡೆಯಿತೆ ಕೊಲೆ?

ಇನ್​ಪ್ಲ್ಯೂಯೆನ್ಜಾ ಎ ವೈರಸ್​ಗಳನ್ನು ಅದರಲ್ಲಿರುವ ಎರಡು ಪ್ರೋಟೀನ್ಗಳ ಆಧಾರದ ಮೇಲೆ ಮತ್ತಷ್ಟು ವಿಂಗಡಣೆ ಮಾಡಲಾಗುತ್ತದೆ.  ಹೆಮಾಗ್ಲುಟಿನಿನ್ (ಎಚ್) ಮತ್ತು ನ್ಯೂರಾಮಿನಿಡೇಸ್ (ಎನ್) ಎಂಬ ಪ್ರೋಟಿನ್​ಗಳು ಇನ್​ಪ್ಲ್ಯೂಯೆನ್ಜಾ ಎ ನಲ್ಲಿರುತ್ತದೆ ಈ ಪೈಕಿ  18 ವಿಭಿನ್ನ ಹೆಮಾಗ್ಲುಟಿನಿನ್ ಉಪ ಪ್ರಕಾರಗಳು ಮತ್ತು 11 ವಿಭಿನ್ನ ನ್ಯೂರಾಮಿನಿಡೇಸ್ ಉಪ ಪ್ರಕಾರಗಳಿವೆ . ಅದರಲ್ಲಿ ಸದ್ಯ ಕಾಣಿಸಿಕೊಂಡಿರುವ ರೋಗದ ಹೆಸರು ಹೆಚ್​3 ಎನ್​2 .. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ (ಲಿಂಕ್)

ಇದಿಷ್ಟು ವೈರಸ್​ನ ಪರಿಚಯ ಇನ್ನೂ ಕಳೆದ ವರ್ಷ ಹೆಚ್​1 ಎನ್​1 ಹೆಚ್ಚಾಗಿ ಕಾಣಿಸಿಕೊಂಡಿತ್ತು. ಸಾಮಾನ್ಯವಾಗಿ ಇದು ರಾಜ್ಯವೂ ಸೇರಿದಂತೆ ಹೆಚ್ಚು ಕಡೆಗಳಲ್ಲಿ ಬಾದಿಸಿದ ಸೋಂಕು. ಹಂದಿಜ್ವರ ಎಂದೇ ಕರೆಯಲ್ಟಟ್ಟ ಸೋಂಕು ಈ ಸಲ ಅಷ್ಟಾಗಿ ಸುದ್ದಿಯಾಗಿಲ್ಲ. ಅದರ ಬದಲಾಗಿ ಕೇಳಿಬರುತ್ತಿರುವುದು ಹೆಚ್3 ಎನ್​2 ವೈರಸ್​. ಹಾಗಾಗಿ ಇದೊಂದು ಸಾಂಕ್ರಾಮಿಕ ರೋಗವಷ್ಟೆ ಆಗಿದ್ದು, ಅತಿಯಾದ ಆತಂಕದ ಅಗತ್ಯ ಇಲ್ಲಿ ಅನಾವಶ್ಯಕ. ಹಾಗಂತ ನಿರ್ಲಕ್ಷ್ಯವೂ ಸಲ್ಲದು. ಏಕೆಂದರೆ ಇದೇ ವೈರಸ್​ 1978 ರಲ್ಲಿ ವಿಶ್ವವನ್ನೆ ಭಾಧಿಸಿ ಸಾವು ನೋವಿಗೆ ಕಾರಣವಾಗಿತ್ತು, ಆನಂತರದ ದಶಕದಲ್ಲಿ ಸೋಂಕು ಸಾಕಷ್ಟು ವಿಕಸನಗೊಂಡಿದೆ ಎನ್ನುತ್ತದೆ ವೈದ್ಯಲೋಕ 

ರೋಗ ಕಾಣಿಸಿಕೊಂಡಿದೆ ಅನ್ನೋದು ಗೊತ್ತಾಗೋದು ಹೇಗೆ? 

H3N2  ನ ರೋಗಲಕ್ಷಣಗಳು  ಯಾವುದೇ ಸಾಮಾನ್ಯ ಜ್ವರಕ್ಕೆ ಹೋಲಿಸಬಹುದು. ಮುಖ್ಯವಾಗಿ ಕೆಮ್ಮು, ಜ್ವರ, ಮೈಕೈ ನೋವು ಮತ್ತು ತಲೆನೋವು, ಗಂಟಲು ನೋವು, ಮೂಗು ಸೋರುವಿಕೆ ಅಥವಾ ಕಟ್ಟುವಿಕೆ ಮತ್ತು ತೀವ್ರ ಆಯಾಸ ಇದರ ಲಕ್ಷಣಗಳು. ಅಲ್ಲದೆ ವಾಕರಿಕೆ, ವಾಂತಿ ಮತ್ತು ಅತಿಸಾರದ ಲಕ್ಷಣಗಳು ಸಹ ಕೆಲವೊಬ್ಬರಲ್ಲಿ ಕಂಡುಬಂದಿದೆ. 

ಯಾರ್ಯಾರಿಗೆ ಬರುತ್ತೆ? ನಮಗೂ ಬರುತ್ತಾ? 

ಐಎಂಎ ಪ್ರಕಾರ ನೋಡುವುದಾದರೆ, ಈ ವೈರಸ್ 15 ವರ್ಷಕ್ಕಿಂತ ಕಡಿಮೆ ಅಥವಾ 50 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳನ್ನು ಹೆಚ್ಚು ಟಾರ್ಗೆಟ್ ಮಾಡುತ್ತದೆ. ಅಲ್ಲದೆ  ಅಸ್ತಮಾ, ಮಧುಮೇಹ, ಹೃದ್ರೋಗ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಹೆಚ್ಚಾಗಿ ಬಾಧಿಸುವ ಸಾಧ್ಯತೆ ಇರುತ್ತದೆ. ಎಚ್ 3 ಎನ್ 2  ಸೋಂಕು ಸಾಮಾನ್ಯವಾಗಿ ಐದರಿಂದ ಏಳು ದಿನಗಳವರೆಗೆ ಇರುತ್ತದೆ ಮತ್ತು ಜ್ವರವು ಮೂರು ದಿನಗಳ ನಂತರ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಆದಾಗ್ಯೂ, ಕೆಮ್ಮು ಮೂರು ವಾರಗಳವರೆಗೆ ಮುಂದುವರಿಯಬಹುದು ಎನ್ನಲಾಗುತ್ತದೆ. 

ಸೋಂಕಿನಿಂದ ದೂರ ಇರೋದು ಹೇಗೆ? 

ಹೆಚ್ 3 ಎನ್ 2 ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಒಳ್ಳೆಯದು ತಿನ್ನುವ ಮೊದಲು ಕೈತೊಳೆದುಕೊಳ್ಳುವುದು ಮುಖ, ಮೂಗು . ಬಾಯಿಯನ್ನು ಮುಟ್ಟಿಕೊಳ್ಳುವ ಮೊದಲು ಕೈಗಳನ್ನು ಶುದ್ಧವಾಗಿಟ್ಟುಕೊಳ್ಳುವುದು,   ಸ್ಯಾನಿಟೈಸರ್ ಬಳಸುವುದು ಒಂದಿಷ್ಟು ಮುನ್ನೆಚ್ಚರಿಕೆ ಕ್ರಮಗಳು . ಇನ್ನೂ ಆರೋಗ್ಯಯುತವಾಗಿರಲು ಪ್ರಯತ್ನಿಸುವುದು ಅಂದರೆ, ಹಣ್ಣು, ತರಕಾರಿ ಮತ್ತು ಹಣ್ಣಿನ ರಸಗಳನ್ನು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದರಿಂದ ಈ ಸೋಂಕಿನಿಂದ ತಪ್ಪಿಸಿಕೊಳ್ಳಹುದು. ಮಿತ ಊಟ, ಉತ್ತಮ ವ್ಯಾಯಾಮ ಹಾಗೂ ಹದವಾದ ನಿದ್ರೆಯ ಜೊತೆ ಶುಚಿತ್ವ ಕಾಪಾಡಿಕೊಳ್ಳುವುದು ಆರೋಗ್ಯದಿಂದರಲು ಸಹಕಾರಿ, 

READ | ಶಿವಮೊಗ್ಗ ಬಸ್​ಸ್ಟ್ಯಾಂಡ್​ನಲ್ಲಿ ಶಾರೀಖ್! ಶಂಕಿತ ಆರೋಪಿಗಳನ್ನು ಇಲ್ಲಿ ಕರೆತಂದು ವಿಚಾರಿಸುತ್ತಿರುವುದೇಕೆ? ಇಲ್ಲಿದೆ ವರದಿ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS :  h3n2,h3n2 influenza,h3n2 influenza virus,h3n2 virus in india,h3n2 virus news,h3n2 virus symptoms,h3n2 virus treatment,h3n2 virus news in hindi,h3n2 flu,influenza h3n2,virus h3n2,icmr h3n2 virus,h3n2 news,h3n2 symptoms,influenza a h3n2,h3n2 treatment,waht is h3n2 virus,what is h3n2 flu,h3n2 virus cases,h3n2 causes,new virus named h3n2 raising in india,h3n2 virus deaths,h3n2 death,vírus h3n2,influenza h3n2 virus,a h3n2   #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga