ತಮಿಳು ಸಿನಿಮಾದ ಮಾಸ್ಟರ್​ ಕಥೆಯಲ್ಲ! ಇದು ನಿಜವಾದ ಜೈಲಿನ ಮಾಸ್ಟರ್ ಕಥೆ!

It's not a master story of Tamil cinema! This is the story of a true prison master!

ತಮಿಳು ಸಿನಿಮಾದ ಮಾಸ್ಟರ್​ ಕಥೆಯಲ್ಲ! ಇದು ನಿಜವಾದ ಜೈಲಿನ ಮಾಸ್ಟರ್ ಕಥೆ!
It's not a master story of Tamil cinema! This is the story of a true prison master!

It's not a master story of Tamil cinema! This is the story of a true prison master! / Malenadu today story / SHIVAMOGGA ಇಳಯ ದಳಪತಿ ವಿಜಯ್​ ಹಾಗೂ ವಿಜಯ್​ ಸೇತುಪತಿ ನಟಿಸಿದ ತಮಿಳಿನ ಮಾಸ್ಟರ್​ ಸಿನಿಮಾ ಶಿವಮೊಗ್ಗದ ಹಳೇ ಜೈಲಿನಲ್ಲಿ ಶೂಟಿಂಗ್ ಆಗಿತ್ತು. ನಂತರ ರಿಲೀಸ್ ಆದ ಸಿನಿಮಾ ಭರ್ಜರಿ ಹಿಟ್​ ಕಂಡಿತ್ತು. ಅಲ್ಲದೆ, ಬಾಲಾಪರಾಧಿಗಳನ್ನ ಪರಿವರ್ತನೆ ಗೊಳಿಸುವ ಪಾತ್ರದಲ್ಲಿ ವಿಜಯ್​ ಮಿಂಚಿದ್ದರು.

ಹೆಚ್ಚುಕಮ್ಮಿ ಇದೇ ರೀತಿಯ ಪಾತ್ರವನ್ನು ರಿಯಲ್​ ಲೈಫ್​ನಲ್ಲಿಯು ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಕಳೆದ ಮೂರು ವರ್ಷಗಳಿಂದ ನಿಭಾಯಿಸಿಕೊಂಡು ಬರುತ್ತಿದ್ದಾರೆ ಗೋಪಾಲಕೃಷ್ಣ ಮೇಷ್ಟ್ರು . ಸದ್ಯ ಶಿವಮೊಗ್ಗದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕ ಗೋಪಾಲಕೃಷ್ಣರಿಗೆ ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಉತ್ತಮ ಶಿಕ್ಷಕ ಎಂಬ ಗೌರವ ಲಭಿಸಿದೆ. ಇವರ ಸಾಧನೆಯ ಬಗ್ಗೆ ಹುಡುಕಿಕೊಂಡು ಹೋದಾಗ, ಜೈಲಿನ ಆವರಣದಲ್ಲಿ ಸಾಕಷ್ಟು ನಿಜವಾದ ಕಥೆಗಳು ಕೇಳಿಬಂದವು.. ಅವುಗಳು ಇಲ್ಲಿವೆ ನೋಡಿ

ಬಂಧಿವಾಸಿಗಳಿಗೆ ಮಾಸ್ಟರ್ ಆದ ಗೋಪಾಲ ಕೃಷ್ಣ

ಕೇಂದ್ರ ಕಾರಾಗೃಹದಲ್ಲಿ ಕಳೆದ ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗೋಪಾಲಕೃಷ್ಣರವರು  2019-20 ನೇ ಸಾಲಿನಲ್ಲಿ 160 ಅನಕ್ಷರಸ್ಥ ಬಂಧಿವಾಸಿಗಳಿಗೆ ಶಿಕ್ಷಣದ ಅರಿವು ಮೂಡಿಸಿದ್ದಾರೆ.

ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯ  ದೂರ ಶಿಕ್ಷಣ ನಿರ್ದೇಶನಾಲಯದ ಅಧ್ಯಯನ ಕೇಂದ್ರವನ್ನು ಕಾರಾಗೃಹದಲ್ಲಿ ತೆರೆಯುವಲ್ಲಿ ಮಹತ್ವದ ಪಾತ್ರ ವಹಿಸಿದ ಗೋಪಾಲಕೃಷ್ಣ ಪದವಿಪೂರ್ವ ಶಿಕ್ಷಣವನ್ನು ಪೂರೈಸಿದ ಬಂಧಿಗಳಿಗೆ ಸ್ನಾತಕ ಮತ್ತು ಸ್ನಾತಕೋತ್ತರ ಶಿಕ್ಷಣ ಪಡೆಯಲು ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ.

ಈ ಮೂಲಕ ಶಿವಮೊಗ್ಗ ಕೇಂದ್ರ ಕಾರಾಗೃಹದ 10 ಬಂಧಿಗಳು ಪದವಿ  ಶಿಕ್ಷಣವನ್ನು ಪಡೆಯಲು ಸಾಧ್ಯವಾಗಿದೆ. ಅದರಲ್ಲೂ ವಿಶೇಷವಾಗಿ ಬಂಧಿ  ಬೆನಕ ಶೆಟ್ಟಿ ಕೆ. ಡಿ ಎಂಬವರು  ಎಂ. ಎ. ಇತಿಹಾಸ ವಿಭಾಗದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಪಡೆದಿರುವುದು ಗಮನಾರ್ಹ

ಇನ್ನೂ ವಿಶೇಷ ಎಂದರೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಒದಗಿಸುವ ಪ್ಲೀ ಬಾರ್ಗೇನಿಂಗ್​ ಕಾರ್ಯಕ್ರಮದಲ್ಲಿ ಹಾಲು ಮಂಜಪ್ಪ ಎಂಬವರು ತಮ್ಮ ವಿರುದ್ಧದ ಪ್ರಕರಣಗಳಿಗೆ ಸ್ವತಃ ತಾವೇ ವಾದ ಮಂಡಿಸಿ, ಪ್ರಕರಣಗಳಿಂದ ಬಿಡುಗಡೆ ಪಡೆದುಕೊಳ್ಳುವಂತಹ ಅವಕಾಶವನ್ನು ಪಡೆದಿದ್ದರು. ಇದಕ್ಕೆ ಕಾರಣವಾಗಿದ್ದು ಗೋಪಾಲಕೃಷ್ಣ ಮೇಷ್ಟ್ರು ಕಾರಾಗೃಹದಲ್ಲಿ ಕೈಗೊಂಡಿದ್ದ ಸಾಕ್ಷರತಾ ಆಭಿಯಾನ ಎನ್ನುತ್ತಾರೆ ಜೈಲಿನ ಸಿಬ್ಬಂದಿ

ಇದರ ಜೊತೆಯಲ್ಲಿ  ಗೋಪಾಲಕೃಷ್ಣರವರು ಇಂದಿರಾ ಗಾಂಧಿ ಮುಕ್ತ ವಿಶ್ವನಿದ್ಯಾನಿಲಯದಿಂದ ಸಂಯೋಜಿತಗೊಂಡಿರುವ ವೃತ್ತಿಪರ ತರಭೇತಿ ಕೋರ್ಸ್​ ಸಿಎಫ್​ಎನ್​ (Certificate Programme In Food & Nutrition)  ಮೂಲಕ ಜೈಲಿನ 83 ಬಂಧಿಗಳು ವಿವಿಧ ರೀತಿಯ ತರಭೇತಿ ಪಡೆದುಕೊಳ್ಳುವಂತೆ ಮಾಡಿದ್ದಾರೆ. ಇದಕ್ಕೆ ಸಾಕ್ಷಿಯಾಗಿ  ಸುರೇಶ್ ಆಚಾರಿ ಮತ್ತು ಸುಜಾತನಯರವರ ಕುಂಚದಲ್ಲಿ ಅರಳಿದ ಕಲಾಕೃತಿಗಳು  ಕಾರಾಗೃಹದ ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳುತ್ತಿದೆ. 

ಇವಲ್ಲದರ ಜೊತೆಜೊತೆಯಲ್ಲಿ ಪರಿವರ್ತನೆ ಆರಂಭ ಎಂಬ ಹೆಸರಿನ ಅಡಿಯಲ್ಲಿ  “ಸಾವಿರ ರೂಪಾಯಿ ಸರದಾರ” (ಝೀ ಕನ್ನಡ ವಾಹಿನಿಯ ಕನ್ನಡದ ಕೋಟ್ಯಾಧಿಪತಿ ಮಾದರಿಯ ವಿಶಿಷ್ಟ ಸರಣಿ ಕಾರ್ಯಕ್ರಮವನ್ನು ಜಾರಿಗೆ ತರುವಲ್ಲಿ ವಿಶೇಷ ಪ್ರಯತ್ನವನ್ನು ತೋರಿದವರು ಗೋಪಾಲಕೃಷ್ಣರವರು

ಭಾರತ ಸಂವಿಧಾನ, ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತದ ಮಹತ್ವ, ಭಾರತೀಯ ಸಂಸ್ಕೃತಿ,  ಪರಂಪರೆಯ  ಮತ್ತು  ಇತಿಹಾಸದ ಔನ್ನತ್ಯದ ಕುರಿತು ಬಂಧಿವಾಸಿಗಳಿಗೆ ಉತ್ತಮ ಅರಿವು ಮೂಡಿಸುವಲ್ಲಿ ಸಾರ್ಥಕತೆ ಕಂಡ ಈ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ 10  ಲಕ್ಷಕ್ಕೂ ಅಧಿಕ ಮಂದಿ  ವೀಕ್ಷಿಸಿ ಮೆಚ್ಚುಗೆ  ಪಡೆದುಕೊಂಡಿದೆ.  

ಇದೇ ಮಾದರಿಯಲ್ಲಿ  ಬಂಧನದಲ್ಲಿ ಬಾಂಧವ್ಯದ ಸರಿಗಮಪ ಎನ್ನುವ ಕಾರ್ಯಕ್ರಮವೂ ಜೈಲಿನ ಹಕ್ಕಿಗಳ ಹಾಡುಗಾರಿಕೆಯನ್ನು ಹೊರಕ್ಕೆ ತರುವಲ್ಲಿ ಯಶಸ್ವಿಯಾಯಿತಷ್ಟೆ ಅಲ್ಲದೆ, ಜೀ ವಾಹಿನಿಯಲ್ಲಿ ಬರುವಂತಹ ಕಾರ್ಯಕ್ರಮದ ಮಾದರಿಯಲ್ಲಿ ನಡೆದಿದ್ದು ವಿಶೇಷ.  ಮೇಲಾಗಿ ಬಂಧನ ಬಾವಲಹರಿ ಹೆಸರಿನಲ್ಲಿ ಬಂಧಿವಾಸಿಗಳ ಕವಿತೆಗಳ ಸಂಕಲವನ್ನೂ ಹೊರತರುವಲ್ಲಿ ಶ್ರಮಿಸಿದ ಕೈ ಗೋಪಾಲಕೃಷ್ಣರದ್ದಾಗಿದೆ.

ಜೈಲು ಎಂದರೆ ಬರೀ ಶಿಕ್ಷೆಯನ್ನು ಅನುಭವಿಸುವ ಬಂಧನ ಕೇಂದ್ರವಲ್ಲ. ಅಲ್ಲಿಯೂ ಜೀವಸೆಲೆಯು ಇರುತ್ತದೆ ಎನ್ನುವುದಕ್ಕೆ ಗೋಪಾಲಕೃಷ್ಣರವರು ಅತ್ಯುತ್ತಮವಾದುದನ್ನ ತಮ್ಮ ವೃತ್ತಿಯ ಮೂಲಕ ಸಾಧಿಸಿ ತೋರಿಸಿದ್ದಾರೆ. ಇವರ ಸಾಧನೆಗೆ  ಜೈಲು ಸಿಬ್ಬಂಧಿ ಹಾಗೂ ಅಧಿಕಾರಿ ವರ್ಗ ಮತ್ತು ಶಿವಮೊಗ್ಗದ ಗಣ್ಯವಲಯ ಶ್ಲಾಘನೆ ವ್ಯಕ್ತಪಡಿಸುತ್ತಿದೆ.