2 ಲಕ್ಷದ ಟೈಲ್ಸ್​ ಕದ್ದು 2 ತಿಂಗಳಲ್ಲಿಯೇ ಸಿಕ್ಕಿಬಿದ್ದ ಕಳ್ಳರು

ಯಾರೋ ಕಳ್ಳರು ಗ್ರಾಮದ ಲಕ್ಷ್ಮಣ್ ಮತ್ತು ಕೊಟ್ಯಾನ್ ಬ್ಯುಲ್ಡಿಂಗ್ ಸೊಲ್ಯೂಷನ್ ಗೆ ಸೇರಿದ ಟೈಲ್ಸ್​ಗಳನ್ನು ಕದ್ದೊಯ್ದಿದ್ದರು.

2 ಲಕ್ಷದ ಟೈಲ್ಸ್​ ಕದ್ದು 2 ತಿಂಗಳಲ್ಲಿಯೇ ಸಿಕ್ಕಿಬಿದ್ದ ಕಳ್ಳರು

ಶಿವಮೊಗ್ಗ  :ತುಂಗಾನಗರ ಪೊಲೀಸರು ಟೈಲ್ಸ್​ ಕಳ್ಳರನ್ನು ಹಿಡಿದು ಅಂದರ್ ಮಾಡಿದ್ದಾರೆ. ಕಳೆ ಸೆಪ್ಟೆಂಬರ್​ 25 ರಂದು  ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಾಡಿಕೊಪ್ಪದ ಗೋಡೌನ್ ನ ಮುಂಭಾಗದಲ್ಲಿದ್ದ  ಕಟ್ಟಡ ನಿರ್ಮಾಣದ ಟೈಲ್ಸ್ ಗಳನ್ನು ಕಳವಾಗಿತ್ತು. 

ಇದನ್ನು ಸಹ ಓದಿ:  ಮರಗಳ್ಳರ ಜೊತೆ ಕೈ ಜೋಡಿಸಿ, ಮರ ಕಡಿಸಿದ ಅರಣ್ಯ ರಕ್ಷಕನಿಗೆ ಅಮಾನತ್ತಿನ ಬದಲು ವರ್ಗಾವಣೆ ಉಡುಗೊರೆ ನೀಡಿದರಾ ಡಿಸಿಎಫ್

ಯಾರೋ ಕಳ್ಳರು ಗ್ರಾಮದ ಲಕ್ಷ್ಮಣ್ ಮತ್ತು ಕೊಟ್ಯಾನ್ ಬ್ಯುಲ್ಡಿಂಗ್ ಸೊಲ್ಯೂಷನ್ ಗೆ ಸೇರಿದ ಟೈಲ್ಸ್​ಗಳನ್ನು ಕದ್ದೊಯ್ದಿದ್ದರು. ಈ ಸಂಬಂಧ ಐಪಿಸಿ 379 ಐಪಿಸಿ ಅಡಿಯಲ್ಲಿ ಕೇಸ್​ ದಾಖಲಾಗಿತ್ತು. ಈ ಸಂಬಂಧ ನಿನ್ನೆ  ಆರೋಪಿತಗಳನ್ನ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ಧಾರೆ. 

ಇದನ್ನು ಸಹ ಓದಿ : ಸಿಟಿ ಸೆಂಟರ್​ ಮಾಲ್​ ಬಳಿ, ಹಳೇ ಹುಡುಗನ ರಂಪಾಟ/ ಹುಡುಗಿಯನ್ನ ಅಡ್ಡಗಟ್ಟಿ ಹಲ್ಲೆ/ ಬೆನ್ನಟ್ಟಿ ಹೋಗಿ ಮೊಬೈಲ್​, ವಾಚ್​ ಕಿತ್ಕೊಂಡು ಹೋದ

ಬಂಧಿತ ಆರೋಪಿಗಳು

  • 1) ನಿರಂಜನ್ @ ನೀತು 26 ವರ್ಷ, ಆಯನೂರು ಶಿವಮೊಗ್ಗ,
  • 2) ಸುನೀಲ ಪಿ, 24 ವರ್ಷ, ಸಂತೆಕಡೂರು ಶಿವಮೊಗ್ಗ,
  • 3) ಲಿಖೇಶ್ ನಾಯ್ಕ್ @ ಬಾಟ್ಲಿ, 51 ವರ್ಷ, ಗಾಡಿಕೊಪ್ಪ ಶಿವಮೊಗ್ಗ ಮತ್ತು
  • 4) ಗಣೇಶ್ ನಾಯ್ಕ್, 34 ವರ್ಷ, ಗಾಡಿಕೊಪ್ಪ

 ಇನ್ನೂ ಬಂಧಿತ ಆರೋಪಿಗಳಿಂದ  ಅಂದಾಜು ಮೌಲ್ಯ 2,00,000/- ರೂ ಮೌಲ್ಯದ ಒಟ್ಟು 190 ಬಾಕ್ಸ್ ಟೈಲ್ಸ್ ಗಳನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಟ್ರಾಕ್ಟರ್ ಅನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. ಆರೋಪಿಗಳು ಪತ್ತೆಯಾಗಿದ್ದು ಹೇಗೆ ಎಂಬುದರ ಮಾಹಿತಿ ಇನ್ನಷ್ಟೆ ಸಿಗಬೇಕಿದೆ. 

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link