25 ಲಕ್ಷ ರೂಪಾಯಿ ಕೊಟ್ರೆ, 50 ಲಕ್ಷ ಕೊಡುವ ಆಮೀಷವೊಂದಕ್ಕೆ ಬಲಿಯಾದ ವ್ಯಕ್ತಿಯೊಬ್ಬರು 10 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದಿದೆ. ಇಲ್ಲಿನ ಪೇಪರ್ ಟೌನ್ ಲಿಮಿಟ್ನಲ್ಲಿ, ದಕ್ಷಿಣ ಕನ್ನಡ ನಿತೀಶ್ ಪಂಡಿತ್ ಎಂಬವರು ಹಣ ಕಳೆದುಕೊಂಡಿದ್ದಾರೆ.
ಶಿವಮೊಗ್ಗದ ಆಟೋಗಳಿಗೆ ಶೀಘ್ರವೇ ಮೀಟರ್ ಫಿಕ್ಸ್! ADC ಅಳವಡಿಕೆಗೆ ಫೆಬ್ರವರಿ 28 ರ ಡೆಡ್ಲೈನ್
ನಡೆದಿದ್ದೇನು?
ಈ ಘಟನೆ ಚಿಕ್ಕಮಗಳೂರು, ಶಿವಮೊಗ್ಗ, ಹಾಗೂ ದಕ್ಷಿಣಕನ್ನಡದಲ್ಲಿ ಲಿಂಕ್ ಆಗುತ್ತದೆ. ಚಿಕ್ಕಮಗಳೂರಿನ ಜಾಫರ್ ಎಂಬವರ ಬಳಿಯಲ್ಲಿ 40 ಕೋಟಿ ಇದೆ. ಆದರೆ ಅಷ್ಟೊಂದು ಹಣ ಕೇವಲ 100 ರೂಪಾಯಿ ನೋಟಿನಲ್ಲಿದೆ. ಅದೇ ದೊಡ್ಡ ಸಮಸ್ಯೆಯಾಗಿದ್ದು, ಹಾಗಾಗಿ ಅವರು 25 ಲಕ್ಷ ರೂಪಾಯಿಯನ್ನು 500 ರೂಪಾಯಿ ನೋಟಿನಲ್ಲಿ ಕೊಟ್ಟರೆ, 50 ಲಕ್ಷ ರೂಪಾಯಿಯನ್ನು ನೂರು ರೂಪಾಯಿ ನೋಟಿನಲ್ಲಿ ಕೊಡ್ತಾರೆ ಎಂದು ಜಗದೀಶ್ ಎಂಬಾತ ನಿತೀಶ್ ಎಂಬವರಿಗೆ ಹೇಳಿದ್ದನಂತೆ. ಈ ಸಂಬಂಧ ಒಂದೆರಡು ಮಾತುಕತೆಯು ಆಗಿದೆ. ಆದರೆ ತಮ್ಮ ಹತ್ತರ 25 ಲಕ್ಷವಿಲ್ಲ ಎಂದಿದ್ದ ನಿತೀಶ್ ಕೊನೆಗೆ ತಮ್ಮ ಕಂಪನಿಯ ಮ್ಯಾನೇಜರ್ ಗೆ ಹೇಳಿ 10 ಲಕ್ಷ ರೂಪಾಯಿ ಅಡ್ಜೆಸ್ಟ್ ಮಾಡಿದ್ದಾರೆ. ಆನಂತರ ಅದನ್ನ ಕೊಡಲು ಭದ್ರಾವತಿಯ ಸ್ಥಳವೊಂದರಲ್ಲಿ ಬಂದಿದ್ದಾರೆ. ಈ ವೇಳೆ ಖುದ್ದು ಜಾಫರ್ ಎಂಬಾತ ನೀಡಿದ್ದ ಹಣದ ಸೂಟ್ಕೇಸ್ನೋಡಿದ್ದಾರೆ. ಅದರಲ್ಲಿ ಕಟ್ ಕಟ್ ನಲ್ಲಿದ್ದ ನೂರು ರೂಪಾಯಿ ನೋಡಿದ್ದ ನಿತೀಶ್ಗೆ ಜಾಫರ್ ಕಟ್..ದೊಡ್ಡದಿದೆ ಆಮೇಲೆ ಎಣಿಸಿಕೊಳ್ಳಿ ಎಂದಿದ್ದಾರೆ. ಸರಿ ಎಂದು ತಾವು ತಂದಿದ್ದ 10 ಲಕ್ಷ ರೂಪಾಯಿಯನ್ನು ಜಾಫರ್ ಮತ್ತು ಜಗದೀಶ್ಗೆ ಕೊಟ್ಟು ಹೊರಟಿದ್ದಾರೆ. ಆಮೇಲೆ ನೋಡಿದರೆ, ಆತ ಕೊಟ್ಟ ಸೂಟ್ಕೇಸ್ನಲ್ಲಿ ಕೇವಲ 14 ಸಾವಿರ ರೂಪಾಯಿ ಮಾತ್ರ ನೂರು ರೂಪಾಯಿ ನೋಟು ಇರುವುದು ಗೊತ್ತಾಗಿದೆ. ಉಳಿದದ್ದು ನ್ಯೂಸ್ ಪೇಪರ್ ಪೀಸ್ ಎಂಬುದು ತಿಳಿದಿದೆ. ತಕ್ಷಣ ಪೇಪರ್ ಟೌನ್ ಪೊಲೀಸರಿಗೆ ಕಂಪ್ಲೆಂಟ್ ನೀಡಿದ್ದಾರೆ ನಿತೀಶ್.. ಸದ್ಯ ಪೊಲೀಸರು ತನಿಖೆ ನಡೆಸ್ತಿದ್ದಾರೆ.
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
