ಯಡಿಯೂರಪ್ಪರ ಕನಸು, ರಾಘವೇಂದ್ರರ ಶ್ರಮ! ಲಯನ್​ ಸಫಾರಿ ಹೇಗೆ ಹೊಸ ರೂಪ ಪಡೆದುಕೊಳ್ಳುತ್ತಿದೆ ಗೊತ್ತಾ?

Malenadu Today : lion safari Story

ಯಡಿಯೂರಪ್ಪರ ಕನಸು, ರಾಘವೇಂದ್ರರ ಶ್ರಮ! ಲಯನ್​ ಸಫಾರಿ ಹೇಗೆ ಹೊಸ ರೂಪ ಪಡೆದುಕೊಳ್ಳುತ್ತಿದೆ ಗೊತ್ತಾ?
Malenadu Today : lion safari Story

Malenadu Today : lion safari Story / ರಾಜ್ಯದ ಪ್ರತಿಷ್ಠಿತ ತ್ಯಾವರೆಕೊಪ್ಪ ಹುಲಿಸಿಂಹಧಾಮ ಇನ್ನು ಮುಂದೆ ದೇಶದ ಗಮನ ಸೆಳೆಯಲಿದೆ. ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕಾಡಿನ ಪರಿಸರದಲ್ಲಿ ತಲೆಎತ್ತಿರುವ ವಿಸ್ತೀರ್ಣದಲ್ಲಿ ದೊಡ್ಡದಾದ ಸಫಾರಿಯಾಗಿ ತ್ಯಾವರೆಕೊಪ್ಪ ಹುಲಿಸಿಂಹಧಾಮ ಗಮನ ಸೆಳೆದಿದೆ. ವಿಶಾಲವಾದ ಕೇಜ್ ಗಳಲ್ಲಿಯೇ ನೈಸರ್ಗಿಕ ಕಾಡನ್ನು ಸೃಷ್ಟಿಸಿ, ವನ್ಯಪ್ರಾಣಿಗಳನ್ನು ಬಂಧಮುಕ್ತಗೊಳಿಸಲಾಗಿದೆ.

Malenadu today story / SHIVAMOGGA

617 ಎಕರೆ ವಿಸ್ತೀರ್ಣದ ಅತೀದೊಡ್ಡ ಸಫಾರಿ ಎಂಬ ಹೆಗ್ಗಳಿಕೆ.

ರಾಜ್ಯದ ಪ್ರತಿಷ್ಠಿತ ತ್ಯಾವರೆಕೊಪ್ಪ ಹುಲಿಸಿಂಹಧಾಮವು ಇನ್ನು ಮುಂದೆ ದೇಶದ ಗಮನ ಸೆಳೆಯಲಿದೆ. ವಿಸ್ತೀರ್ಣದಲ್ಲಿ ಬನ್ನೇರುಘಟ್ಟ, ಮೈಸೂರು ಮೃಗಾಲಯವನ್ನು ಹಿಮ್ಮೆಟ್ಟಲಿರುವ ತ್ಯಾವರೆಕೊಪ್ಪ ಹುಲಿಸಿಂಹಧಾಮ ವನ್ಯಪ್ರಾಣಿಗಳ ಲಾಲನೆ ಪಾಲನೆಯಲ್ಲೂ ಒಂದು ಹೆಜ್ಜೆ ಮುಂದಿಟ್ಟಿದೆ. ಸುಮಾರು 617 ಎಕರೆ ವಿಸ್ತೀರ್ಣ ಹೊಂದಿರುವ ತ್ಯಾವರೆಕೊಪ್ಪ ಸಿಂಹಧಾಮ ದೇಶದಲ್ಲಿಯೇ ಅತೀ ದೊಡ್ಡ ಸಫಾರಿಯಾಗಿದೆ. ವನ್ಯಪ್ರಾಣಿಗಳನ್ನು ನೈಸರ್ಗಿಕ ಕಾಡಿನ ಪರಿಸರದಲ್ಲಿಯೇ ನೋಡುವಂತ ಭಾಗ್ಯವನ್ನು ಪ್ರವಾಸಿಗರಿಗೆ ಕಲ್ಪಿಸುವುದರ ಹಿಂದೆ ವೈಜ್ಞಾನಿಕ ಪ್ರಯೋಗಗಳೇ ನಡೆದಿದೆ. ಮೃಗಾಲಯದಲ್ಲಿ ವನ್ಯಪ್ರಾಣಿಗಳನ್ನು ಬಂಧಿಯನ್ನಾಗಿಸಿ ನೋಡುವ ಪ್ರಕ್ರೀಯೆಗೆ ಇನ್ನು ಮುಂದೆ ವಿದಾಯ ಹೇಳುವ ಕಾಲ ದೂರವಿಲ್ಲ. ಹಕ್ಕಿ ಪಕ್ಷಿ ವನ್ಯಪ್ರಾಣಿ, ಸರಿಸೃಪಗಳಾದಿಯಾಗಿ ಎಲ್ಲವನ್ನು ಸ್ವತಂತ್ರವಾಗಿ ಕಾಡಿನ ಪರಿಸದಲ್ಲಿಯೇ ಬಿಟ್ಟು,ಬಂಧಮುಕ್ತಗೊಳಿಸಲಾಗಿದೆ. ಹುಲಿ, ಸಿಂಹ, ಚಿರತೆ, ಕಾಡುಕೋಣ, ನೀಲ್ ಗಾಯ್, ಕರಡಿ, ಹೈನಾ, ಸೇರಿದಂತೆ ಹಲವು ಪ್ರಾಣಿ ಪಕ್ಷಿಗಳಿಗೆ ಪ್ರತ್ಯೇಕವಾದ ವಿಶಾಲವಾದ ಕೇಜ್ ಗಳನ್ನು ನಿರ್ಮಿಸಲಾಗುತ್ತಿದೆ.

ಮೊದಲ ಬಾರಿ ಗಾಜಿನ ಮನೆಯಲ್ಲಿ ನೈಸರ್ಗಿಕ ಕಾಡು.

ದೇಶದಲ್ಲಿಯೇ ಮೊದಲ ಬಾರಿಗೆ ಪಕ್ಷಿಗಳಿರುವ ಕೇಜ್ ಗಳಿಗೆ ಗಾಜನ್ನು ಅಳವಡಿಲಾಗಿದೆ. ಗಾಜು ಹಕ್ಕಿಪಕ್ಷಿಗಳಿಗೆ ಪ್ರತಿಫಲನವಾಗದಂತೆ ದೊಡ್ಡ ಗಾಜಿನ ಮನೆಯನ್ನೇ ನಿರ್ಮಿಸಲಾಗುತ್ತಿದೆ. ಗಾಜಿನ ಮನೆ ಒಳಗೆ ನೈಸರ್ಗಿಕ ಕಾಡನ್ನು ಹಾಗೆ ಉಳಿಸಿಕೊಳ್ಳಲಾಗಿದೆ. ಹಕ್ಕಿಪಕ್ಷಿಗಳು ಸ್ವಚ್ಚಂದವಾಗಿ ಹಾರಲು, ಎಲ್ಲಿ ಬೇಕಂದರೂ ಕೂರಲು ಮರದ ಟೊಂಗೆಗಳನ್ನು ಕಾಡಿನ ಪರಿಸರದಲ್ಲಿರುವಂತೆ ಅಳವಡಿಸಲಾಗಿದೆ.ಪಕ್ಷಿಗಳಿಗೂ ವೀಕ್ಷಕರ ನಡುವೆ ಯಾವುದೇ ಶಬ್ಧ ಮಾಲಿನ್ಯವಾಗಿಲು ಅವಕಾಶ ಇರುವುದಿಲ್ಲ. ಇನ್ನು ಎಕರೆಗಟ್ಟಲೇ ವೀಸ್ತೀರ್ಣದಲ್ಲಿ ವನ್ಯಪ್ರಾಣಿಗಳಿಗಾಗಿ ನಿರ್ಮಿಸಲಾಗುತ್ತಿರುವ ಆವರಣದಲ್ಲಿ ಸಹ ನೈಸರ್ಗಿಕ ಕಾಡನ್ನು ಉಳಿಸಿಕೊಳ್ಳಲಾಗಿದೆ. ಕಾಡಿನ ಪರಿಸರದಲ್ಲಿ ಸ್ವಚ್ಚಂದವಾಗಿ ವನ್ಯಪ್ರಾಣಿಗಳು ವಿಹರಿಸಬಹುದಾಗಿದೆ.ಪ್ರವಾಸಿಗರು ಸಹ ಹತ್ತಿರದಿಂದಲೇ ಪ್ರಾಣಿಗಳನ್ನು ವೀಕ್ಷಿಸಬಹುದಾಗಿದೆ.

ಸಫಾರಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಡಿಸಿಎಫ್ ಮುಕುಂದ್ ಚಂದ್, ಸಫಾರಿಗೆ ನೈಸರ್ಗಿಕ ಕಾಡಿನ ಟಚ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಸಫಾರಿಯ ಸಲಹೆಗಾರರಾಗಿರುವ ನಿವೃತ್ತ ಡಿಸಿಎಫ್ ಮಂಜುನಾಥ್ ಕೂಡ ತಮ್ಮ ಅನುಭವವನ್ನು ಒರಗೆ ಹಚ್ಚಿದ್ದಾರೆ. ಇವರಿಬ್ಬರ ಕಮಿಟ್ ಮೆಂಟ್ ಸಫಾರಿಗೆ ಮೆರಗು ನೀಡುವಲ್ಲಿ ಯಾವುದೇ ಅನುಮಾನವಿಲ್ಲ.

ಎರಡುವರೆ ಕಿಲೋಮೀಟರ್ ವಾಕಿಂಗ್ ಪಾತ್

ಒಟ್ಟು 617 ಎಕರೆ ವಿಸ್ತೀರ್ಣದ ತ್ಯಾವರೆಕೊಪ್ಪ ಸಿಂಹಧಾಮಕ್ಕೆ ಸಿಮೆಂಟ್ ಬೇಲಿಯನ್ನು ಹಾಕಲಾಗಿದೆ. ಪ್ರವಾಸಿಗರು ಎಲ್ಲಾ ಪ್ರಾಣಿಗಳನ್ನು ವೀಕ್ಷಿಸಿಕೊಂಡು ಬರುವ ಹೊತ್ತಿಗೆ ಎರಡುವರೆ ಕಿಲೋಮೀಟರ್ ಪಾದಯಾತ್ರೆ ಮಾಡಿರುತ್ತಾರೆ. ವಿಶಾಲವಾದ ವಾಕಿಂಗ್ ಪಾತ್ ನಿರ್ಮಾಣವಾಗುತ್ತಿದೆ.

ಪ್ರಾಣಿಗಳ ಆಹಾರಕ್ಕಾಗಿ ಸಫಾರಿಯಲ್ಲಿಯೇ ಪ್ಲಾಡರ್ ಹೌಸ್ ನಿರ್ಮಾಣ.

ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಫಾರಿಯಲ್ಲಿ ಪ್ರಾಣಿಗಳಿಗೆ ಆಹಾರದ ಕೊರತೆ ನೀಗಿಸಲು ಹತ್ತು ಎಕರೆ ಪ್ರದೇಶದಲ್ಲಿ ಫಾಡರ್ ಪ್ಲಾಟ್
ಸಫಾರಿಯಲ್ಲಿ ಪ್ರಾಣಿಗಳಿಗೆ ಆಹಾರ ಕೊರತೆ ಎದುರಾಗದಂತೆ ಈಗಾಗಲೇ ಹತ್ತು ಎಕರೆ ಪ್ರದೇಶದಲ್ಲಿ ಫಾಡರ್ ಪ್ಲಾಟ್ ಮಾಡಲಾಗಿದೆ. ಜಿಂಕೆ ಕಾಡುಕೋಣ ಕಡವೆ ನೀಲ್ ಗಾಯ್ ಸೇರಿದಂತೆ ಸಸ್ಯಹಾರಿ ವನ್ಯ್ರಪ್ರಾಣಿಗಳಿಗೆ ಬೇಕಾದ ಎಲ್ಲಾ ರೀತಿಯ ಆಹಾರ ಬೆಳೆಯನ್ನು ಸಫಾರಿಯ ಆವರಣದಲ್ಲಿಯೇ ಬೆಳೆಯಲಾಗುತ್ತಿದೆ. ವಿವಿಧ ಜಾತಿಯ ಹುಲ್ಲು, ಮೆಕ್ಕೆಜೋಳ ಕಬ್ಬು, ಹುರುಳಿ ಸೇರಿದಂತೆ ಹಲವು ಬೆಳೆಯ ಫಸಲನ್ನು ಈಗಾಗಲೇ ತೆಗೆದು ಸಫಾರಿಯ ಪ್ರಾಣಿಗಳಿಗೆ ನೀಡಲಾಗಿದೆ. ಇದರಿಂದ ಸಫಾರಿಗೆ ಹದಿನೆಂಟು ಲಕ್ಷ ರೂಪಾಯಿ ಉಳಿತಾಯವಾಗಿದೆ.

ಅಪ್ಪ ಮಗನ ಕನಸಿನ ಕೂಸು ಈ ಸಫಾರಿ

ಸಫಾರಿಯನ್ನು ದೊಡ್ಡ ಮಟ್ಟದಲ್ಲಿ ಪ್ರವಾಸೋಧ್ಯಮ ತಾಣವಾಗಿ ಮಾಡಬೇಕೆಂದು ಕನಸು ಹೊತ್ತವರು ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಹಾಗು ಪುತ್ರ ಸಂಸದ ಬಿ.ವೈ ರಾಘವೇಂದ್ರ. ತಂದೆಯ ಆಶಯದಂತೆ ತ್ಯಾವರೆಕೊಪ್ಪ ಹುಲಿಸಿಂಹಧಾಮದ ಅಭಿವೃದ್ಧಿಗೆ ಮತ್ತಷ್ಟು ಚುರುಕು ಮುಟ್ಟಿಸಿದ್ದು ಬಿ.ವೈ ರಾಘವೇಂದ್ರ. ಕೇಂದ್ರ ಸರ್ಕಾರಿಂದ ಒಪ್ಪಿಗೆ ಪಡೆಯುವುದರಿಂದ ಹಿಡಿದು ಸಫಾರಿಗೆ ಅನುದಾನ ತರುವವರೆಗೆ ಹೆಚ್ಚಿನ ಶ್ರಮ ಸಂಸದರು ಹಾಕಿದ್ದಾರೆ. ಹೀಗಾಗಿ ತ್ಯಾವರೆಕೊಪ್ಪ ಹುಲಿಸಿಂಹಧಾಮ ಕಡಿಮೆ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾಣುವಂತಾಗಿದೆ. ಇಲ್ಲಿನ ನೀರಿನ ಸಮಸ್ಯೆಗೆ ಯಡಿಯೂರಪ್ಪನವರು ಶಾಶ್ವತ ಪರಿಹಾರ ನೀಡಿ, ನಿರಂತರವಾಗಿ ನೀರು ಹಾಯುವಂತೆ ಮಾಡಿದ್ದಾರೆ.

ಇನ್ನು ಬೇಕಿದೆ ಅನುದಾನ ! ಸಂಸದರು ಹರಿಸಬೇಕಿದೆ ಗಮನ

ತ್ಯಾವರೆಕೊಪ್ಪ ಹುಲಿಸಿಂಹಧಾಮದಲ್ಲಿ ಈಗ ಎಲ್ಲಂದರಲ್ಲಿ ಕಾಮಗಾರಿಗಳು ನಡೆಯುತ್ತಲಿದೆ. ಇಷ್ಟು ದಿನಗಳ ಕಾಲ ಹರಿದುಬಂದ ಅನುದಾನದಲ್ಲಿ ಎಲ್ಲಾ ಕಾಮಗಾರಿಗಳು ನಡೆದಿದೆ. ಆದರೆ ರಸ್ತೆ ಫುಟ್ ಪಾತ್ ಹಾಗು ಬೃಹತ್ ಆವರಣಗಳ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ ಏನಿಲ್ಲವೆಂದರೂ ಹತ್ತುಕೋಟಿ ರೂಪಾಯಿಯ ನೆರವು ಬೇಕಾಗುತ್ತದೆ. ಇಲ್ಲವಾದಲ್ಲಿ ಎಷ್ಟು ವೇಗದಲ್ಲಿ ಸಫಾರಿ ಪ್ರಗತಿ ಕಂಡಿತೋ ಅಷ್ಟೇ ವೇಗದಲ್ಲಿ ತಳಸೇರುವಂತಾಗುತ್ತದೆ.ಈಗ ಹಾಲಿ ನಡೆಯುತ್ತಿರುವ ಕಾಮಗಾರಿ ಹಾಗು ಮಾಡಬೇಕಾಗಿರುವ ಕೆಲಸಗಳಿಗೆ ಸಂಸದರು ತುರ್ತಾಗಿ ಹಣ ಬಿಡುಗಡೆ ಮಾಡಿಸಬೇಕಿದೆ.