ಕಾನೂನು ಕಲಿಸಿದ ಗುರುಗಳು ಜಿ.ಆರ್. ಜಗದೀಶ್! ಅಗಲಿದ ಪ್ರೊಫೆಸರ್​ ಜಗ್ಗಣ್ಣ

The guru who taught the law was G.R. Jagadish! Professor Jagganna passes away

ಕಾನೂನು ಕಲಿಸಿದ ಗುರುಗಳು ಜಿ.ಆರ್. ಜಗದೀಶ್!  ಅಗಲಿದ ಪ್ರೊಫೆಸರ್​ ಜಗ್ಗಣ್ಣ
ಕಾನೂನು ಕಲಿಸಿದ ಗುರುಗಳು ಜಿ.ಆರ್. ಜಗದೀಶ್! ಅಗಲಿದ ಪ್ರೊಫೆಸರ್​ ಜಗ್ಗಣ್ಣ

ಕೋರ್ಟ್​ನಲ್ಲಿ ಜಡ್ಜ್​ ಮುಂದೆ ನಿಂತು ವಾದ ಮಾಡಿ ಕೇಸು ಗೆಲ್ಲುವ ವಕೀಲರು ಸಮಾಜದಲ್ಲಿ ಸಾಕಷ್ಟು ಹೆಸರು ಮಾಡುತ್ತಾರೆ. ಕಕ್ಷಿದಾರರ ಹಿತಾಸಕ್ತಿಯನ್ನು ಕಾನೂನಿನಡಿಯಲ್ಲಿ ಕಾಪಾಡುವ ಅಂತಹ ಲಾಯರ್​ಗಳನ್ನು ತಯಾರು ಮಾಡುತ್ತಿದ್ದವರು ಪ್ರೋ ಜಿ.ಆರ್. ಜಗದೀಶ್​. ಶಿವಮೊಗ್ಗದ ಏಕೈಕ ಕಾನೂನು ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದ ಅವರ ಗರಡಿಯಲ್ಲಿ ಶಿವಮೊಗ್ಗದ ಹಲವಾರು ವಕೀಲರು ಕಲಿತಿದ್ಧಾರೆ. ಅಷ್ಟೆಅಲ್ಲದೆ, ಸಮಾಜಮುಖಿಯಾಗಿ ಬೇರೆಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು ಸಹ ಇವರ ಬಳಿಯಲ್ಲಿಯೇ ಕಾನೂನು ಕಲಿತವರು. ಲೆಕ್ಕಕ್ಕೆ ಸಿಗದಷ್ಟು ಮಂದಿ ಕಾನೂನು ಪಾಠದ ಜೊತೆ ಸಂವಿಧಾನದ ಶ್ರೇಷ್ಟತೆಯನ್ನು ಕಲಿಸಿಕೊಟ್ಟ ಅಕ್ಷರಗುರು ಪ್ರೊ ಜಗದೀಶ್​ರವರು ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಬಗ್ಗೆ ಅವರಿಂದ ಕಲಿತು, ವಕೀಲರಾಗಿ ಕೆಲಸ ನಿರ್ವಹಿಸುತ್ತಿರುವ ಕೆ.ಪಿ.ಶ್ರೀಪಾಲ್​​ರವರ ಮಾತುಗಳು ಇಲ್ಲಿದೆ ಓದಿ 

ಶಿವಮೊಗ್ಗದ ಆಟೋಗಳಿಗೆ ಶೀಘ್ರವೇ ಮೀಟರ್​ ಫಿಕ್ಸ್! ADC ಅಳವಡಿಕೆಗೆ ಫೆಬ್ರವರಿ 28 ರ ಡೆಡ್​ಲೈನ್​

ಕಾನೂನು ಕಲಿಸಿದ ಗುರುಗಳು

ಕಾನೂನು ಕಾಲೇಜಿನ ಪ್ರಾಂಶುಪಾಲರು, ನಮ್ಮ ಗುರುಗಳು,   ನಮ್ಮ ಹೋರಾಟದ ಬದುಕಿನ  ಗುರುಗಳು ಆಗಿದ್ದ  ಪ್ರೋ.ಜಿ.ಆರ್.ಜಗದೀಶ್ ರವರು ನಿನ್ನೆ ರಾತ್ರಿ 8-30ಕ್ಕೆ ಹೃದಯಾಘಾತದಿಂದ  ಮೃತಪಟ್ಟಿದ್ದಾರೆ. ನಾನು 1996 ರಲ್ಲಿ  LL.B ಗೆ ಸೇರಿಕೊಂಡಾಗ ಜಗದೀಶ್ ರವರು ನಮಗೆ ಸಂವಿಧಾನ ಪಾಠಮಾಡುತ್ತಿದ್ದ ಉಪನ್ಯಾಸಕರಾಗಿದ್ದರು ಜನಪರ ಜೀವಪರ ಕಾಳಜಿ ಹೊಂದಿದವರು ಲೋಕೇಶ್ ಈಸೂರು ಮತ್ತು ನಮ್ಮ ಇನ್ಜಿತರೆ ಗೆಳೆಯರ ಟೀಮ್ ನ್ನು ಹುರಿದುಂಬಿಸಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದವರು ಮಾನವ ಹಕ್ಕುಗಳ ರಕ್ಷಣೆಮಾಡುವ ಕೆಲಸ ಮಾಡಬೇಕು, ಸಮಾಜಮುಖಿಗಳಾಗಿರಬೇಕು  ಎಂದು ಮಾರ್ಗದರ್ಶನ ನೀಡಿ  ನಮ್ಮನ್ನು ಪ್ರೇರೆಪಿಸುತ್ತಿದ್ದರು.  CLF ಎಂಬ ಸಂಘಟನೆಯನ್ನು  ನಾವು ಹುಟ್ಡುಹಾಕಲು ಮೂಲ ಮಾರ್ಗದರ್ಶಕರು ಇವರೆ,  ಮತ್ತು  CLF (Civil liberty forum) ಎಂಬ ಹೆಸರನ್ನು ಆ  ಸಂಘಟನೆಗೆ ಇಟ್ಟವರು ಅವರೆ,  ನಾನು ಕಾನೂನು ಕಾಲೇಜಿನ ವಿದ್ಯಾರ್ಥಿ ಸಂಘಟನೆಯ ಕಾರ್ಯದರ್ಶಿ ಆಗಿ ನಂತರ ಅಧ್ಯಕ್ಷನಾಗಿದ್ದೆ ಅದಕ್ಕು ಸಹ ಉತ್ತೇಜನ ನೀಡಿದವರು ಗುರುಗಳಾದ ಜಗದೀಶ್ ರವರು.  ಜಗದೀಶ್ ರವರು ಸಂವಿಧಾನದ ಅತ್ಯಂತ  ಅದ್ಬುತ ಉಪನ್ಯಾಸಕರು, ನನ್ನ ಪತ್ನಿಯು ಕೂಡ ಇವರ ಶಿಷ್ಯೆ‌,  ಅವಳಿಗು ಕೂಡ LL.B ಮುಗಿದ ಮೇಲೆ  ಸಂವಿದಾನ ವಿಷಯದಲ್ಲಿ  LLM ಮಾಡಲು ಪ್ರೇರೆಪಿಸಿದವರು. ಉಪನ್ಯಾಸಕರಾಗಿ, ನಂತರ ಲಾ ಕಾಲೇಜು ಪ್ರಾಂಶುಪಾಲರಾಗಿದ್ದ ಜಿ.ಆರ್. ಜಗದೀಶ್ ಸರ್ ರವರು,  KSLU ವಿ.ವಿ. ಕುಲಪತಿಗಳಾಗಿಯು  6 ತಿಂಗಳು ಕೆಲಸ ನಿರ್ವಹಿಸಿದ್ದಾರೆ,  ಸದಾ ಹಸನ್ಮುಖಿಯಾದ ಇವರ ಕಂಚಿನ ಕಂಟದಲ್ಲಿ  ಹೊರಬರುತ್ತಿದ್ದ ಉಪನ್ಯಾಸ  ಎಷ್ಟು ಕೇಳಿದರು ಬೋರ್  ಅನಿಸುತ್ತಿರಲಿಲ್ಲ,  ಇದೆ ಪೆಬ್ರವರಿ ತಿಂಗಳ 28 ಕ್ಕೆ  ನಿವೃತ್ತಿ ಹೊಂದುತ್ತಿದ್ದ ಇವರು  ಮೊನ್ನೆ 9ನೆ ತಾರೀಖು ತಮ್ಮ ಜನ್ಮದಿನಾಚರಣೆ ಆಚರಿಸಿಕೊಂಡಿದ್ದರು.  ಸಮಾಜಮುಖಿ ಚಿಂತನೆಗಳನ್ನು ಹೊಂದಿದ್ದ,   ಸಂವಿಧಾನದಲ್ಲಿ  ಪಾಂಡಿತ್ಯಹೊಂದಿದ್ದ ಗುರುಗಳು ಇನ್ನು ಹಲವು ವರ್ಷ ಬದುಕಿರಬೇಕಿತ್ತು,  ಇವರ ಜ್ಞಾನ ಇನಷ್ಟು ಜನರಿಗೆ  ಹಂಚಿಕೆ ಆಗಬೇಕಿತ್ತು, ಪ್ರೊಫೆಸರ್​ ಆಗಿದ್ದರೂ ಸಹ  ಅವರಿಗೆ ಬಹುಪಾಲು ವಿದ್ಯಾರ್ಥಿಗಳು ಜಗ್ಗಣ್ಣ ಎಂದು ಎಲ್ಲಡೆ ಪ್ರೀತಿಯಿಂದ  ಕರೆಯುತ್ತಿದ್ದರು.  ಇನ್ನು  ನಮ್ಮೊಂದಿಗೆ  ಹಲವು ಕಾಲ ಇರಬೇಕಾದ ನೀವು  ಇಷ್ಟು ಬೇಗ  ನಮ್ಮಗಳನ್ಬು ಅಗಲಿದ್ದು  ನೋವಿನ ಸಂಗಂತಿ,   ಅವರಿಗೆ ಭಾವಪೂರ್ಣ ನಮನಗಳು

                 ಕೆ.ಪಿ.ಶ್ರೀಪಾಲ. ವಕೀಲರು, ಶಿವಮೊಗ್ಗ.

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com