ಶಿವಮೊಗ್ಗದ ಆಟೋಗಳಿಗೆ ಶೀಘ್ರವೇ ಮೀಟರ್​ ಫಿಕ್ಸ್! ADC ಅಳವಡಿಕೆಗೆ ಫೆಬ್ರವರಿ 28 ರ ಡೆಡ್​ಲೈನ್​

Shimoga autos to get meter fixed soon! February 28 deadline for ADC installation

ಶಿವಮೊಗ್ಗದ ಆಟೋಗಳಿಗೆ ಶೀಘ್ರವೇ ಮೀಟರ್​ ಫಿಕ್ಸ್!  ADC  ಅಳವಡಿಕೆಗೆ ಫೆಬ್ರವರಿ 28 ರ ಡೆಡ್​ಲೈನ್​
ಶಿವಮೊಗ್ಗದ ಆಟೋಗಳಿಗೆ ಶೀಘ್ರವೇ ಮೀಟರ್​ ಫಿಕ್ಸ್! ADC ಅಳವಡಿಕೆಗೆ ಫೆಬ್ರವರಿ 28 ರ ಡೆಡ್​ಲೈನ್​

MALENADUTODAY.COM | SHIVAMOGGA NEWS 

ಶಿವಮೊಗ್ಗ ನಗರದ ಆಟೋಗಳಿಗೆ AD  ಕಾರ್ಡ್​ ವಿತರಿಸಿದ ಶಿವಮೊಗ್ಗ ಪೊಲೀಸರು, ಫೆಬ್ರವರಿ 28 ರೊಳಗೆ ಡಿಸ್​ಪ್ಲೇ ಕಾರ್ಡ್​ ಅಂಟಿಸಬೇಕು ಎಂದು ಸೂಚಿಸಿದ್ದಾರೆ. ಈ ಸಂಬಂಧ ನಿನ್ನೆ  (13-02-2023  ರಂದು) ಶಿವಮೊಗ್ಗ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ, ಪೊಲೀಸ್ ಇಲಾಖಾ ವತಿಯಿಂದ Auto Display Card ಗಳ ವಿತರಣಾ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿತ್ತು. ಎಸ್​ಪಿ ಮಿಥುನ್ ಕುಮಾರ್ ಜಿ.ಕೆ ಐಪಿಎಸ್,  ಶಿವಮೊಗ್ಗ ನಗರದ ಆಟೋ ಚಾಲಕರಿಗೆ ಮತ್ತು ಮಾಲೀಕರಿಗೆ Auto Display Card ಗಳನ್ನು ವಿತರಣೆ ಮಾಡಿದರು

BREAKING : ಶಿವಮೊಗ್ಗ ಸಿಟಿಯಲ್ಲಿ ಮುಂದುವರಿದ ಪೊಲೀಸರ ದಿಢೀರ್ ನೈಟ್​​ ಕಾರ್ಯಾಚರಣೆ! ಪುಂಡರಿಗೆ ವಾರ್ನಿಂಗ್​

ಈ ವೇಳೆ ಮಾತನಾಡಿದ ಅವರು ಪ್ರತೀ ಆಟೋಗಳಿಗೆ ಮೀಟರ್ ಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಅನಿವಾರ್ಯ ಕಾರಣಗಳಿಂದ ಮೀಟರ್ ಕಡ್ಡಾಯ ಎನ್ನುವುದು ಮುಂದಕ್ಕೆ ಹೋಗುತ್ತಿದೆ ಎಂದರು, ಇನ್ನೂ 28-02-2023ರ ಒಳಗಾಗಿ ಪ್ರತೀ ಆಟೋ ಚಾಲಕರು / ಮಾಲೀಕರು ತಮ್ಮ ತಮ್ಮ ಆಟೋಗಳಿಗೆ Auto Display Card ಗಳನ್ನು ಪಡೆದುಕೊಂಡು ಅಳವಡಿಸಿಕೊಳ್ಳಬೇಕು.  ಇಲ್ಲದೇ ಹೋದಲ್ಲಿ ಅಂತಹ ಆಟೋ ಚಾಲಕರ / ಮಾಲೀಕರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. .Auto Display Card ಗಳಲ್ಲಿ ಆಟೋದ ನೊಂದಣಿ ಸಂಖ್ಯೆ, ಪೊಲೀಸ್ ಕ್ರಮ ಸಂಖ್ಯೆ, ಮಾಲೀಕರ / ಚಾಲಕರ ಹೆಸರು ವಿಳಾಸ, ಆಟೋ ಬಾಡಿಗೆ ದರ ಮತ್ತು ಕ್ಯೂ ಆರ್ ಕೋಡ್ ನಲ್ಲಿ ಸಂಪೂರ್ಣ ವಿವರಗಳು ಇರುವುದರಿಂದ, ಸಾರ್ವಜನಿಕರಿಗೆ ಪ್ರಯಾಣದ ಸಮಯದಲ್ಲಿ ಅನುಕೂಲವಾಗುತ್ತದೆ ಎಂದು ಮಾಹಿತಿ ನೀಡಿದ್ರು. 

ಎಂಸಿಎ ಓದಲು ಮದುವೆ ಕಾಟ! ನಿಶ್ಚಿತಾರ್ಥವಾದ ಯುವತಿ, ಹುಡುಗ ಸಾಯಿ ಎಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಳೇ?

ಇನ್ನೂ ಹೆಚ್ಚುವರಿ ಪೋಲಿಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರಡ್ಡಿ ಮಾತನಾಡ್ತಾ Auto Display Card ಗಳನ್ನು ಅಳವಡಿಸಿ ಕೊಳ್ಳುವುದು ಆಟೋ ಚಾಲಕರು ಹಾಗೂ  ಮಾಲೀಕರುಗಳ ಕರ್ತವ್ಯವಾಗಿರುತ್ತದೆ. .ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿರುವ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು, ಪ್ರತಿಯೊಬ್ಬ ಆಟೋ ಚಾಲಕರುಗಳು  ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದ್ರು. 

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com