ಫೆಂಡ್ಸ್​ನ್ನ ಮನೆಗೆ ಕರೆದುಕೊಂಡು ಬರಬೇಡ ಎಂದ ತಂಗಿ ತಲೆಗೆ ಪಾತ್ರೆಯಿಂದ ಕುಟ್ಟಿದ ಅಣ್ಣ! ಮನೆ ಬಿಟ್ಟು ಹೋದ ತಂಗಿ

ಹಂಚಿಕೊಳ್ಳಿ
WhatsApp Facebook X Telegram

MALENADUTODAY.COM | SHIVAMOGGA NEWS

ಶಿವಮೊಗ್ಗ ನಗರದ ಠಾಣೆಯೊಂದರಲ್ಲಿ ಅಪ್ರಾಪ್ತೆಯೊಬ್ಬಳು ಮನೆ ಬಿಟ್ಟುಹೋಗಿರುವ ಬಗ್ಗೆ ದೂರುದಾಖಲಾಗಿದೆ. ಮನೆಯಲ್ಲಿ ಅಣ್ಣನ ಜೊತೆಗಿನ ಜಗಳವೇ ಮನೆ ಬಿಟ್ಟು ಹೋಗಲು ಕಾರಣ ಎನ್ನಲಾಗಿದೆ. ಈ ಹಿಂದೆ ಸಹೋದರನ ಸ್ನೇಹಿತರು ಮನೆಗೆ ಬರುತ್ತಿದ್ದುದ್ದನ್ನ ಕಾಣಿಯಾಗಿರುವ ಅಪ್ರಾಪ್ತೆ ಆಕ್ಷೇಪಿಸಿದ್ದಳಂತೆ. ಇದೇ ಕಾರಣಕ್ಕೆ ಅಣ್ಣ, ತಂಗಿಯ ತಲೆಮೇಲೆ ಪಾತ್ರೆ ಕುಟ್ಟಿ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಈ ಸಂಬಂಧ ತಾಯಿ ಬಳಿ ಹೇಳಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಅಪ್ರಾಪ್ತೆ ಮನೆ ಬಿಟ್ಟುಹೋಗಿದ್ದಾಳೆ ಎಂದು ದೂರಲಾಗಿದೆ. 

ಶಿವಮೊಗ್ಗದ ಆಟೋಗಳಿಗೆ ಶೀಘ್ರವೇ ಮೀಟರ್​ ಫಿಕ್ಸ್! ADC ಅಳವಡಿಕೆಗೆ ಫೆಬ್ರವರಿ 28 ರ ಡೆಡ್​ಲೈನ್​

ಅಪರಿಚಿತ ವ್ಯಕ್ತಿ ಸಾವು

ಸಾಗರ ತಾಲ್ಲೂಕಿನ ಕರ್ಕಿಕೊಪ್ಪ ಗ್ರಾಮದ ಅನಾನಸ್ ಪ್ಲಾಟಿನ ಶೆಡ್‍ನಲ್ಲಿ ಫೆ.10 ರಂದು ಸುಮಾರು 50 ರಿಂದ 55 ವರ್ಷಧ ಅನಾಮಧೇಯ ವ್ಯಕ್ತಿಯು ಮೃತಪಟ್ಟಿರುತ್ತಾನೆ.     ಮೃತ ವ್ಯಕ್ತಿಯು 5.2 ಅಡಿ ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿರುತ್ತಾನೆ. ಈತನ ವಾರಸುದಾರರು ಯಾರಧರೂ ಇದ್ದಲ್ಲಿ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ದೂ.ಸಂ: 08183-226194, 9480803361 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

BREAKING : ಶಿವಮೊಗ್ಗ ಸಿಟಿಯಲ್ಲಿ ಮುಂದುವರಿದ ಪೊಲೀಸರ ದಿಢೀರ್ ನೈಟ್​​ ಕಾರ್ಯಾಚರಣೆ! ಪುಂಡರಿಗೆ ವಾರ್ನಿಂಗ್​

ಯುಜಿಸಿ-ನೆಟ್ ಮತ್ತು ಕೆ-ಸೆಟ್ ಪರೀಕ್ಷೆಗೆ ತರಬೇತಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ನವದೆಹಲಿಯ ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗದವರು ನಡೆಸಲಿರುವ ಕಿರಿಯ ಶಿಷ್ಯವೇತನ ಸಂಶೋಧಕರ ಸಹಾಯಕರ(ಜೆಆರ್‍ಎಫ್) ಮತ್ತು ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕರ ರಾಷ್ಟ್ರ ಮಟ್ಟದ ಅರ್ಹತಾ ಪರೀಕ್ಷೆ (ಯುಜಿಸಿ-ನೆಟ್)ಗೆ ಮತ್ತು ಕರ್ನಾಟಕ ಸರ್ಕಾರವು ನಡೆಸಲಿರುವ ರಾಜ್ಯ ಮಟ್ಟದ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್)ಗೆ 45 ದಿನಗಳ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ. 

ಆಸಕ್ತರು ದಿನಾಂಕ: 15.02.2023ರೊಳಗಾಗಿ ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ದ ಕಛೇರಿಯಲ್ಲಿ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯೊಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ 0821-2515944/9964760090 ನ್ನು ಸಂಪರ್ಕಿಸಬಹುದೆಂದು ಕರಾಮುವಿ ಕುಲಸಚಿವರಾದ ಪ್ರೊ. ಕೆ.ಎಲ್.ಎನ್.ಮೂರ್ತಿ ತಿಳಿಸಿದ್ದಾರೆ.

ಸೇವಾಲಾಲ್​ ಜಯಂತಿ ಆಚರಣೆ 

ಇದೇ ಫೆಬ್ರವರಿ  15 ರ ಬುಧವಾರ ಸಂತ ಶ್ರೀ ಸೇವಾಲಾಲ್ ಜಯಂತಿ ಯನ್ನು  ಸರ್ಕಾರದ ಹಾಗೂ ನಿರ್ದೇಶನಾಲಯದ  ಆದೇಶದ ಪ್ರಕಾರ  ಕುವೆಂಪು ರಂಗಮಂದಿರ, ಶಿವಮೊಗ್ಗದಲ್ಲಿ ಪೂರ್ವಾಹ್ನ 11-00 ಘಂಟೆಗೆ ಜಿಲ್ಲಾಡಳಿತದ ವತಿಯಿಂದ ಆಚರಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಿಳಿಸಿದೆ. 

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor