ಪ್ರತಿ ಮಂಗಳವಾರದ ಗಾಂಧಿ ಬಜಾರ್‌ ಸಂತೆ ಎತ್ತಂಗಡಿ | ಇನ್ಮೆಲೆ ಎಲ್ಲಿ ಸಂತೆ? | ವಿರೋಧ?

Gandhi Bazaar sante in Shivamogga, shift to the market area near the KSRTC bus depot

ಪ್ರತಿ ಮಂಗಳವಾರದ ಗಾಂಧಿ ಬಜಾರ್‌ ಸಂತೆ ಎತ್ತಂಗಡಿ | ಇನ್ಮೆಲೆ ಎಲ್ಲಿ ಸಂತೆ? | ವಿರೋಧ?
KSRTC bus depot, Gandhi Bazaar sante, Shivamogga,

SHIVAMOGGA | MALENADUTODAY NEWS | Jul 2, 2024  ಮಲೆನಾಡು ಟುಡೆ   

ಹಳೆಯ ಶಿವಮೊಗ್ಗದ ಮಟ್ಟಿಗೆ ಇವತ್ತು ಇನ್ನೊಂದು ಸುದ್ದಿ ಹೊರಬಿದ್ದಿದೆ. ಇವತ್ತು ನಡೆದ ಪಾಲಿಕೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ  ಗಾಂಧಿ ಬಜಾರ್‌ನಲ್ಲಿ ಪ್ರತಿ ಮಂಗಳವಾರ ನಡೆಯುತ್ತಿದ್ದ ಸಂತೆಯನ್ನು ಶಿಫ್ಟ್‌ ಮಾಡುವ ಬಗ್ಗೆ ತೀರ್ಮಾನ ಮಾಡಲಾಗಿದೆ. ಇಂದು ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಶಾಸಕ ಎಸ್‌ಎನ್‌ ಚೆನ್ನಬಸಪ್ಪ ನೇತೃತ್ವದಲ್ಲಿ ನಡೆದಂತಹ ಪ್ರಗತಿ ಪರಿಶೀಲನಾ ಸಭೆಯಲ್ಲಿ  ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. 

ಶಿವಮೊಗ್ಗ ನಗರದ ಗಾಂಧಿ ಬಜಾರ್ ನಲ್ಲಿ  ಪ್ರತಿ ಮಂಗಳವಾರ ನಡೆಯುವ ಸಂತೆಯನ್ನು ನಗರದ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಬಳಿ ಇರುವ ಸಂತೆ ಮೈದಾನಕ್ಕೆ ಸ್ಥಳಾಂತರಿಸಲು ಎಂಎಲ್‌ಎ ಸಭೆಯಲ್ಲಿ ಸೂಚಿಸಿದ್ದಾರೆ ಎನ್ನಲಾಗಿದೆ. ಇನ್ನೂ ಈ ವಿಚಾರಕ್ಕೆ ಪರವಿರೋಧ ಚರ್ಚೆಗಳು ಸಹ ಆರಂಭವಾಗಿದೆ. ಹಳೆಯ ಶಿವಮೊಗ್ಗದ ಭಾಗದ ಜನರಿಗೆ ಹತ್ತಿರದಲ್ಲಿಯೇ ಸಿಗುತ್ತಿದ್ದ ಸಂತೆಗಾಗಿ ಇದೀಗ ಬಸ್‌ ಸ್ಟ್ಯಾಂಡ್‌ ಹಿಂದೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಇದು ಜನರಿಗೆ ಸಮಸ್ಯೆಯಾಗಲಿದೆ ಎಂದು ಹಳೆಯ ಶಿವಮೊಗ್ಗದ ಜನರು ಅಭಿಪ್ರಾಯ ಪಟ್ಟಿದ್ದಾರೆ. 

A decision has been made to shift the weekly Tuesday market held in Gandhi Bazaar, Shivamogga, to the market area near the KSRTC bus depot. This decision was taken during a progress review meeting held at the Shivamogga City Corporation under the leadership of MLA SN Channabasappa.