ಶ್ರೀ ಕೋಟೆ ಮಾರಿಕಾಂಬಾ ಜಾತ್ರೆ ದಿನಾಂಕದ ಬಗ್ಗೆ ಹರಿದಾಡುತ್ತಿರುವ ವಾಟ್ಸ್ಯಾಪ್​ ಸುದ್ದಿಯ ಅಸಲಿಯತ್ತು ಇಲ್ಲಿದೆ! ಓದಿ!

fake date of Sri Kote Marikamba Jatra is circulating on social media and the temple committee has clarified this.

ಶ್ರೀ ಕೋಟೆ ಮಾರಿಕಾಂಬಾ ಜಾತ್ರೆ ದಿನಾಂಕದ ಬಗ್ಗೆ ಹರಿದಾಡುತ್ತಿರುವ  ವಾಟ್ಸ್ಯಾಪ್​ ಸುದ್ದಿಯ ಅಸಲಿಯತ್ತು ಇಲ್ಲಿದೆ! ಓದಿ!

KARNATAKA NEWS/ ONLINE / Malenadu today/ Nov 15, 2023 SHIVAMOGGA NEWS

Shivamogga | Malnenadutoday.com | ಶಿವಮೊಗ್ಗ ಮಾರಿಕಾಂಬಾ ಜಾತ್ರೆಗೆ ದಿನಾಂಕ ನಿಗದಿಯಾಯ್ತೆ? ಹೀಗೊಂದು ಪ್ರಶ್ನೆ ಮೂಡುವುದಕ್ಕೆ ಕಾರಣವಾಗಿದ್ದು ವಾಟ್ಸ್ಯಾಪ್​ನಲ್ಲಿ ಹರಿದಾಡುತ್ತಿರುವ ಮೆಸೇಜ್​. 

ಶಿವಮೊಗ್ಗದ ಮಾರಿಕಾಂಬಾ ದೇವಿಯ ಜಾತ್ರೆಯು ಮುಂದಿನ ವರ್ಷ ಮಾರ್ಚ್​ 12 ರಿಂದ 16 ನೇ ತಾರೀಖಿನವರೆಗೂ ನಡೆಯಲಿದೆ ಎಂಬಂತಹ ಮೆಸೇಜ್​ವೊಂದು ವಾಟ್ಸ್ಯಾಪ್​ಗಳಲ್ಲಿ ಹರಿದಾಡುತ್ತಿದೆ. ಮೇಲಾಗಿ ಇದು ಹೆಚ್ಚು ಫಾರವರ್ಡ್ ಆಗುತ್ತಿದೆ.

READ : ನಿಮಗೆ ಗೊತ್ತಾ | ಕರಿಮರದ ಬೇಟೆ ಮತ್ತು ಸಾಗರದಲ್ಲಿ ನಡೆದಿದ್ದ ವಾಚರ್ ಕೊಲೆ & 100 KG ಶ್ರೀಗಂಧ ದರೋಡೆ ಕೇಸ್​ಗೆ ಏನಿದು ಲಿಂಕ್! JP FLASHBACK



ಈ ಹಿನ್ನೆಲೆಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಸಂತೋಷ್ ಭಾರದ್ವಾಜ್ ಸ್ವಷ್ಟನೆ ನೀಡಿದ್ದಾರೆ. ಕೆಲವೊಂದು ವಾಟ್ಸ್ಯಾಪ್ ಗ್ರೂಪ್​ಗಳಲ್ಲಿ ಶ್ರೀ ಕೋಟೆ ಮಾರಿಕಾಂಬಾ ದೇವಿ ಜಾತ್ರೆಯು ಫಿಕ್ಸ್ ಆಗಿದೆ ಎಂಬ ಸಂದೇಶ ರವಾನೆಯಾಗುತ್ತಿದೆ. ಆದರೆ ಇದು ಸುಳ್ಳು ಮಾಹಿತಿ ಎಂದು ತಿಳಿಸಿದ್ದಾರೆ. ಈ ಸಂಬಂಧ ಯಾವುದೇ ದಿನಾಂಕ ನಿಕ್ಕಿಯಾಗಿಲ್ಲ ಎಂದಿದ್ದಾರೆ. 

ಮಾರಿಕಾಂಬಾ ದೇವಸ್ಥಾನದ ಮಂಡಳಿ ಸದಸ್ಯರು ಈ ಸಂಬಂಧ ಸಭೆ ಸೇರಿ ಸಮಗ್ರವಾಗಿ ಚರ್ಚಿಸುತ್ತಾರೆ. ಆನಂತರ ಅಂತಿಮವಾಗಿ ಎಲ್ಲಾ ಅವಕಾಶಗಳನ್ನು ಅಳೆದು ತೂಗಿ ಮಾರಿ ಜಾತ್ರೆಯ ದಿನಾಂಕವನ್ನು ನಿಗದಿ ಪಡಿಸುತ್ತಾರೆ. ಆದರೆ ಈ ನಿಟ್ಟಿನಲ್ಲಿ ಯಾವುದೇ ಪ್ರಕ್ರಿಯೆಗಳು ಇದುವರೆಗೂ ಆರಂಭವಾಗಿಲ್ಲ.